Publish Date: Wed, 20 May 2009 (21:57 IST)
Updated Date: Tue, 14 Apr 2009 (13:13 IST)
ಮುಂಬೈ: ಕ್ರಿಕೆಟ್ ಆಧರಿತ ಬಾಲಿವುಡ್ ಸಿನಿಮಾ 'ಹೂಕ್ ಯಾ ಕ್ರುಕ್' ಚಿತ್ರದಲ್ಲಿ ಟೀಮ್ ಇಂಡಿಯಾ ನಾಯಕ ಮಹೇಂದ್ರ ಸಿಂಗ್ ಧೋನಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆಯೇ? ಈ ಬಗ್ಗೆ ಮಾತನಾಡುತ್ತಾ ನಿರ್ದೇಶಕ ಜಾನಿ ಬ್ರಾವೋ, "ನಮ್ಮ ಚಿತ್ರದಲ್ಲಿ ಧೋನಿಯವರದ್ದು ಮಹತ್ವದ ಪಾತ್ರ. ಅಂದರೆ ಚಿತ್ರದಲ್ಲಿ ಅವರ ಹೆಸರನ್ನು ಲೆಕ್ಕವಿಲ್ಲದಷ್ಟು ಸಲ ಬಳಸುತ್ತಿದ್ದೇವೆ" ಎಂದಿದ್ದಾರೆ. ಈ ಚಿತ್ರದ ನಾಯಕ ಜಾನ್ ಅಬ್ರಹಾಂ ಹೇಳಿ ಕೇಳಿ ಧೋನಿ ಗೆಳೆಯ. ಜಾನ್ ಕೂಡ ಈ ಬಗ್ಗೆ ಧೋನಿ ಜತೆ ಯಾವುದೇ ಮಾತುಕತೆ ನಡೆಸಿಲ್ಲ. ಹಾಗೊಂದು ವೇಳೆ ಧೋನಿ ಒಪ್ಪಿಕೊಂಡರೆ ಸಂತೋಷ ಎಂದು ಅವರು ತಿಳಿಸಿದ್ದಾರೆ.