ಜಾನ್ ಅಬ್ರಾಹಂ ಅರ್ಥಶಾಸ್ತ್ರ ಪದವಿಧರ
Publish Date: Thu, 20 Jun 2013 (11:39 IST)
Updated Date: Thu, 20 Jun 2013 (11:38 IST)
ಹಿಂದಿ ಚಿತ್ರತಾರೆಯರು ವೈಭವಯುತ ಜೀವನ ನಡೆಸುವವರು, ಎಷ್ಟೋ ಮಂದಿಗೆ ಪತ್ರಿಕಾಗೋಷ್ಠಿಯಲ್ಲಿ ಸರಿಯಾಗಿ ಮಾತನಾಡಲು ಬರುವುದಿಲ್ಲ ಎಂದು ಅಂದುಕೊಂಡಿದ್ದರೆ ಅದು ನಿಮ್ಮ ತಪ್ಪು. ಹಿಂದಿ ಸ್ಟಾರ್ಗಳಲ್ಲಿ ಬಹುತೇಕರು ಡಬ್ಬಲ್ ಡಿಗ್ರಿ ಪಡೆದವರೇ. ಅವರ ಬಗ್ಗೆ ಕಿರು ಮಾಹಿತಿ ಇಲ್ಲಿದೆ ನೋಡಿ.ಬಾಲಿವುಡ್ನ ಹಾಟ್ ಹೀರೊ ಜಾನ್ ಅಬ್ರಾಹಂ ಜೈಹಿಂದ್ ಕಾಲೇಜಿನಲ್ಲಿ ಅರ್ಥಶಾಸ್ತ್ರದಲ್ಲಿ ಪದವಿ ಪಡೆದಿದ್ದಾರೆ. ನಂತರ ಮ್ಯಾನೇಜ್ಮೆಂಟ್ ವಿಜ್ಞಾನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ನಟಿ ಸೋನಂ ಕಪೂರ್ ಸಿಂಗಪುರದಲ್ಲಿರುವ ಯುನೈಟೆಡ್ ವರ್ಲಡ್ ಕಾಲೇಜ್ ಆಫ್ ಸೌತ್ ಈಸ್ಟ್ ಏಷ್ಯಾದಲ್ಲಿ ಪದವಿ ಪಡೆದಿದ್ದಾರೆ. ಬಳಿಕ ಈಸ್ಟ್ ಲಂಡನ್ ವಿವಿಯಿಂದ ರಾಜನೀತಿ ಶಾಸ್ತ್ರ ಹಾಗೂ ಅರ್ಥಶಾಸ್ತ್ರ ವಿಷಯವನ್ನೂ ಅಧ್ಯಯನ ಮಾಡಿದ್ದಾರೆ.ಮುಂಬೈನ ಶ್ರೀಮತಿ ನಾಥಿ ಬಾಯಿ ದಾಮೋದರೆ ಥಾಕರೆ ಮಹಿಳಾ ವಿವಿಯಲ್ಲಿ ಫ್ಯಾಶನ್ ಡಿಸೈನಿಂಗ್ ಕೋರ್ಸನಲ್ಲಿ ಸೋನಾಕ್ಷಿ ಸಿನ್ಹಾ ಪದವಿ ಪಡೆದಿದ್ದಾರೆ. ವಿಜ್ಞಾನ ಹಾಗೂ ಕಲೆ ವಿಭಾಗದಲ್ಲಿ ಡಬಲ್ ಡಿಗ್ರಿ ಪಡೆದಿರುವ ಅಮಿತಾಭ್ ಬಚ್ಚನ್ ದೆಹಲಿ ಕಿರೊರಿ ಮಾಲ್ ಕಾಲೇಜಿನಲ್ಲಿ ಪದವಿ ಪಡೆದಿದ್ದಾರೆ. ಪ್ರೀತಿ ಜಿಂಟಾ ಇಂಗ್ಲಿಷ್ ಹಾನರ್ಸ ಡಿಗ್ರಿ ಪಡೆದ ಬಳಿಕ ಕ್ರಿಮಿನಲ್ ಸೈಕಾಲಜಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಾರ್ಕೆಟಿಂಗ್ ವಿಷಯದಲ್ಲಿ ಪದವಿ ಪಡೆದಿರುವ ರಣದೀಪ್ ಹೂಡಾ ಬ್ಯುಸಿನೆಸ್ ಮ್ಯಾನೇಜ್ಮೆಂಟ್ ಹಾಗೂ ಸಂಪನ್ಮೂಲ ನಿರ್ವಹಣೆ ವಿಷಯದಲ್ಲಿ ಆಸ್ಟ್ರೇಲಿಯಾ ವಿವಿಯಿಂದ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಸೋಹಾ ಆಲಿ ಖಾನ್ ಅಂತರರಾಷ್ಟ್ರೀಯ ವ್ಯವಹಾರಗಳ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ಹಾಗೂ ಪೊಲಿಟಿಕಲ್ ಸೈನ್ಸ್ನಿಂದ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ವಿಲನ್ ಪಾತ್ರಗಳನ್ನು ಸಮರ್ಥವಾಗಿ ನಿಭಾಯಿಸುವ ಸೋನುಸೂದ್ ಯಶವಂತ್ರಾವ್ ಚವಾಣ್ ಕಾಲೇಜ್ ಆಫ್ ಎಂಜಿನಿಯರಿಂಗ್ನಲ್ಲಿ ಎಲೆಕ್ಟ್ರಾನಿಕ್ಸ್ ವಿಷಯದಲ್ಲಿ ಎಂಜಿನಿಯರಿಂಗ್ ಪದವಿ ಪಡೆದಿದ್ದಾರೆ.ಎಲೆಕ್ಟ್ರಾನಿಕ್ಸ್ ಪದವಿ ಪಡೆದಿರುವ ಮಾಧವನ್ ಮಹಾರಾಷ್ಟ್ರದ ಶ್ರೇಷ್ಠ ವಿದ್ಯಾರ್ಥಿ ಪ್ರಶಸ್ತಿ ಕೂಡಾ ಗಳಿಸಿದ್ದಾರೆ. ಕ್ಯೂಟ್ ಬಾಯ್ ಸಿದ್ದಾರ್ಥ ಮುಂಬೈನ ಎಸ್ಪಿ ಜೈನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಹಾಗೂ ರಿಸರ್ಚನಿಂದ ಎಂಬಿಎ ಪದವಿ ಪಡೆದಿದ್ದಾರೆ. ಬಾಲಿವುಡ್ನ ಬಹುತೇಕ ತಾರೆಯರು ಉನ್ನತ ಶಿಕ್ಷಣ ಮುಗಿಸಿದವರೇ. ಹಾಗಾಗಿ ಇನ್ನು ಮುಂದೆ ಬಾಲಿವುಡ್ ಸ್ಟಾರ್ಗಳ ಬಗ್ಗೆ ಮಾತನಾಡುವಾಗ ಎಚ್ಚರಿಕೆಯಿಂದಿರಿ ಅಷ್ಟೇ!