ಜಾನ್ ಅಬ್ರಹಾಂ ಜೊತೆಯಾದ ಪ್ರಿಯ ರಾಂಚಲ್
, ಶನಿವಾರ, 4 ಜನವರಿ 2014 (10:29 IST)
ಬಾಲಿವುಡ್ ಮೋಸ್ಟ್ ಸೆಕ್ಸಿಯಸ್ಟ್ ನಟ ಜಾನ್ ಅಬ್ರಹಾಂ ಬಾಲಿವುಡ್ ಹಾಟೆಸ್ಟ್ ನಟಿ ಬಿಪಾಸ ಬಸು ಜೊತೆ ಅನೇಕ ವರ್ಷಗಳ ಕಾಲ ಲವ್ವೆರಿಯಾದಲ್ಲಿ ಇದ್ದು ಬಳಿಕ ಇಬ್ಬರಲ್ಲೂ ಮನಸ್ತಾಪ ಉಂಟಾಗಿ ಬೇರೆ ಆಗಿದ್ದರು. ಗಂಡ ಹೆಂಡತಿಯರಂತೆ ಬದುಕುತ್ತಿದ್ದ ಈ ಜೋಡಿಯ ಮದುವೆ ಯಾವಾಗ ಎನ್ನುವ ಪ್ರಶ್ನೆ ಜನರ ಮನದಲ್ಲಿ ಉಳಿದೆ ಹೋಯಿತು. ಆದರೆ ಅವರಿಬ್ಬರೂ ಒಟ್ಟಿಗೆ ಇದ್ದು ಸಾಕಾಗಿ ಬೇರೆ ಬೇರೆ ದಾರಿ ನೋಡಿ ಕೊಂಡರು. ಆ ಬಳಿಕ ಜಾನ್ ಮತ್ತೊಬ್ಬ ಹುಡುಗಿಗೆ ಪ್ರೇಮ ಪಾಠ ಹೇಳಿಕೊಡುತ್ತಿದ್ದಾರೆ ಎನ್ನುವ ಸುದ್ದಿ ಇತ್ತು. ಆದರೆ ಈಗ ಇವರಿಬ್ಬರು ಮದುವೆ ಆದ ಬಗ್ಗೆ ಸ್ವಯಂ ಜಾನ್ ಅವರು ಸೋಶಿಯಲ್ ಮೀಡಿಯಾ ಟ್ವಿಟ್ಟರ್ ನಲ್ಲಿ ಹೇಳಿದ್ದಾರೆ. ಖಾಸಗಿ ಕಾರ್ಯಕ್ರಮದಲ್ಲಿ ಈ ಜೋಡಿ ತಮ್ಮ ಆಪ್ತವಲಯದವರ ಮುಂದೆ ಮದುವೆ ಆಗಿದ್ದಾರೆ. ಈಗ ಜಾನ್ ತನ್ನ ಬಾಳಸಂಗಾತಿ ಪ್ರಿಯಾ ರಾಂಚಲ್ ಜೊತೆಯಲಿ ಅಮೆರಿಕದಲ್ಲಿ ಇದ್ದಾರೆ. ಮುಂಬೈ ನಲ್ಲಿ ಇನ್ವೆಸ್ಟರ್ ಬ್ಯಾಂಕರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಪ್ರಿಯಾ. ಇವರಿಬ್ಬರ ನಡುವೆ ಪ್ರೇಮ ವ್ಯವಹಾರ 2010 ರಿಂದ ನಡೆದಿತ್ತು .ಅದು ಈಗ ಮದುವೆ ಆಗುವುದರ ಮೂಲಕ ಹೊಸ ಬಾಂಧವ್ಯಕ್ಕೆ ನಾಂದಿ ಹಾಡಿದೆ.