Article Bollywood Gossips %e0%b2%9c%e0%b2%be%e0%b2%a8%e0%b2%bf %e0%b2%b2%e0%b2%bf%e0%b2%b5%e0%b3%8d%e0%b2%b9%e0%b2%b0%e0%b3%8d %e0%b2%85%e0%b2%82%e0%b2%a4%e0%b2%b0%e0%b2%82%e0%b2%97 %e0%b2%ac%e0%b2%b9%e0%b2%bf%e0%b2%b0%e0%b2%82%e0%b2%97 107062000014_1.htm

Daily Horoscope

Select Your Language

Notifications

webdunia
webdunia
webdunia
webdunia

ಜಾನಿ ಲಿವ್ಹರ್ ಅಂತರಂಗ- ಬಹಿರಂಗ

ಹಾಸ್ಯ ಕಲಾವಿದ
ಎರಡು ದಶಕಗಳಿಂದ ಬಾಲಿವುಡ್‌ನಲ್ಲಿ ಕಾಮೆಡಿಯನ್ ಪಾತ್ರಗಳನ್ನು ಅದ್ಬುತವಾಗಿ ಮಾಡುತ್ತ ನಗಿಸುವುದರಲ್ಲಿ ತೃಪ್ತಿ ಕಾಣುತ್ತಿರುವ ಹಿರಿಯ ಹಾಸ್ಯ ಕಲಾವಿದ ಜಾನಿ ಲಿವರ್ ಕಳೆದ ಸುಮಾರು ದಿನಗಳಿಂದ ತನ್ನ ಹಾಸ್ಯ ಅಭಿನಯ ಏಕತಾನತೆಯಿಂದ ಕೂಡಿದೆ ಎಂದು ಹೇಳುತ್ತಾರೆ.

ಮಾದ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ತನಗೆ ಅದೇ ಹಳತಾದ ತಂತ್ರಗಳನ್ನು ಉಪಯೋಗಿಸು ಎಂದು ನಿರ್ದೇಶಕರ ಒತ್ತಾಯದಿಂದಾಗಿ ಹೊಸತನ್ನು ಪ್ರೇಕ್ಷಕ ಮಹಾಶಯನಿಗೆ ನೀಡಲಾಗುತ್ತಿಲ್ಲ ಎಂದು ಅಲವತ್ತುಗೊಂಡಿದ್ದಾರೆ.

ಬಾಲಿವುಡ್ ಚಿತ್ರಗಳಲ್ಲಿ ಹಾಸ್ಯ ಸನ್ನಿವೇಶಗಳು ಬದಲಾವಣೆ ಆಗುತ್ತಿವೆ. ಸ್ವಂತಿಕೆ ಅನ್ನುವುದು ನಿದಾನವಾಗಿ ಮಾಯವಾಗಿ ಅದರ ಸ್ಥಳವನ್ನು ಹಾಲಿವುಡ್ ಹಾಸ್ಯ ಸನ್ನಿವೇಶಗಳು ಆಕ್ರಮಿಸಿಕೊಳ್ಳುತ್ತಿದೆ. ಒಂದೇ ವಾಕ್ಯದ ದ್ವಂದಾರ್ಥದ ಅಭಿನಯ ಸಾಕಷ್ಟು ತನ್ನ ಪ್ರಭಾವವನ್ನು ಪ್ರೇಕ್ಷಕರ ಮೇಲೆ ಬೀರುತ್ತಿದೆ.

ನಾನು ಮೆಹಮೂದ್, ಕಿಶೋರ್ ಕುಮಾರ್ ಮತ್ತು ಜಾನಿ ವಾಕರ್ ಅವರಂತಹ ಹಿರಿಯ ಕಲಾವಿದರ ಅಭಿನಯ ನೋಡಿ ಕಲಿತಿದ್ದೆನೆ. ಈಗ ಎಲ್ಲ ಬದಲಾಗುತ್ತಿದೆ ಬದಲಾವಣೆ ಗುಣ ಅದನ್ನು ಸ್ವಿಕರಿಸಬೇಕು.

Share this Story:

Follow Webdunia kannada