Article Bollywood Gossips %e0%b2%9c%e0%b2%ac%e0%b3%8d %e0%b2%b5%e0%b3%87 %e0%b2%ae%e0%b3%86%e0%b2%9f%e0%b3%8d %e0%b2%a8%e0%b2%b2%e0%b3%8d%e0%b2%b2%e0%b2%bf %e0%b2%b6%e0%b2%be%e0%b2%b9%e0%b2%bf%e0%b2%a6%e0%b3%8d %e0%b2%95%e0%b2%b0%e0%b3%80%e0%b2%a8%e0%b2%be %e0%b2%ac%e0%b2%bf%e0%b2%b8%e0%b2%bf %e0%b2%a6%e0%b3%83%e0%b2%b6%e0%b3%8d%e0%b2%af 107102500007_1.htm

Daily Horoscope

Select Your Language

Notifications

webdunia
webdunia
webdunia
webdunia

"ಜಬ್ ವೇ ಮೆಟ್"ನಲ್ಲಿ ಶಾಹಿದ್-ಕರೀನಾ ಬಿಸಿ ದೃಶ್ಯ

ಜಬ್ ವೇ ಮೆಟ್
IFM
ಶಾಹಿದ್ ಕಪೂರ್ ಮತ್ತು ಕರೀನಾ ನಡುವಣ "ಆತ್ಮೀಯ" ಸಂಬಂಧವೇನೂ ಹೊಸದಲ್ಲ. ಈ ಕುರಿತಾಗಿ ಸಾಕಷ್ಟು ಸುದ್ದಿಗಳಿಗೇನೂ ಬರವೂ ಇಲ್ಲ. ಇದಕ್ಕೆ ಹೊಸ ಸೇರ್ಪಡೆ ಅವರಿಬ್ಬರೂ ಜತೆಯಾಗಿ ನಟಿಸಿದ ಜಬ್ ವೇ ಮೆಟ್ ಚಿತ್ರ.

"ಜಬ್ ವೇ ಮೆಟ್" ಚಿತ್ರದಲ್ಲಿ ಕರೀನಾ ಕಪೂರ್ ಮತ್ತು ಶಾಹಿದ್ ನಡುವಣ ಕೈಮಿಸ್ಟ್ರಿಯ ಕುರಿತಾಗಿಯೇ ಎಲ್ಲೆಡೆ ಮಾತುಗಳು ಕೇಳಿಬರುತ್ತಿವೆ. ಈ ಮೊದಲು ಫಿದಾ, 36 ಚೀನಾ ಟೌನ್, ಚುಪ್ ಚುಪ್ಕೇ ಚಿತ್ರಗಳಲ್ಲಿ ಈ ಜೋಡಿ ಚೆನ್ನಾಗಿ ನಟಿಸಿದ್ದರೂ, ಅವರಿಬ್ಬರ ಜೋಡಿಯ ನಾಲ್ಕನೇ ಚಿತ್ರ "ಜಬ್ ವೇ ಮೆಟ್"ನಲ್ಲಿದ್ದಷ್ಟು ಆಕರ್ಷಣೆ ಆ ಚಿತ್ರಗಳಲ್ಲಿ ಇರಲಿಲ್ಲ ಎಂಬುದು ಚಿತ್ರ ಪ್ರೇಮಿಗಳ ವಾದ.

ಬಹುಶಃ ಈ ಜೋಡಿಯ ಕೊನೆಯ ಚಿತ್ರವಿದು ಎಂದೂ ಹೇಳಲಾಗುತ್ತಿದೆ. ಅವರಿಬ್ಬರೂ ದೂರವಾಗಲು ತೀರ್ಮಾನಿಸಿದ್ದೇಕೆ ಎಂಬುದು ಯಾರಿಗೂ ತಿಳಿದಿಲ್ಲ.

ಆದರೆ ಜಬ್ ವೇ ಮೆಟ್ ಚಿತ್ರದ ಅಂತ್ಯದಲ್ಲಿ ಶಾಹಿದ್ ಮತ್ತು ಕರೀನಾ ಚುಂಬನ ದೃಶ್ಯ ಪ್ರೇಕ್ಷಕರನ್ನು ತುದಿಗಾಲಲ್ಲಿ ನಿಲ್ಲಿಸಿ, ಅವರಿಬ್ಬರೂ ಮತ್ತೆ ಜತೆಯಾಗಿ ನಟಿಸಬೇಕೆಂಬ ಆಕಾಂಕ್ಷೆ ಚಿತ್ರಪ್ರೇಮಿಗಳಲ್ಲಿ ಮೂಡಿಸಿದೆಯಂತೆ!

Share this Story:

Follow Webdunia kannada