Article Bollywood Gossips %e0%b2%9c%e0%b2%82%e0%b2%9d%e0%b3%80%e0%b2%b0%e0%b3%8d%e2%80%8c%e0%b2%97%e0%b2%be%e0%b2%97%e0%b2%bf %e0%b2%b8%e0%b2%96%e0%b2%a4%e0%b3%8d %e0%b2%a6%e0%b3%87%e0%b2%b9 %e0%b2%a6%e0%b2%82%e0%b2%a1%e0%b2%bf%e0%b2%b8%e0%b2%bf%e0%b2%a6 %e0%b2%b0%e0%b2%be%e0%b2%ae%e0%b3%8d%e0%b2%9a%e0%b2%b0%e0%b2%a3%e0%b3%8d %e0%b2%a4%e0%b3%87%e0%b2%9c 113081500007_1.htm

Daily Horoscope

Select Your Language

Notifications

webdunia
webdunia
webdunia
webdunia

ಜಂಝೀರ್‌ಗಾಗಿ ಸಖತ್ ದೇಹ ದಂಡಿಸಿದ ರಾಮ್ಚರಣ್ ತೇಜ

ಜಂಝೀರ್
IFM
IFM
ಟಾಲಿವುಡ್ ಮೆಗಾಸ್ಟಾರ್ ಎಂದೇ ಕರೆಯಿಸಿಕೊಳ್ಳುತ್ತಿದ್ದ ಚಿರಂಜೀವಿ ಅವರ ಮಗ ರಾಮ್ ಚರಣ್ ತೇಜ ಬಾಲಿವುಡ್‌ಗೆ ಎಂಟ್ರಿ ಕೊಡಲು ವೇದಿಕೆ ಸಿದ್ದವಾಗಿದೆ. ಅವರ ಮೊದಲ ಬಾಲಿವುಡ್ ಚಿತ್ರ ಜಂಝೀರ್‌ಗಾಗಿ ಸಾಕಷ್ಟು ಕಸರತ್ತು ನಡೆಸುತ್ತಿದ್ದಾರಂತೆ. ಈ ಚಿತ್ರದಲ್ಲಿ ಖಡಕ್ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿರುವ ರಾಮ್ಚರಣ್ ಕಟ್ಟುಮಸ್ತಾದ ದೇಹಕ್ಕಾಗಿ ಆಸ್ಟ್ರೇಲಿಯಾ ಫಿಟ್ನೆಸ್ ತರಬೇತುದಾರರಿಂದ ಪಾಠ ಹೇಳಿಸಿಕೊಂಡಿದ್ದಾರಂತೆ. ದಿನಕ್ಕೆ ಮೂರರಿಂದ ನಾಲ್ಕು ಗಂಟೆ ಕಠಿಣ ಅಭ್ಯಾಸ ಮಾಡಿದ್ದರಿಂದ ಚಿತ್ರದಲ್ಲಿ ಇಷ್ಟು ಸುಂದರವಾಗಿ ಕಾಣಿಸಿಕೊಳ್ಳಲು ಸಾಧ್ಯವಾಗಿದೆಯಂತೆ.

ಶೂಟಿಂಗ್ ನಡೆಯುತ್ತಿದ್ದಾಗಲೇ ಇವರು ದೇಹವನ್ನು ಹುರಿಗಟ್ಟಿಸಿಕೊಂಡಿದ್ದು ಮತ್ತೊಂದು ವಿಶೇಷ. ಜಂಝೀರ್ ಚಿತ್ರ ಬಾಲಿವುಡ್‌ನ ಬಿಗ್ ಬಿ ಅಮಿತಾಭ್ ಬಚ್ಚನ್ ಅಭಿನಯದ ಚಿತ್ರದ ಮರುಸೃಷ್ಟಿ ಆಗಿದ್ದು ಬಿಗ್ ಬಿ ನಟಿಸಿದ್ದ ಪೊಲೀಸ್ ಪಾತ್ರದಲ್ಲಿ ರಾಮ್ಚರಣ್ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದಲ್ಲಿ ಪ್ರಿಯಾಂಕಾ ಚೋಪ್ರಾ, ಸಂಜಯ್‌ದತ್, ಪ್ರಕಾಶ್ ರಾಜ್ ಹಾಗೂ ಮಾಹಿ ಗಿಲ್ ಮೊದಲಾದವರು ಅಭಿನಯಿಸಿದ್ದಾರೆ.

Share this Story:

Follow Webdunia kannada