Article Bollywood Gossips %e0%b2%9a%e0%b3%8a%e0%b2%9a%e0%b3%8d%e0%b2%9a%e0%b2%b2 %e0%b2%87%e0%b2%82%e0%b2%97%e0%b3%8d%e0%b2%b2%e0%b2%bf%e0%b2%b7%e0%b3%8d %e0%b2%86%e0%b2%b2%e0%b3%8d%e0%b2%ac%e0%b2%82%e0%b2%a8%e0%b2%b2%e0%b3%8d%e0%b2%b2%e0%b2%bf %e0%b2%ae%e0%b2%97%e0%b3%8d%e0%b2%a8 %e0%b2%af%e0%b2%be%e0%b2%a8%e0%b2%be %e0%b2%97%e0%b3%81%e0%b2%aa%e0%b3%8d%e0%b2%a4%e0%b2%be 108020100019_1.htm

Daily Horoscope

Select Your Language

Notifications

webdunia
webdunia
webdunia
webdunia

ಚೊಚ್ಚಲ ಇಂಗ್ಲಿಷ್ ಆಲ್ಬಂನಲ್ಲಿ ಮಗ್ನ ಯಾನಾ ಗುಪ್ತಾ

ಚೊಚ್ಚಲ ಇಂಗ್ಲಿಷ್ ಆಲ್ಬಂನಲ್ಲಿ ಮಗ್ನ ಯಾನಾ ಗುಪ್ತಾ
ಐಟಂ ನಂಬರ್ ಹುಡುಗಿ ಎಂದೇ ಜನಜನಿತವಾಗಿರುವ ಬಾಲಿವುಡ್ ಸುಂದರಿ ಯಾನಾ ಗುಪ್ತಾ, ತಮ್ಮ ಚೊಚ್ಚಲ ಇಂಗ್ಲಿಷ್ ಮ್ಯೂಸಿಕ್ ಆಲ್ಬಂ ಬಿಡುಗಡೆಗೊಳಿಸಲು ಸಜ್ಜಾಗಿದ್ದಾರೆ.

ಮೊದಲ ಇಂಗ್ಲಿಷ್ ಆಲ್ಬಂ ಬಗ್ಗೆ ನಾನು ಗಂಭೀರವಾಗಿ ಶ್ರಮಿಸುತ್ತಿದ್ದೇನೆ. ಈ ಕನಸು ನನಸಾಗುವುದಕ್ಕೆ ಇನ್ನೂ ಸಮಯ ಬೇಕು ಎಂದಿದ್ದಾರೆ ಯಾನಾ. ಆ ಆಲ್ಬಂನ ರಚನೆ, ಸಾಹಿತ್ಯ, ಗಾಯನ ಎಲ್ಲವೂ ಯಾನಾ ಅವರದೇ ಹೊಣೆಗಾರಿಕೆಯಂತೆ. ಇದೇ ಕಾರಣಕ್ಕಾಗಿ ಆಕೆ ಈಗ ತುಂಬಾ ಬಿಜಿ.

ಈ ಹಿಂದೆಯೇ ನಾನು ಹಾಡುವ ತರಬೇತಿ ಪಡೆದಿದ್ದೆ. ಆದರೆ ಇಂಗ್ಲಿಷ್ ನನ್ನ ಪ್ರಥಮ ಭಾಷೆಯಲ್ಲವಾಗಿದ್ದರಿಂದ, ಹೊಂದಿಕೊಳ್ಳಲು ಸ್ವಲ್ಪ ಸಮಯ ಬೇಕಾಗುತ್ತದೆ ಎಂದಿದ್ದಾರೆ ಆಕೆ.

ಯಾನಾ ಗುಪ್ತಾರಿಗೆ ಈ ಆಲ್ಬಂ ಮಾಡುವ ಯೋಚನೆ ಹೊಳೆದದ್ದು ಹೇಗೆ? 'ಯಾರೋ ನಾನು ಹಾಡು ಗುನುಗುನಿಸುತ್ತಿದ್ದುದನ್ನು ಕೇಳಿ, ಆಲ್ಬಂ ಮಾಡಬಾರದೇಕೆ ಅನ್ನೋ ಸಲಹೆ ಕೇಳಿದ್ದರು. ಆ ದಿನವೇ ಈ ಬಗ್ಗೆ ಗಂಭೀರವಾಗಿ ಯೋಚಿಸಿ, ಯೋಜನೆ ಕೈಗೆತ್ತಿಕೊಂಡೆ' ಎಂದು ಉತ್ತರಿಸಿದ್ದಾರೆ ಆಕೆ.

ಬಾಲಿವುಡ್ ಚಿತ್ರಗಳಲ್ಲೂ ಕೆಲಸ ಮಾಡುವ ತುಡಿತ ಹೊಂದಿರುವ ಆಕೆ, 'ಉತ್ತಮ' ಪಾತ್ರಕ್ಕಾಗಿ ನೋಡುತ್ತಿದ್ದಾರೆ. ಒಂದೆರಡು ಆಫರ್‌ಗಳು ಬಂದಿದ್ದವು. ಆದರೆ ಒಪ್ಪುವ ಸ್ಕ್ರಿಪ್ಟ್ ಇಲ್ಲ. ಅವುಗಳು ನನಗೆ ಇಷ್ಟವಾಗಲಿಲ್ಲ ಅಂದಿದ್ದಾರವರು.

Share this Story:

Follow Webdunia kannada