ಚೆರ್ರಿಗೆ ಎಂಟರ ಆಟ-ಕಾಟದ ಭಯ?
, ಶನಿವಾರ, 22 ಫೆಬ್ರವರಿ 2014 (10:01 IST)
ಟಾಲಿವುಡ್ ಮಂದಿಗೆ ಏಳನೇ ಸಂಖ್ಯೆ ಹೆಚ್ಚು ಹೊಂದಿಕೆ ಆಗಿದೆ. ಅವರ ಏಳನೇ ಚಿತ್ರಗಳು ಸೂಪರ್ ಯಶಸ್ವಿ ಆಗಿದೆ ಎನ್ನುತ್ತಾದೆ ಮಾಹಿತಿ ಕೇಂದ್ರ. ಅದೇ ರೀತಿ ರಾಮಚರಣ್ ಏಳನೇ ಚಿತ್ರ ಎವಡು ಅತ್ಯಂತ ಯಶಸ್ವಿ ಚಿತ್ರಗಳಲ್ಲಿ ಒಂದಾಗಿದೆ. ಏಳರ ಆನಂದ ಅನುಭವಿಸುತ್ತಿರುವ ರಾಮ್ ಚರಣ್ ಗೆ ಈಗ ಎಂಟರ ಭಯ ಆರಂಭ ಆಗಿದೆ. ಅದಕ್ಕೆ ಕಾರಣ ಸಾಮಾನ್ಯವಾಗಿ ಈ ಚಿತ್ರರಂಗದಲ್ಲಿ ಎಂಟು ಅಷ್ಟೊಂದು ಯಶಸ್ವಿ ಸಂಖ್ಯೆಯಾಗಿಲ್ಲವಂತೆ. ಎವಡು ನೀಡಿದ ಖುಷಿಯನ್ನು ಹೆಚ್ಚಾಗಿ ಅನುಭವಿಸುತ್ತಾ ಕೂರಲು ಸಾಧ್ಯವಾಗಿಲ್ಲ ಚೆರ್ರಿಗೆ. ಕಾರಣವಿಷ್ಟೇ ಅವರ ಎಂಟನೆ ಚಿತ್ರವೂ ಇನ್ನು ತನ್ನ ಪ್ರಗತಿ ತೋರ ಬೇಕಾಗಿದೆ. ಪವನ್ ಕಲ್ಯಾಣ್, ಮಹೇಶ್ ಬಾಬು, ಎನ್ ಟಿ ಆರ್ ರಂತಹ ಸ್ಟಾರ್ ನಟರಿಗೆ ಎಂಟನೆ ಸಂಖ್ಯೆ ಕೈ ಕೊಟ್ಟಿದೆ.
ಈ ಸಂಗತಿ ತನಗೂ ಅಪ್ಲೈ ಆದರೆ ಅಥವಾ ಆಗುತ್ತದೆಯೇನೋ ಎನ್ನುವ ಭಯ ಕಾದಿದೆ ಚೆರ್ರಿಗೆ. ಏಕೆಂದರೆ ಇವರೆಲ್ಲರಿಗೂ ಬಿಗ್ ಹಿಟ್ ಕೊಟ್ಟ ಬಳಿಕ ಅತಿ ಬಿಗ್ ಫ್ಲಾಪ್ ನೀಡಿದೆ. ಆದ್ದರಿಂದ ಏಳರ ಗೆಲುವನ್ನು ನಂಬಿದ ಚರಣ್ ಈಗ ಎಂಟರಫಲಿತಾಂಶವನ್ನು ಸಹ ಸ್ವೀಕರಿಸಲೇ ಬೇಕಾಗಿದೆ
ಒಟ್ಟಾರೆ ನೋಡುವುದಾದರೆ ಕೃಷ್ಣವಂಶಿ ಅವರ ನಿರ್ದೇಶನದ ಚಿತ್ರವೂ ರಾಮ್ ಚರಣ್ ಅವರ ಎಂಟನೆ ಚಿತ್ರವಾಗುತ್ತದೆ. ಆದರೆ ಅವರು ಫ್ಲಾಪ್ ನಿರ್ದೇಶಕ ಅನ್ನುವ ಕಾರಣದಿಂದ ಆ ಚಿತ್ರದ ಬಗ್ಗೆ ಹೇಳಿಕೊಳ್ಳುವಂತಹ ಕ್ರೇಜ್ ಇಲ್ಲ. ಈಗ ಎಂಟನ್ನು ಸರಿ ಮಾಡಲು ರಾಮ್ ಚರಣ್ ಹೆಚ್ಚಿನ ಯೋಜನೆ ಕೈಗೊಂಡಿದ್ದಾರೆ. ಅವರು ಅದಕ್ಕೆ ಸಂಬಂಧಪಟ್ಟಂತೆ ಅನೇಕ ಯೋಜನೆಗಳನ್ನು ಕೈಗೊಂಡಿದ್ದಾರೆ. ಆ ಎಂಟು ಅವರನ್ನು ಕಾಡುತ್ತಾ ಇಲ್ಲವೇ ಬೆಳೆಸುತ್ತಾ ವೈಟ್ ಅಂಡ್ ಸೀ !