ಚೆನ್ನೈ ಎಕ್ಸ್‌ಪ್ರೆಸ್ ಆಡಿಯೋ ಬಿಡುಗಡೆ
Publish Date: Fri, 12 Jul 2013 (19:49 IST)
Updated Date: Fri, 12 Jul 2013 (19:48 IST)
ಚೆನ್ನೈ ಎಕ್ಸ್‌ಪ್ರೆಸ್ ಚಿತ್ರದ ಹಾಡುಗಳು ಬಿಡುಗಡೆಯಾಗಿವೆ. ರೋಹಿತ್ ಶೆಟ್ಟಿ ಅವರ ಭಿನ್ನ ಪ್ರಚಾರ ತಂತ್ರಗಳನ್ನು ನೋಡಿ ಕಿಂಗ್ ಖಾನ್ ಶಾರೂಖ್ ಫಿದಾ ಆಗಿದ್ದಾರೆ. ಕಾರ್ಯಕ್ರಮದಲ್ಲಿ ಶಾರೂಖ್ ದೀಪಿಕಾ ಜೊತೆ ಹೆಜ್ಜೆ ಹಾಕಿದ್ದಲ್ಲದೆ ನೆರೆದಿದ್ದ ಅಭಿಮಾನಿಗಳಿಗೆ ಲುಂಗಿ, ವಿಶಲ್ ಹಂಚಿ ಸಂಭ್ರಮಿಸಿದ್ದಾರೆ. ಚಿತ್ರದ ಪ್ರಚಾರಕ್ಕಾಗಿ ಚಹಾ ಮತ್ತು ಆಟೋಮೊಬೈಲ್ ಬ್ರ್ಯಾಂಡ್‌ಗಳ ಜೊತೆ ಕೈಜೋಡಿಸಲು ರೋಹಿತ್ ಶೆಟ್ಟಿಗೆ ಶಾರೂಖ್ ಸಲಹೆ ನೀಡಿದ್ದಾರೆ. ಆ ಪ್ರಕಾರ ಸದ್ಯದಲ್ಲೇ ಲುಂಗಿ ಉಟ್ಟ ಶಾರೂಖ್ ಚಿತ್ರದ ಜಾಹೀರಾತುಗಳು ಎಲ್ಲೆಡೆ ರಾರಾಜಿಸಲಿವೆ. ಆಡಿಯೋ ರಿಲೀಸ್ ಕಾರ್ಯಕ್ರಮವೂ ಭರ್ಜರಿಯಾಗಿಯೇ ನಡೆದಿತ್ತು. ಮೆಕ್ಸಿಕೋ ನಟಿ ರೆಬೆಕಾ ಮಯೋರ್ಗಾ ಆಕರ್ಷಣೆಯ ಕೇಂದ್ರಬಿಂದುವಾಗಿದ್ದರು. ಐಟಂ ಹಾಡೊಂದರಲ್ಲಿ ಕಾಣಿಸಿಕೊಂಡಿರುವ ಪ್ರಿಯಾಮಣಿ, ವಿಶಾಲ್-ಶೇಖರ್, ನೀತಿ ಮೋಹನ್, ಅಮಿತಾಬ್ ಭಟ್ಟಾಚಾರ್ಯ ಮೊದಲಾದವರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಹಾಡುಗಳು ಈಗಾಗಲೇ ಮಾರ್ಕೆಟ್‌ನಲ್ಲಿ ಮೋಡಿ ಮಾಡಿದ್ದು ಪ್ರಿಯಾಮಣಿ ಹೆಜ್ಜೆ ಹಾಕಿದ್ದ ಐಟಂ ಹಾಡು ಹೆಚ್ಚು ಪ್ರತಿಕ್ರಿಯೆ ಪಡೆಯುತ್ತಿದೆಯಂತೆ.