Publish Date: Sun, 14 Oct 2007 (16:47 IST)
Updated Date: Sun, 14 Oct 2007 (16:46 IST)
ಚಿರಯವ್ವೌನಿಗ, ಬಾಲಿವುಡ್ ರೋಮಾನ್ಸ್ ಯುಗದ ರೋಮಾಂಟಿಕ್ ಹಿರೋ ದೇವ್ ಸಾಬ್‌ಗೆ ಸ್ವೀಡಿಸ್‌ನಲ್ಲಿರುವ ಭಾರತೀಯ ಸಮುದಾಯ ಭರ್ಜರಿ ಸ್ವಾಗತ ನೀಡಿದೆಯಂತೆ.
ದೇವ್ ಆನಂದ್ ಅವರು ಸ್ವೀಡನ್ ಇಂಡಿಯಾ ಫಿಲ್ಮ್ ಒಕ್ಕೂಟದ ಭಾರತೀಯ ಸಿನೆಮಾಗಳ ಚಿತ್ರೋತ್ಸವದಲ್ಲಿ ಪಾಲ್ಗೊಳ್ಳಲು ಸ್ವೀಡನ್‌ಗೆ ತೆರಳಿದ್ದರು. ಅಲ್ಲಿಯ ಭಾರತೀಯ ಸಮುದಾಯದ ತಮ್ಮನ್ನು ಸ್ವಾಗತಿಸಿಕೊಂಡ ರೀತಿಯನ್ನು ಕಂಡು ಬೆರಗಾಗಿದ್ದಾರೆ ಈ "ರೋಮಾನ್ಸಿಂಗ್ ವಿಥ್ ಲೈಫ್" ಆತ್ಮಕಥೆಯ ಲೇಖಕರೂ ಆಗಿರುವ ದೇವ್ ಆನಂದ್.
ಈ ಚಿತ್ರೋತ್ಸವದಲ್ಲಿ ದೇವ್ ಆನಂದ್‌ರ 1970ರ ಸೂಪರ್ ಹಿಟ್ ಚಿತ್ರ "ಹರೇ ರಾಮಾ ಹರೇ ಕೃಷ್ಣಾ" ಚಿತ್ರ ಪ್ರದರ್ಶನ ಕಂಡಿದೆ. ಈ ಚಿತ್ರವನ್ನು ಆಸ್ವಾದಿಸಿದ ಸ್ಪೀಡನ್ ಪ್ರೇಕಕ್ಷರು, ವಿಶೇಷವಾಗಿ ಚಿತ್ರದಲ್ಲಿನ ಸಂಗೀತಕ್ಕೆ ಮರಳಾಗಿದ್ದಾರೆ. ಅದರಲ್ಲೂ "ದಮ್ ಮಾರೊ ದಮ್" ಮತ್ತು "ದೇಖೊ ವೊ ದಿವಾನ್" ಹಾಡುಗಳಿಗೆ ಮನಸೋತಿದ್ದಾರಂತೆ.
ಚಿತ್ರೋತ್ಸವಕ್ಕಾಗಿ ಆಹ್ವಾನಿಸಿದ್ದಕ್ಕಾಗಿ ಸಂಘಟಕರಿಗೆ ಕೃತಜ್ಞತೆ ಅರ್ಪಿಸಿದ ದೇವ್ ಆನಂದ್, "ತಮ್ಮ ಹಳೆಯ ದಿನಗಳನ್ನು ಮೆಲುಕು ಹಾಕಿದರು. ನನಗೆ ಮನೆಯಗೀಳು ಅಂಟಿಸಿಕೊಂಡಿದ್ದಕ್ಕಾಗಿ ಹೆಮ್ಮೆ ಇದೆ.
ಈಗಲೂ ನಾನು ವರ್ತಮಾನದ ಮನುಷ್ಯ. ಸ್ವೀಡನ್‌ಗೆ ಭೇಟಿ ನೀಡಿದ್ದಕ್ಕೆ ನನಗೆ ಸಂತೋಷವಾಗಿದೆ. ಇಲ್ಲಿರುವ ಸೃಷ್ಠಿ ಸೊಬಗನ್ನು ನನ್ನ ಮುಂದಿನ ಚಿತ್ರಗಳಲ್ಲಿ ಬಳಸಿಕೊಳ್ಳುತ್ತೇನೆ" ಎಂದರು.