ಚಿರಂಜೀವಿಯ ಹೊಸ ಚಾನೆಲ್ ಆರಂಭ ?
Publish Date: Tue, 19 Nov 2013 (11:08 IST)
Updated Date: Tue, 19 Nov 2013 (11:08 IST)
ಸಿನಿಮಾದಲ್ಲಿ ಯಶಸ್ಸು ಕಂಡ ಬಳಿಕ ತಮ್ಮ ಗಮನ ರಾಜಕೀಯದತ್ತ ಕೇಂದ್ರೀಕರಿಸಿದ ನಟ ಚಿರಂಜೀವಿ ಚಾನೆಲ್ ಒಂದರ ಪಾಲುದಾರಿಕೆಯಲ್ಲೂ ಸಹ ತಮ್ಮನ್ನು ತೊಡಗಿಸಿ ಕೊಂಡಿದ್ದರು. ಈಗ ಇರುವ ಸುದ್ದಿ ಏನೆಂದರೆ ಅವರು ತಮ್ಮದೇ ಆದ ಹೊಸ ಚಾನೆಲ್ ಆರಂಭ ಮಾಡುತ್ತಿದ್ದಾರೆ. ಮಾ ನೆಟ್ ವರ್ಕ್ ಎಂಟರ್ ಟೈನ್ ಮೆಂಟ್ ಚಾನೆಲ್ ನಲ್ಲಿ ತನ್ನ ಸ್ಥಾನ ಗಟ್ಟಿ ಮಾಡಿ ಕೊಂಡಿರುವ ಮೆಗಾ ಸ್ಟಾರ್ ಚಿರಂಜೀವಿ ಈಗ ಮತ್ತೊಂದು ಚಾನೆಲ್ ಆರಂಭಿಸಲು ಹೊರಟಿದ್ದಾರೆ. ತುಳಸಿ ಸೀಡ್ಸ್ ಓನರ್ ತುಳಸಿ ರಾಮಚಂದ್ರ ಪ್ರಭು ಜೊತೆ ಸೇರಿ ಚಿರು ಒಂದು ನ್ಯೂಸ್ ಚಾನೆಲ್ ಆರಂಭ ಮಾಡುತ್ತಿದ್ದಾರೆ ಎಂಬುದೇ ಸದ್ಯ ಎಲ್ಲೆಡೆ ಓಡಾಡುತ್ತಿರುವ ಸುದ್ದಿ. ಚಿರಂಜೀವಿ ಪ್ರಜಾರಾಜ್ಯಂ ಆರಂಭಿಸಿದ ಸಮಯದಲ್ಲಿ ತುಳಸಿ ರಾಮಚಂದ್ರ ಗುಂಟೂರು ಜಿಲ್ಲೆಯ ಈಗಿನ ಮಂತ್ರಿ ಕನ್ನಾ ಲಕ್ಷ್ಮಿ ನಾರಾಯಣ ಎದುರು ಸ್ಫರ್ಧಿಸಿ ಸೋತು ಹೈರಾಣಾಗಿದ್ದರು. ಚಿರು ಬಗ್ಗೆ ಸಿಕ್ಕಾ ಪಟ್ಟೆ ಪ್ರೀತಿಯನ್ನು ಹೊಂದಿರುವ ರಾಮಚಂದ್ರ ಚಿರು ಜೊತೆ ಕಾಂಗ್ರೆಸ್ ಪಾರ್ಟಿಗೆ ಜಾಯಿನ್ ಆದರು. ಮದ್ರಾಸ್ ಐಐಟಿಯಲ್ಲಿ ಇಂಜಿನಿಯರಿಂಗ್ ಮಾಡಿರುವ ರಾಮಚಂದ್ರ ಈಗಾಗಲೇ ಆಂಧ್ರದಲ್ಲಿ ಇರುವ 19 ನ್ಯೂಸ್ ಚಾನೆಲ್ ಗಳ ಜೊತೆ 20ನೆ ದಾಗಿ ತಮ್ಮ ಹೊಸ ಚಾನೆಲ್ ಆರಂಭಿಸಲು ಸಿದ್ಧ ರಾಗಿದ್ದಾರೆ. ಇದು ಚಿರಂಜೀವಿ ರಾಜಕೀಯ ಬದುಕಿಗೆ ಎಷ್ಟರ ಮಟ್ಟಿಗೆ ಸಂಜೀವಿನಿ ಆಗುತ್ತದೆಯೋ ಕಾದು ನೋಡುವ.