Article Bollywood Gossips %e0%b2%9a%e0%b2%bf%e0%b2%a4%e0%b3%8d%e0%b2%b0%e0%b3%80%e0%b2%95%e0%b2%b0%e0%b2%a3 %e0%b2%b5%e0%b3%87%e0%b2%b3%e0%b3%86 %e0%b2%a4%e0%b2%b2%e0%b3%86%e0%b2%b8%e0%b3%81%e0%b2%a4%e0%b3%8d%e0%b2%a4%e0%b2%bf %e0%b2%ac%e0%b2%bf%e0%b2%a6%e0%b3%8d%e0%b2%a6 %e0%b2%a8%e0%b2%9f%e0%b2%bf %e0%b2%ae%e0%b3%80%e0%b2%a8%e0%b2%be 113102400008_1.htm

Daily Horoscope

Select Your Language

Notifications

webdunia
webdunia
webdunia
webdunia

ಚಿತ್ರೀಕರಣ ವೇಳೆ ತಲೆಸುತ್ತಿ ಬಿದ್ದ ನಟಿ ಮೀನಾ

ಮೀನಾ
PR
ನಟಿ ಮೀನಾ ಉದ್ಯಾನನಗರಿಯ ಸಾಫ್ಟ್ವೇರ್ ಎಂಜಿನಿಯರ್ ಒಬ್ಬರನ್ನು ವಿವಾಹವಾದ ಬಳಿಕ ಚಿತ್ರರಂಗದಿಂದ ದೂರ ಸರಿದಿದ್ದರು. ಈಗ ಸಾಕಷ್ಟು ಗ್ಯಾಪ್ ತೆಗೆದುಕೊಂಡ ಮೇಲೆ ಮತ್ತೆ ಮಲಯಾಳಂ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಅದು ದೃಶ್ಯ ಚಿತ್ರದ ಮೂಲಕ. ಆದರೆ ಚಿತ್ರೀಕರಣ ವೇಳೆ ಅವರು ಇದ್ದಕ್ಕಿದ್ದಂತೆ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ಜೋಸೆಫ್ ಚಿತ್ರವನ್ನು ನಿರ್ದೆಶಿಸುತ್ತಿದ್ದು ಮೋಹನ್‌ಲಾಲ್ ಜೊತೆ ಮೀನಾ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಮೀನಾ ಬಹುಮುಖ್ಯವಾದ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದ್ದಕ್ಕಿದ್ದಂತೆ ತಲೆತಪ್ಪಿ ಬಿದ್ದ ಕಾರಣಕ್ಕೆ ಚಿತ್ರತಂಡ ಬೆದರಿದೆ. ಶೂಟಿಂಗ್‌ಗೆ ಬರುವಾಗಲೇ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು ಎನ್ನಲಾಗಿದೆ.

ಅನಾರೋಗ್ಯ ಲೆಕ್ಕಿಸದೆ ಅವರು ಶೂಟಿಂಗ್‌ನಲ್ಲಿ ಪಾಲ್ಗೊಂಡಿದ್ದು ಇದಕ್ಕೆ ಕಾರಣವಂತೆ. ಮೀನಾರನ್ನು ಪರೀಕ್ಷಿಸಿದ ವೈದ್ಯರು ಕೊಂಚದಿನ ವಿಶ್ರಾಂತಿ ತೆಗೆದುಕೊಳ್ಳುವಂತೆ ಸೂಚಿಸಿದೆ. ಈ ಘಟನೆಯಿಂದ ದೃಶ್ಯಂ ಚಿತ್ರೀಕರಣ ಸ್ಥಗಿತಗೊಂಡಿದ್ದು ಕೊಂಚ ದಿನಗಳ ಬಳಿಕ ಮತ್ತೆ ಆರಂಭವಾಗಲಿದೆ. ಇಲ್ಲಿ ಮೋಹನ್‌ಲಾಲ್ ಪತ್ನಿಯಾಗಿ ಮೀನಾ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರಕ್ಕೆ ಬ್ರೇಕ್ ಕೊಟ್ಟು ಮೋಹನ್‌ಲಾಲ್ ಗೀತಾಂಜಲಿಯ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ ಎನ್ನಲಾಗಿದೆ.

Share this Story:

Follow Webdunia kannada