ಕೇವಲ ಚಿತ್ರೋದ್ಯದಲ್ಲಿ ಮಾತ್ರ ವ್ಯಕ್ತಿಯೊಬ್ಬ ತನ್ನ ಜಾತಿ, ಪಂಗಡ, ಧರ್ಮಗಳ ಹೊರತಾಗಿ ಪ್ರತಿಭೆಯಿಂದ ಮಾತ್ರ ಗುರುತಿಸಿಕೊಳ್ಳುತ್ತಾನೆ ಎಂದು ಪ್ರಸಿದ್ಧ ಚಿತ್ರ ನಿರ್ಮಾಪಕ ಮತ್ತು ನಿರ್ದೇಶಕ ಯಶ್ ಚೋಪ್ರಾ ಹೇಳಿದ್ದಾರೆ.
ಚಿತ್ರೋದ್ಯಮದಲ್ಲಿ ರಾಜಕೀಯದ ಮಧ್ಯಪ್ರವೇಶದ ಕುರಿತಾದ ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ, ಚಿತ್ರೋದ್ಯಮದಲ್ಲಿ ಯಾವುದೇ ರಾಜಕೀಯ ಇಲ್ಲ. ಇಲ್ಲಿ ಜನರಲ್ಲಿರುವ ಪ್ರತಿಭೆಗಳು ಮಾತ್ರ ಪ್ರಚಲಿತವಾಗುತ್ತದೆ. ಅವರ ಜಾತಿ ಪಂಗಡಗಳಲ್ಲ ಎಂದು ಅವರು ಹೇಳಿದರು.ಮಾಧುರಿ ದೀಕ್ಷಿತ್ ಅಭಿನಯದ ವಿವಾದಾತ್ಮಕ ಚಿತ್ರ 'ಆಜಾ ನಚಾಲೆ' ಚಿತ್ರವು ಯಾರ ಭಾವನೆಗಳನ್ನೂ ನೋಯಿಸುವ ಉದ್ದೇಶವನ್ನು ಹೊಂದಿಲ್ಲ ಎಂದು ಈ ಚಿತ್ರದ ನಿರ್ಮಾಪಕರಾದ ಯಶ್ ಹೇಳಿದ್ದು, ವಿವಾದವು ಭುಗಿಲೆದ್ದಾಗ ಛೋಪ್ರಾ ಅವರು ಕೂಡಲೇ ಜನರಲ್ಲಿ ಕ್ಷಮೆ ಕೇಳಿ ಹಾಡಿನಲ್ಲಿರುವ ವಿವಾದಾತ್ಮಕ ಭಾಗಗಳನ್ನು ತೆಗೆದುಹಾಕುವ ಭರವಸೆ ನೀಡಿದ್ದರು.
ಪಂಜಾಬೀ ಚಿತ್ರಗಳನ್ನು ಮಾಡುವ ಯೋಜನೆಯ ಕುರಿತಾಗಿ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಛೋಪ್ರಾ, ತಾನು ಮಾಡಿರುವ ಚಿತ್ರಗಳಲ್ಲಿ ಪಂಜಾಬಿ ಸಂಸ್ಕೃತಿ, ಆಹಾರ ಮತ್ತು ಗಾಯನವನ್ನು ನಿರೂಪಿಸಿದ್ದು, ಸಂಸ್ಕೃತಿ ಮುಖ್ಯವಾಗಿದ್ದು, ಚಿತ್ರವು ಅಲ್ಲ ಎಂದು ಹೇಳಿದ್ದಾರೆ. ತನ್ನ ಮುಂಬರುವ ಚಿತ್ರದ ಸಾಹಿತ್ಯವು ಜನವರಿ ತಿಂಗಳಲ್ಲಿ ಸಿದ್ಧವಾಗಲಿದ್ದು, ಎಪ್ರಿಲ್ ತಿಂಗಳೊಳಗೆ ಕಲಾವಿದರನ್ನು ಆಯ್ಕೆ ಮಾಡಲು ಪ್ರಾರಂಭಿಸಲಾಗುವುದು ಎಂದಿದ್ದಾರೆ.