Article Bollywood Gossips %e0%b2%9a%e0%b2%bf%e0%b2%a4%e0%b3%8d%e0%b2%b0 %e0%b2%a8%e0%b2%bf%e0%b2%b0%e0%b3%8d%e0%b2%ae%e0%b2%be%e0%b2%a3%e0%b2%a6%e0%b2%a4%e0%b3%8d%e0%b2%a4 %e0%b2%85%e0%b2%b9%e0%b3%8d%e0%b2%ae%e0%b2%a6%e0%b3%8d %e0%b2%96%e0%b2%be%e0%b2%a8%e0%b3%8d 107121100005_1.htm

Daily Horoscope

Select Your Language

Notifications

webdunia
webdunia
webdunia
webdunia

ಚಿತ್ರ ನಿರ್ಮಾಣದತ್ತ ಅಹ್ಮದ್ ಖಾನ್

ಚಿತ್ರ
ಇತ್ತೀಚಿನ ದಿನಗಳಲ್ಲಿ ಕೇವಲ ನಟರು ಮಾತ್ರವಲ್ಲ, ನಿರ್ದೇಶಕರು ಕೂಡಾ ಚಿತ್ರನಿರ್ಮಾಣದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲು ಪ್ರಾರಂಭಿಸಿದ್ದಾರೆ. ಈ ಮೊದಲು ಲಕೀರ್ ಮತ್ತು ಫೂಲ್ ಎನ್ ಫೈನಲ್ ಚಿತ್ರಗಳನ್ನು ನಿರ್ದೇಶಿಸಿದ್ದ, ನೃತ್ಯ ನಿರ್ದೇಶಕ ಅಹ್ಮದ್ ಖಾನ್ ಚಿತ್ರ ನಿರ್ಮಾಣ ಮಾಡಲಿದ್ದಾರೆ. ಇವರ ನೂತನ ಚಿತ್ರಕ್ಕಾಗಿ, ಮುಂಬಯಿ ಸಿನಿಮಾ ಜಗತ್ತಿನಲ್ಲಿ ಅತಿದೊಡ್ಡ ಶಾಲೆಯ ಸೆಟ್ ನಿರ್ಮಾಣವಾಗುತ್ತಿದೆ.

ಈ ಚಿತ್ರವು ವಿದ್ಯಾರ್ಥಿ ಮತ್ತು ಅದ್ಯಾಪಕರ ನಡುವಿನ, ಅದ್ಯಾಪಕರು ಮತ್ತು ಪ್ರಾಂಶುಪಾಲರ ನಡುವಿನ, ಪ್ರಾಂಶುಪಾಲ ಮತ್ತು ಶಾಲೆಯ ಆಡಳಿತಾಧಿಕಾರಿಗಳ ನಡುವಿನ ಸಂಬಂಧದ ಕುರಿತಾಗಿದೆ ಎಂದು ಹೈದರಾಬಾದ್‌ನಲ್ಲಿ ಚಿತ್ರೀಕರಣದಲ್ಲಿ ತೊಡಗಿರುವ ಅಹ್ಮದ್ ಸ್ಪಷ್ಟಪಡಿಸಿದರು.ಅಲ್ಲದೆ ಈ ಚಿತ್ರದ ಮುಖ್ಯಪಾತ್ರದಲ್ಲಿ ಮಕ್ಕಳ ಅಭಿನಯವಿರುತ್ತದೆ ಎಂದು ಅವರು ಹೇಳಿದ್ದಾರೆ. ಅಹ್ಮದ್ ಮತ್ತು ಅವರ ತಂಡವು ಪ್ರಧಾನ ಪಾತ್ರಗಳಿಗಾಗಿ ಈಗಾಗಲೇ ಸಾವಿರಕ್ಕಿಂತಲೂ ಹೆಚ್ಚು ಮಕ್ಕಳ ಧ್ವನಿಪರೀಕ್ಷೆ ನಡೆಸಿದೆ.

ಶಾಹಿದ್ ಕಪೂರ್, ವಿವೇಕ್ ಒಬೆರಾಯ್, ಆಯೆಶಾ ತಾಕಿಯಾ, ನಾನಾ ಪಾಟೇಕರಿ ಮತ್ತು ಪರೇಶ್ ರವಾಲ್ ಮುಂತಾದವರನ್ನು ಈ ಚಿತ್ರದ ಪ್ರಧಾನ ಪಾತ್ರಕ್ಕೆ ಅಹ್ಮದ್ ಅವರು ಗೊತ್ತುಮಾಡಿದ್ದಾರೆ. ಅವರು ನನಗೆ ಕುಟುಂಬದ ಸದಸ್ಯರಿದ್ದಂತೆ. ನನ್ನ ನೂತನ ಚಿತ್ರದ ನಿರ್ಮಾಣದ ಬಗ್ಗೆ ಅವರಿಗೆ ತಿಳಿಸಿದ ಕ್ಷಣಾರ್ಧದಲ್ಲೇ ನಾವು ಯಾಕೆ ಆ ಚಿತ್ರದಲ್ಲಿ ಇಲ್ಲ ಎಂದು ಪ್ರತಿಕ್ರಯಿಸಿದ್ದರು. ನನ್ನ ಮೊದಲ ಚಿತ್ರದಲ್ಲೇ ಅವರು ನಟಿಸುತ್ತಿರುವುದ ತುಂಬಾ ಪ್ರಿಯವಾದ ವಿಷಯವಾಗಿದೆ ಎಂಬುದಾಗಿ ಅಹ್ಮದ್ ತಿಳಿಸಿದ್ದಾರೆ.

Share this Story:

Follow Webdunia kannada