Publish Date: Wed, 14 Nov 2007 (14:51 IST)
Updated Date: Wed, 14 Nov 2007 (14:51 IST)
ಸೈಫ್ ಅಲಿಖಾನ್ ಅವರ ನಿರ್ಮಾಣ ಕೇಂದ್ರದ ಕುರಿತಾಗಿ ಇರುವ ಸತ್ಯ ಯಾವುದು? ಸೈಫ್ ಅಲಿಖಾನ್ ತನ್ನ ನಿರ್ಮಾಣ ಕೇಂದ್ರವನ್ನು ಪ್ರಾರಂಭಿಸಿದ್ದಾರೆ ಎಂಬುದು ಈಗ ರಹಸ್ಯವಾಗಿ ಉಳಿದಿಲ್ಲ.
ಕೆಲವು ದಿನಗಳ ಹಿಂದೆ ಪ್ರತಿಭಾವಂತ ನಟನೊಬ್ಬ ಜಾನಿ ಗದಾರ್ ಮತ್ತು ಏಕ್ ಹಸೀನಾ ಥಿ ಚಿತ್ರದ ನಿರ್ದೇಶಕ ಶ್ರೀರಾಮ್ ರಾಘವನ್ ಅವರ ಏಜೆಂಟ್ ವಿನೋದ್ ಚಿತ್ರವನ್ನು ನಿರ್ದೇಶಿಸಲು ಸಹಿ ಹಾಕಿದ್ದಾರೆ ಎಂಬ ಮಾತು ಕೇಳಿ ಬರುತ್ತಿತ್ತು. ನಂತರ, ಇತ್ತೀಚೆಗೆ ಗೆಲುವು ಸಾಧಿಸಿದ ಜಬ್ ವಿ ಮೆಟ್‌ನ ನಿರ್ದೇಶಕ ಇಮ್ತಿಯಾಜ್ ಅಲಿ ಸಿನಿಮಾ ನಿರ್ದೇಶಿಸಲು ಸಹಿ ಹಾಕಿದ್ದಾರೆ ಎಂಬ ವದಂತಿಗಳು ಕೇಳಿ ಬರುತ್ತಿದ್ದವು. ಇದರಲ್ಲಿ ನಿಜ ಯಾವುದು?
ಅಧಿಕೃತ ಹೇಳಿಕೆಗಳ ಪ್ರಕಾರ, ತನ್ನ ಸಿನಿಮಾ ಕೇಂದ್ರ ಯೋಜನೆಯ ಬಗ್ಗೆ ಸದ್ಯಕ್ಕೆ ಖಚಿತಪಡಿಸುವ ಸ್ಥಿತಿಯಲ್ಲಿ ಸೈಫ್ ಅಲಿಖಾನ್ ಸ್ಪಷ್ಟಪಡಿಸಿದ್ದಾರೆ
ಅಲ್ಲದೆ ಎರಡು ಸ್ಕ್ರಿಪ್ಟ್‌ಗಳ ಅಗತ್ಯವಿದ್ದು, ಎರಡು ಪ್ರತ್ಯೇಕ ಸಿನಿಮಕ್ಕಾಗಿ ಶ್ರೀರಾಮ್ ಮತ್ತು ಇಮ್ತಿಯಾಜ್ ಅವರೊಂದಿಗೆ ಮಾತುಕತೆ ನಡೆಸಿದ್ದು ಆದರೆ ಅಧಿಕೃತವಾಗಿ ಇನ್ನಷ್ಟೇ ಅಂತಿಮಗೊಳ್ಳಬೇಕಿದೆ ಹಾಗಾಗಿ ಅದರ ಕುರಿತು ಮಾತನಾಡಲು ತಾನು ಇಚ್ಛಿಸುವುದಿಲ್ಲ ಎಂಬುದಾಗಿ ತಿಳಿಸಿದ್ದಾರೆ.