Article Bollywood Gossips %e0%b2%9a%e0%b2%b5%e0%b2%a8%e0%b3%8d %e0%b2%9c%e0%b3%82%e0%b2%a8%e0%b2%bf%e0%b2%af%e0%b2%b0%e0%b3%8d%e2%80%8c%e0%b2%97%e0%b3%86 %e0%b2%85%e0%b2%ae%e0%b2%bf%e0%b2%a4%e0%b2%be%e0%b2%ac%e0%b3%8d %e0%b2%b8%e0%b2%b9%e0%b2%bf 107100800025_1.htm

Daily Horoscope

Select Your Language

Notifications

webdunia
webdunia
webdunia
webdunia

ಚವನ್ ಜೂನಿಯರ್‌ಗೆ ಅಮಿತಾಬ್ ಸಹಿ

ಚವನ್
ಡಾಬರ್ ಇಂಡಿಯದ ಇನ್ನೊಂದು ಉತ್ಪನ್ನ ಚವನ್ ಜೂನಿಯರ್‌ಗೆ ಅಮಿತಾಬ್ ಬಚ್ಚನ್ ಸಹಿ ಹಾಕಿದ್ದಾರೆ. ಡಾಬರ್ ಚವನ್ ಜೂನಿಯರ್‌ನೊಂದಿಗೆ ಮಾಲ್ಟೆಡ್ ಆಹಾರ ಪಾನೀಯದ ಮಾರುಕಟ್ಟೆಗೆ ಡಾಬರ್ ಲಗ್ಗೆ ಹಾಕಿದೆ.

ಡಾಬರ್ ಇಂಡಿಯಾ ಉತ್ಪನ್ನದ ವಿವಿಧ ಉತ್ಪನ್ನಗಳಾದ ಡಾಬರ್ ಚವನ್‌ಪ್ರಕಾಶ್, ಡಾಬರ್ ಹಾಜ್ಮೋಲಾ ಮತ್ತು ಡಾಬರ್ ಗ್ಲುಕೋಸ್-ಡಿಯ ಟೆಲಿವಿಷನ್ ಜಾಹೀರಾತುಗಳಲ್ಲಿ ಅಮಿತಾಬ್ ಬಚ್ಚನ್ ಮಕ್ಕಳನ್ನು ಕೀಟಲೆ ಮಾಡುವ ದೃಶ್ಯಗಳು ಮಕ್ಕಳಲ್ಲಿ ಜನಪ್ರಿಯವಾಗಿಸಿದೆ.

ಮೆಕಾನ್ ಎರಿಕ್‌ಸನ್ ನಿರ್ಮಿಸಿರುವ ಡಾಬರ್ ಚವನ್ ಜಾಹೀರಾತಿನಲ್ಲಿ ತನ್ನ ಮೊಮ್ಮಗ ತಾಯಿಯ ಗೈರುಹಾಜರಿಯಲ್ಲಿ ಬೆಳಗಿನ ಉಪಾಹಾರಕ್ಕೆ ಡಾಬರ್ ಚವನ್ ಜೂನಿಯರ್ ಕುಡಿಯುವುದನ್ನು ಕಂಡು ಅಮಿತಾಬ್‌ಗೆ ಆಶ್ಚರ್ಯವಾಗುತ್ತದೆ. "ಯೆ ತೊ ಮಮ್ಮಿ ಕಾ ಸ್ಟೈಲ್ ಹೈ" ಎಂದು ಅಮಿತಾಬ್ ಹೇಳಿದಾಗ ಬಾಲಕ ಯೆ ಅಪುನ್ ಕಾ ಬಿ ಸ್ಟೈಲ್ ಹೈ ಎಂದು ಉದ್ಗರಿಸುತ್ತಾನೆ.

ಜಾಹೀರಾತಿನ ಇಡೀ ಪ್ರಕ್ರಿಯೆಯಲ್ಲಿ ಅಮಿತಾಬ್ ಬಚ್ಚನ್ ಆಕರ್ಷಣೆಯ ಕೇಂದ್ರಬಿಂದುವಾಗದಂತೆ ಎಚ್ಚರವಹಿಸಿರುವುದಾಗಿ ಕಾರ್ಯನಿರ್ವಾಹಕ ಅಧ್ಯಕ್ಷ ಪ್ರಸೂನ್ ಜೋಷಿ ಹೇಳುತ್ತಾರೆ. ಬಚನ್ ಒಬ್ಬ ಸಲಹೆಗಾರರಾಗಿ ಅಭಿನಯಿಸುತ್ತಾ ಸೃಜನಾತ್ಮಕತೆ ತರಲು ಸಹಾಯಹಸ್ತ ನೀಡುತ್ತಾರೆಂದು ಹೇಳುತ್ತಾರೆ.

Share this Story:

Follow Webdunia kannada