Publish Date: Wed, 03 Oct 2007 (18:27 IST)
Updated Date: Wed, 03 Oct 2007 (18:23 IST)
1975, ಜು.18ರಂದು ಬಪ್ಪಿ ಲಹರಿಯ ಪ್ರಥಮ ಹಿಟ್ ಚಿತ್ರ ಚಲ್ತೆ ಚಲ್ತೆ ರೆಕಾರ್ಡಿಂಗ್ ನಡೆಯಿತು. ಅದರ ನೆನಪಿಗಾಗಿ ಪ್ರತಿವರ್ಷ ಅವರು ಜು.18ಕ್ಕೆ ಕೇಕ್ ಕಟ್ ಮಾಡಿ ಹರ್ಷಿಸುತ್ತಾರೆ. ಕಿಶೋರ್ ಕುಮಾರ್ ಹಾಡಿದ ಚಲ್ತೆ ಚಲ್ತೆ ಗೀತೆಯನ್ನು ಆ ದಿನ ಧ್ವನಿಮುದ್ರಿಸಲಾಯಿತು.
ಅದನ್ನು ನಾನು ಮರೆಯಲು ಸಾಧ್ಯವಿಲ್ಲ. ನನ್ನ ತಾಯಿ ಮತ್ತು ತಂದೆ ರೆಕಾರ್ಡಿಂಗ್‌ಗೆ ಆಗಮಿಸಿದ್ದರು. ನನಗೆ ಆಗಿನ್ನೂ ವಿವಾಹವಾಗಿರಲಿಲ್ಲ. ಚಿತ್ರದಲ್ಲಿ ಮುಖ್ಯಪಾತ್ರ ವಹಿಸಿದ ವಿಶಾಲ್ ಬಾಬು ಗೀತೆಯನ್ನು ಇಷ್ಟಪಟ್ಟರು. ಹಾಡಿನ ಒಂದು ಭಾಗವನ್ನು ಆಲಿಸುತ್ತಲೇ ಅವರ ಕಣ್ತುಂಬಿ ಬಂದಿತು.
ಚಲ್ತೆ ಚಲ್ತೆ ಬಳಿಕ ನನ್ನ ವೃತ್ತಿಜೀವನ ಗರಿಗೆದರಿತು. ಇದಾದ ಬಳಿಕ ನಾನು ಹಿನ್ನಲೆ ಗಾಯನವನ್ನು ಮೊದಲ ಬಾರಿ ನಿರ್ದೇಶಿಸಿದೆ. ಸುಮಾರು 7000 ಗೀತೆಗಳನ್ನು ಧ್ವನಿಮುದ್ರಿಸಿದೆ. ಆದರೆ ಚಲ್ತೆ ಚಲ್ತೆ ಗೀತೆ ನನ್ನ ಜೀವನಕ್ಕೆ ತಿರುವು ನೀಡಿತು ಎಂದು ಬಪ್ಪಿ ಲಹರಿ ಹೇಳುತ್ತಾರೆ."
ಆದ್ದರಿಂದಲೇ ಪ್ರತಿವರ್ಷ ಜು.18ನ್ನು ನೆನಪಿಸಿಕೊಂಡು ಆಚರಿಸುತ್ತೇವೆ. ಚಲ್ತೆ ಚಲ್ತೆ ಬರೆದ ಕೇಕ್ ಕತ್ತರಿಸುತ್ತೇವೆ. ನಾವು ಕಿಶೋರ್ ಬಾಬುವನ್ನು ನೆನಪಿಸಿಕೊಂಡು ಅವರ ಗೀತೆಗಳನ್ನು ಕೇಳುತ್ತೇವೆ ಎಂದು ಬಪ್ಪಿ ಹೇಳುತ್ತಾರೆ.