Publish Date: Wed, 10 Oct 2007 (17:56 IST)
Updated Date: Wed, 10 Oct 2007 (17:56 IST)
ತಾಳಿದವನು ಬಾಳಿಯಾನು ಎನ್ನುವುದು ಚಕ್ ದೆ ಇಂಡಿಯ ಬಾಗಿಲು ತಟ್ಟುವವರೆಗೆ ಶಿಲ್ಪಾ ಶುಕ್ಲಾ ಮಂತ್ರವಾಗಿತ್ತು. ಚಕ್ ದೆ ಇಂಡಿಯಾದಿಂದ ನನ್ನ ಜೀವನದಲ್ಲಿ ಬದಲಾವಣೆ ಗಾಳಿ ಬೀಸಿತು ಎಂದು ಶಿಲ್ಪಾ ಶುಕ್ಲಾ ಹೇಳುತ್ತಾಳೆ.
ಕಾಮೋಶ್ ಪಾನಿ ಮತ್ತು ಹಜರೋನ್ ಕವೈಶೇನ್ ಐಸಿ ಚಿತ್ರಗಳಲ್ಲಿ ತನ್ನ ನಟನೆಗೆ ಕುರುಡುಕಣ್ಣಾಗಿದ್ದವರ ಗಮನವನ್ನು ಆಕೆ ಸೆಳೆದಿದ್ದಾಳೆ. ಈಗ ಪ್ರಪಂಚ ನಿಮ್ಮನ್ನು ಹೇಗೆ ನೋಡುತ್ತಿದೆ ಎಂದು ಪ್ರಶ್ನಿಸಿದಾಗ. ಜೀವನದ ಎಲ್ಲ ವರ್ಗದ ಜನರು ಚಿತ್ರದೊಂದಿಗೆ ಸಂಬಂಧ ಹೊಂದಿರುವುದೊಂದು ಮಧುರ ಭಾವನೆ.
ಇತ್ತೀಚೆಗೆ ಮ್ಯಾನೇಜ್‌ಮೆಂಟ್ ಶಾಲೆಗಳಿಂದ ತಮ್ಮ ಪಠ್ಯಪುಸ್ತಕದಲ್ಲಿ ಅಳವಡಿಸಿಕೊಳ್ಳುವುದಾಗಿ ಕರೆಗಳು ಬರುತ್ತಿವೆ ಎಂದು ಆಕೆ ಹೇಳುತ್ತಾಳೆ.ಪ್ರೇಕ್ಷಕರಲ್ಲಿ ಜನಪ್ರಿಯತೆ ತಂದುಕೊಟ್ಟ ಚಕ್ ದೆ ಇಂಡಿಯಾದ ಬಿಂದಿಯಾ ನಾಯಕ್ ಪಾತ್ರಕ್ಕೆ ಅತೀವ ಗೌರವ ನೀಡುವ ಅವರು, ಚಕ್ ದೆ ಇಂಡಿಯಾಗೆ ಮೊದಲು ಕೆಲವು ನೆಗೆಟಿವ್ ಪಾತ್ರಗಳು ಬಂದಿದ್ದವು. ಅವೆಲ್ಲವೂ ಹೆಚ್ಚು ಕಡಿಮೆ ಚಕ್ ದೆ ಇಂಡಿಯಾ ಪಾತ್ರದಂತೆ ಇದ್ದವು ಎಂದು ಶಿಲ್ಪಾ ಹೇಳುತ್ತಾಳೆ.
ತಮ್ಮ ಹೊಸ ಚಿತ್ರದ ಬಗ್ಗೆ ಹೆಚ್ಚು ಮಾಹಿತಿ ನೀಡದ ಅವರು, ಅತುಲ್ ಸಬರವಾಲ್ ನನ್ನ ಮೇಲೆ ನಂಬಿಕೆಯಿರಿಸಿ ಪಾತ್ರ ನೀಡಿದ್ದಕ್ಕೆ ಸಂತೋಷವಾಗಿದೆ. ಇದು ಹಿಂದಿನ ಪಾತ್ರಗಳಿಗಿಂತ ತೀರಾ ಭಿನ್ನವಾಗಿದೆ ಎಂದು ಶಿಲ್ಪಾ ಹೇಳುತ್ತಾಳೆ.