Article Bollywood Gossips %e0%b2%97%e0%b3%8d%e0%b2%b2%e0%b2%be%e0%b2%ae%e0%b2%b0%e0%b3%8d %e0%b2%aa%e0%b2%be%e0%b2%a4%e0%b3%8d%e0%b2%b0%e0%b2%97%e0%b2%b3%e0%b2%b2%e0%b3%8d%e0%b2%b2%e0%b2%bf %e0%b2%a8%e0%b2%9f%e0%b2%bf%e0%b2%b8%e0%b3%81%e0%b2%b5%e0%b3%81%e0%b2%a6%e0%b3%81 %e0%b2%a4%e0%b2%aa%e0%b3%8d%e0%b2%aa%e0%b2%b2%e0%b3%8d%e0%b2%b2 %e0%b2%a8%e0%b3%87%e0%b2%b9%e0%b2%be 108022200021_1.htm

Daily Horoscope

Select Your Language

Notifications

webdunia
webdunia
webdunia
webdunia

ಗ್ಲಾಮರ್ ಪಾತ್ರಗಳಲ್ಲಿ ನಟಿಸುವುದು ತಪ್ಪಲ್ಲ-ನೇಹಾ

ಗ್ಲಾಮರ್
ಜ್ಯೂಲಿ ಮತ್ತು ಶೀಶಾ ಚಿತ್ರಗಳಲ್ಲಿ ಬಿಸಿಬಿಸಿಯಾಗಿ ನಟಿಸಿ ಸುದ್ದಿ ಮಾಡಿದ ನೇಹಾ ಧೂಪಿಯಾ ಬಾಲಿವುಡ್ ಚಿತ್ರರಂಗವನ್ನು ಕೆರಳಿಸಿದ ಗ್ಲಾಮರ್ ತಾರೆ.

ಆನಂದ್ ಕುಮಾರ್ ಅವರ ದೆಹಲಿ ಹೈಟ್ಸ್ ಪ್ರಿಯದರ್ಶನ್ ಅವರ ಚುಪ್ ಚುಪ್ ಕೆ,ಸಂಜಯ್ ಗುಪ್ತಾ ಅವರ ದಸ್ ಕಹಾನಿಯಾ,ಮತ್ತು ರಜತ್ ಕಪೂರ್ ಅವರ ಮಿಥ್ಯಾ ಚಿತ್ರಗಳಲ್ಲಿ ಗ್ಮಾಮರ್ ರಹಿತ ಪಾತ್ರಗಳಲ್ಲಿ ನಟಿಸಿದ್ದರೂ ಗ್ಲಾಮರ್ ಗರ್ಲ್ ಇಮೇಜಿನಿಂದ ಹೊರಬರಲು ಸಾಧ್ಯವಾಗಿಲ್ಲ.

ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಆರಂಭದಿಂದ ಗ್ಲಾಮರ್ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರಿಂದ ಪ್ರೇಕ್ಷಕರು ಅದನ್ನೆ ಇಷ್ಟ ಪಡುತ್ತಾರೆ.ಗ್ಲಾಮರ್ ಪಾತ್ರಗಳಲ್ಲಿ ನಟಿಸುವುದರಲ್ಲಿ ನನಗೆ ಎಕ್ಸ್‌ಪೋಸ್ ಮಾಡುವುದರಲ್ಲಿ ಯಾವುದೇ ತಪ್ಪು ಕಾಣುತ್ತಿಲ್ಲ ಎಂದು ನೇಹಾ ಹೇಳಿದ್ದಾರೆ.ಕೆಲ ದಿನಗಳ ಹಿಂದೆ ಬಾಲಿವುಡ್‌ನಲ್ಲಿ ಶಾರೂಕ್ ಅಥವಾ ಸೆಕ್ಸ್ ಮಾರಾಟವಾಗುತ್ತದೆ ಎಂದು ಹೇಳಿ ವಿವಾದವನ್ನು ಸೃಷ್ಟಿಸಿದ್ದಳು.
ಗ್ಲಾಮರ್ ಅಥವಾ ಎಕ್ಸ್‌ಪೋಸಿಂಗ್ ಪಾತ್ರಗಳಲ್ಲಿ ನಟಿಸಬೇಕಾಗುತ್ತದೆ ಎನ್ನುವ ಕಾರಣಕ್ಕೆ ಪಾತ್ರಗಳಿಂದ ವಿಮುಖಳಾಗುವುದಿಲ್ಲ ಎಂದು ಹೇಳಿದ್ದಾರೆ.

ಆನಂದ್ ಕುಮಾರ್ ಅವರ ದೆಹಲಿ ಹೈಟ್ಸ್ ಪ್ರಿಯದರ್ಶನ್ ಅವರ ಚುಪ್ ಚುಪ್ ಕೆ,ಸಂಜಯ್ ಗುಪ್ತಾ ಅವರ ದಸ್ ಕಹಾನಿಯಾ,ಮತ್ತು ರಜತ್ ಕಪೂರ್ ಅವರ ಮಿಥ್ಯಾ ಚಿತ್ರಗಳಲ್ಲಿ ಗ್ಮಾಮರ್ ರಹಿತ ಪಾತ್ರಗಳಲ್ಲಿ ನಟಿಸಿರುವುದು ಕೇವಲ ನಾನೊಬ್ಬ ಉತ್ತಮ ಕಲಾವಿದೆ, ನಟಿ ಎಂದು ಸಾಬೀತುಪಡಿಸುವುದಕ್ಕೆ ಮಾತ್ರ ಎಂದು ವಿವರಣೆ ನೀಡಿದ್ದಾರೆ.

ಇತ್ತೀಚಿನ ಚಿತ್ರವಾದ ಮಿಥ್ಯಾದಲ್ಲಿ ನಾನೊಬ್ಬ ಗ್ಯಾಂಗ್‌ಸ್ಟರ್‌ನ ಪ್ರೇಮಿಯಾಗಿ ಗ್ಲಾಮರ್‌ರಹಿತವಾಗಿ ನಟಿಸಿದ್ದೇನೆ.ಚಿತ್ರದಲ್ಲಿ ಗ್ಲಾಮರ್‌ಗೆ ಅವಕಾಶವಿಲ್ಲವಾದ್ದರಿಂದ ಗ್ಲಾಮರ್‌ರಹಿತವಾಗಿ ನಟಿಸಿದ್ದೇನೆ. ಪ್ರತಿಭಾವಂತ ನಟರಾದ ನಾಸಿರುದ್ದಿನ್ ಶಾ, ರಣವೀರ್ ಶೌರಿ ಮತ್ತು ವಿನಯ್ ಪಾಠಕ್ ಅವರೊಂದಿಗೆ ನಟಿಸುವುದು ಸುಲಭದ ಕಾರ್ಯವಲ್ಲ. ಉತ್ತಮ ಕಲಾವಿದರಿಗೆ ಮಾತ್ರ ಸಾಧ್ಯ ಎಂದು ನೇಹಾ ಹೇಳಿದ್ದಾರೆ.

Share this Story:

Follow Webdunia kannada