Publish Date: Thu, 09 Aug 2007 (11:45 IST)
Updated Date: Thu, 09 Aug 2007 (11:44 IST)
ಈ ವರ್ಷದ ಬಹು ನಿರೀಕ್ಷೆಯ ಬಾಲಿವುಡ್ ಬ್ಲಾಕ್‌ಬಸ್ಟರ್ 'ಓಂ ಶಾಂತಿ ಓಂ'. ಶಾರೂಕ್ ಖಾನ್ ಬ್ಯಾನರ್‌ನಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರದಲ್ಲಿ ಖಾನ್ ಪತ್ನಿ ಗೌರಿ ಕಾಣಿಸಿಕೊಳ್ಳಲಿದ್ದಾರೆ.
ಗೌರಿಶಾರೂಕ್ ಈ ಮೊದಲು ಫರಾಹ್ ಖಾನ್ ಅವರ 'ಮೆ ಹ್ಞೂ ನಾ' ಚಿತ್ರದಲ್ಲಿ ಕಾಣಿಸಿಕೊಳ್ಳುವ ನಿರೀಕ್ಷೆ ಇತ್ತು. ಹಾಗಾದಲ್ಲಿ ಅದು ಆಕೆಯ ಮೊದಲ ಚಿತ್ರವಾಗಿರುತ್ತಿತ್ತು. ಆದರೆ ತುಂಬಾ ನಾಚುವ ಸ್ವಭಾವದ ಗೌರಿಯನ್ನು ಬಳಿಕ ಕೈಬಿಡಬೇಕಾಗಿ ಬಂತು.
ಓಂ ಶಾಂತಿ ಓಂ ಚಿತ್ರದಲ್ಲಿ ಸಾಂಪ್ರದಾಯಿಕ ಹಿಟ್‌ಸಾಂಗ್‌ವೊಂದರಲ್ಲಿ ಕಾಣಿಸಿಕೊಳ್ಳುವ ಗೌರಿ ವಿಶೇಷ ಪಾತ್ರನಿರ್ವಹಣೆ ಹೊಂದಿರುತ್ತಾರೆ.
ಪಾತ್ರನಿರ್ವಹಣೆಯಲ್ಲಷ್ಟೇ ಬಾಲಿವುಡ್‌ಗೆ ಹೊಸಪರಿಚಯ, ಆದರೆ ಈಕೆ ಶಾರೂಕ್ ಖಾನ್ ಸಿನಿಮಾ ವ್ಯವಸ್ಥಾಪಕಿ ಹಾಗೂ ವಿನ್ಯಾಸಕಾರಿಯಾಗಿ ದಶಕಗಳಿಂದ ಬಾಲಿವುಡ್‌ನಲ್ಲಿದ್ದಾರೆ.
ಶಾರೂಕ್ ಖಾನ್‌ರ ವಸ್ತ್ರ ವಿನ್ಯಾಸಕಾರಳಾಗಿ ಬಾಝಿಗರ್(1993),ಡರ್(1993),ಅಂಜಾಮ್(1994), ರಾಮ್‌ಜಾನೆ(1995) ಚಿತ್ರರಂಗದಲ್ಲಿದ್ದ ಗೌರಿ ಬಳಿಕ ನಿರ್ಮಾಪಕಿಯಾದರು. ಚಿನ್ನಾಭರಣ ಉತ್ಪನ್ನಗಳಿಗೆ ಮಾಡೆಲ್ ಆಗಿಯೂ ಮಿಂಚಿದವರಾಗಿದ್ದಾರೆ.