ಗುತ್ತಿ ಇಲ್ಲದ ಕಪಿಲ್ ಕಾಮಿಡಿ ಷೋ
Publish Date: Tue, 12 Nov 2013 (12:46 IST)
Updated Date: Tue, 12 Nov 2013 (12:46 IST)
ಕಾಮಿಡಿ ನೈಟ್ ವಿತ್ ಕಪಿಲ್ ಕಾರ್ಯಕ್ರಮ ಎಲ್ಲರಿಗೂ ಇಷ್ಟವಾದ ಹಾಸ್ಯ ರಿಯಾಲಿಟಿ ಷೋ. ಇದರಲ್ಲಿ ಕಪಿಲ್ ಶರ್ಮ, ನವಜೋತ್ ಸಿಂಗ್ ಸಿಧು ಸೇರಿದಂತೆ ಪ್ರತಿಭಾವಂತರ ಸಮಾಗಮವೇ ಆಗಿದೆ. ಪ್ರತಿ ಭಾನುವಾರ ರಾತ್ರಿ ಹತ್ತುಗಂಟೆಗೆ ಪ್ರಸಾರ ಆಗುವ ಕಾಮಿಡಿ ಕಾರ್ಯಕ್ರಮದಲ್ಲಿ ಹೆಚ್ಚು ಇಷ್ಟ ಆಗೋದು ಲವಲವಿಕೆಯ ಹಾಸ್ಯ. ಕಲರ್ ವಾಹಿನಿಯ ಈ ರಿಯಾಲಿಟಿ ಷೋ ಹೆಚ್ಚು ಟೀ ಆರ್ ಪಿ ಪಡೆದ ಕಾರ್ಯಕ್ರಮ. ನಿಮಗೆ ಗೊತ್ತಿರಲಿ ಸಲ್ಮಾನ್ ಖಾನ್ ಬಿಗ್ ಬಾಸ್, ಅಮಿತಾಬ್ ಬಚ್ಚನ್ ಸಾಹೇಬರ ಕೌನ್ ಬನೇಗ ಕರೋಡ್ ಪತಿ ಕಾರ್ಯಕ್ರಮಗಳನ್ನು ಸಹ ಕಪಿಲ್ ಕಾಮಿಡಿ ಹಿಂದೆ ಇಕ್ಕಿದೆ.ಇದಲ್ಲಿ ಗುತ್ತಿ ಮತ್ತು ಪಾಲಕ್ ಅನ್ನುವ ಎರಡು ಪಾತ್ರಗಳು ಹೆಚ್ಚು ಗಮನ ಸೆಳೆದವುಗಳು. ಗುತ್ತಿ ಪಾತ್ರವನ್ನು ಸುನಿಲ್ ಗ್ರೋವರ್ ಅನ್ನುವ ಕಲಾವಿದ ಮಾಡ್ತಾ ಇದ್ದರು. ಆತ ಅದೆಷ್ಟರ ಮಟ್ಟಿಗೆ ಜನಕ್ಕೆ ಇಷ್ಟ ಆದ ಅಂದ್ರೆ ಗುತ್ತಿ ಇರದೇ ಇದ್ರೆ ಕಾರ್ಯಕ್ರಮ ನೋಡೋಕೆ ಆಗಲ್ಲ ಅನ್ನಿಸುವಷ್ಟು. ಥೇಟ್ ಹೆಣ್ಣುಮಕ್ಕಳು ಆಡುವಂತೆ ಮಾತನ್ನು ಆಡುತ್ತಾ, ಬಾಡಿ ಲಾಂಗ್ವೇಜ್ ತೋರುತ್ತಾ ಒಟ್ಟಾರೆ ಉಲ್ಲಾಸ ಹರಡುತ್ತಿದ್ದ ಕಲಾವಿದ. ಆದರೆ ಇತ್ತೀಚಿನ ಎಪಿಸೋಡ್ ಗಳಲ್ಲಿ ಆತ ಮಂಗ ಮಾಯಾ. ಅದ್ಯಾಕೆ ಹೀಗಾಯ್ತು ಎಂದು ಕಾರಣ ಹುಡುಕುತ್ತಾ ಹೊರಟಾಗ ತಿಳಿದಿದ್ದು, ಆತನ ಬಗ್ಗೆ ಜನರಿಗೆ ಆಕರ್ಷಣೆ ಹೆಚ್ಚಾದಷ್ಟು ಸುನಿಲ್ ತಮ್ಮ ಮೊತ್ತವನ್ನು ಸಹ ಏರಿಸಿಕೊಂಡು ಹೊರಟರು. ಆದರೆ ಇಂತಹ ಕಲಾವಿದರನ್ನು ಯಾವುದೇ ಚಾನೆಲ್ ಹಾಗೂ ಪ್ರೊಡಕ್ಷನ್ ಟೀಂ ಸಾಕೋಕೆ ಆಗಲ್ಲವಲ್ಲ. ಸೊ ಗುತ್ತಿಗೆ ಗೆಟ್ ಪಾಸ್ ದೊರಕಿತು. ಆದ್ದರಿಂದ ಆತ ಇತ್ತೀಚೆಗೆ ಕಾಮಿಡಿ ಷೋ ನಲ್ಲಿ ಕಾಣಿಸುತ್ತಿಲ್ಲ. ಹೆಸರು ಬಂದ ತಕ್ಷಣ ತಾವು ಹತ್ತಿದ ಎಣಿಯನ್ನೇ ಒಡೆಯಲು ಹೊರಟರೆ ? ಕಪಿಲ್ ಗುತ್ತಿಯನ್ನು ಸಮಾಧಾನ ಮಾಡಿ ಕರೆದುಕೊಂಡು ಬರ್ತಾರೋ ಇಲ್ಲವೋ ಕಾಡು ನೋಡ ಬೇಕಿದೆ. ಸಧ್ಯಕ್ಕಂತೂ ಗುತ್ತಿ ಅಲಭ್ಯ.