Publish Date: Sat, 28 Jul 2007 (13:05 IST)
Updated Date: Sat, 28 Jul 2007 (13:05 IST)
ದೇಶದ ರಾಜಧಾನಿಯಲ್ಲಿ ಜರುಗುತ್ತಿರುವ ಒಸಿಯನ್ ಫಿಲ್ಮೋತ್ಸವದಲ್ಲಿ ಹಿಂದಿ ಚಿತ್ರ 'ಗುಡಿಯಾ' ಪ್ರದರ್ಶನಗೊಳ್ಳುತ್ತಿದೆ. ಆದರೆ ಅದರ ನಾಯಕಿ ದಿವ್ಯಾದತ್ತಗೆ ಇದು ಹಿತಕರವಾಗಿಲ್ಲ.
ಗುಡಿಯಾ ಇನ್ನೂ ಅಪೂರ್ಣಹಂತದಲ್ಲಿರುವ ಚಿತ್ರವಂತೆ. ಆದರೆ ಚಿತ್ರೋತ್ಸವದಲ್ಲಿ ಪಾಲ್ಗೊಂಡು ಪ್ರದರ್ಶಿಸುವ ಮೂಲಕ, ಸಿನೆಮಾ ಹಾಗೂ ಅದರ ಹೂರಣದ ಪ್ರಚಾರ ಪಡೆಯಲು ಸಾಧ್ಯ ಎಂಬುದು ನಿರ್ದೇಶಕ ಪ್ರಭಾಕರ ಶುಕ್ಲಾ ಅವರ ಅಭಿಪ್ರಾಯ.
ಆದರೆ ದಿವ್ಯಾಗೆ ಇದು ನೋವು ನೀಡಿದೆ. ಇನ್ನೂ ನಿರ್ಮಾಣೋತ್ತರ ಸಂಕಲನ ಕಾರ್ಯ ಪೂರ್ಣಗೊಳ್ಳದಿರುವ ಚಿತ್ರದಲ್ಲಿ ವೀಕ್ಷಕರಿಗೆ ಹಿತವಾಗಿ ವೀಕ್ಷಿಸಲು ಏನಿರುತ್ತದೆ ಎಂಬುದು ಆಕೆಯ ನೋವಿಗೆ ಕಾರಣ. ಅಲ್ಲದೆ, ಇದು ಆಕೆಯ ಗ್ಲಾಮರ್‌ಗೆ ಧಕ್ಕೆ ತರಬಹುದೆಂಬ ಭಯವೂ ಇದೆಯಂತೆ.
ಚಿತ್ರದ ಆತಿಥೇಯರಾದ ಮನಿಷಾ ಕೋಯ್ರಾಲಾ ಹಾಗೂ ಗುಲ್ ಪನಾಂಗ್ ಇವರೆಲ್ಲಾ ಬ್ಯುಸಿಯಾಗಿದ್ದರೂ, ಸ್ವತಃ ನಾಯಕಿ ದಿವ್ಯಾ ದೆಹಲಿಯಲ್ಲೇ ಇದ್ದರೂ ಪ್ರದರ್ಶನದಲ್ಲಿ ಚಿತ್ರಕ್ಕೆ ಸಂಬಂಧಿಸಿ ಪಾಲ್ಗೊಳ್ಳುತ್ತಿಲ್ಲ ಎನ್ನಲಾಗುತ್ತಿದೆ.