Article Bollywood Gossips %e0%b2%97%e0%b2%bf%e0%b2%a8%e0%b3%8d%e0%b2%a8%e0%b2%bf%e0%b2%b8%e0%b3%8d %e0%b2%a6%e0%b2%be%e0%b2%96%e0%b2%b2%e0%b3%86%e0%b2%af%e0%b2%b2%e0%b3%8d%e0%b2%b2%e0%b2%bf %e0%b2%ac%e0%b2%be%e0%b2%b8%e0%b3%8d 113101700005_1.htm

Daily Horoscope

Select Your Language

Notifications

webdunia
webdunia
webdunia
webdunia

ಗಿನ್ನಿಸ್ ದಾಖಲೆಯಲ್ಲಿ ಬಾಸ್ !

ಅಕ್ಷಯ್ ಕುಮಾರ್
PR
ಆಕ್ಷನ್ ಕಿಂಗ್ ಅಕ್ಷಯ್ ಕುಮಾರ್ ನಟಿಸಿರುವ ಚಿತ್ರ ಬಾಸ್ ಪೋಸ್ಟರ್ ಈಗ ಗಿನ್ನಿಸ್ ದಾಖಲೆ ಮಾಡಿದೆ. ವಿಶ್ವದಲ್ಲೇ ಅತ್ಯಂತ ದೊಡ್ಡ ಪೋಸ್ಟರ್ ತಯಾರಿಸಿ ಅಕ್ಷಯ ಅಭಿಮಾನಿಗಳು ರೆಕಾರ್ಡ್ ಮುರಿದಿದ್ದಾರೆ. ಮೈಕಲ್ ಜಾಕ್ಸನ್ ಬಗ್ಗೆ ತಯಾರಿಸಿದ ದಿಸ್ ಈಜ್ ಇಟ್ ಸಿನಿಮಾ ಪೋಸ್ಟರ್ ಸಹ ಗಿನ್ನಿಸ್ ದಾಖಲೆ ಮಾಡಿದೆ. 58 .87 ಅಗಲ ಮತ್ತು 54.94 ಎತ್ತರದ ಈ ಪೋಸ್ಟರ್ ಇಂಗ್ಲೆಂಡ್ ನಲ್ಲಿರುವ ಅಕ್ಷಯ ಅಭಿಮಾನಿಗಳು ಬಿಡುಗಡೆ ಮಾಡಿದ್ದಾರೆ. ಪೋಸ್ಟರ್ ರೆಕಾರ್ಡ್ ಆದ ಬಗ್ಗೆ ಅಕ್ಕಿಗೆ ಶಾನೆನೆ ಖುಷಿ ಆಗಿದೆ.

ಸಿನಿಮಾ ಸೂಪರ್ ಹಿಟ್ ಆಗೋದು ಖಂಡಿತ ಅಂತ ಆತ ಈಗ ನಂಬಿದ್ದಾರೆ. ಬಾಸ್ ಪ್ರತಿಯೊಂದು ಸೀನ್ ಪ್ರೇಕ್ಷಕರಿಗೆ ಇಷ್ಟ ಆಗುತ್ತದೆ . ನಿರ್ದೇಶಕ ಇದನ್ನು ಅದ್ಭುತವಾಗಿ ಸಿದ್ಧ ಮಾಡಿದ್ದಾರೆ ಎಂದು ಹಾಡಿ ಹೊಗಳಿದ್ದಾರೆ ಅಕ್ಷಯ್. ದಿಸ್ ಈಜ್ ಇಟ್ ಚಿತ್ರದ ಪೋಸ್ಟರ್ ತಯಾರಿಸಿದ ಕಂಪನಿಯೇ ಅಕ್ಷಯ್ ಸಿನಿಮಾ ಪೋಸ್ಟರನ್ನು ತಯಾರಿಸಿದೆಯಂತೆ. ಆಂತೋನಿ ಡಿಸೋಜ ಈ ಚಿತ್ರದ ನಿರ್ದೇಶಕ. ಮಿಥುನ್ ಚಕ್ರವರ್ತಿ, ಡ್ಯಾನಿ ಡೆ೦ಜೋ0ಗಪ್ಪ, ಅದಿತಿ ರಾವ್, ಹೈದರಿ, ಪರಿಕ್ಷಿತ್ ಸಹಾನಿ ಮುಖ್ಯ ಭೂಮಿಕೆಯಲ್ಲಿದ್ದಾರೆ. ಈ ಶುಕ್ರವಾರ ಚಿತ್ರ ಬಿಡುಗಡೆ ಆಗುತ್ತಿದೆ. ಲ್ಯಾಟಿನ್ ಅಮೆರಿಕಾಗೂ ಹೋಗುತ್ತಿದೆ ಈ ಚಿತ್ರ. ಬಾಲಿವುಡ್ ಇತಿಹಾಸದಲ್ಲಿ ಇದೆ ಮೊದಲ ಬಾರಿ ಹಿಂದಿ ಚಿತ್ರ ಲ್ಯಾಟಿನ್ ಅಮೆರಿಕದತ್ತ ಪಯಣಿಸಿದೆ. ಪನಾಮ , ಪೆರು, ಫ್ರಾನ್ಸ್ ಸೇರಿದಂತೆ ಅನೇಕ ದೇಶಗಳಲ್ಲಿ ಚಿತ್ರ ಬಿಡುಗಡೆ ಆಗುತ್ತಿದೆ.

Share this Story:

Follow Webdunia kannada