Article Bollywood Gossips %e0%b2%97%e0%b2%be%e0%b2%af%e0%b2%95%e0%b2%a8%e0%b2%be%e0%b2%a6 %e0%b2%b9%e0%b3%83%e0%b2%a4%e0%b2%bf%e0%b2%95%e0%b3%8d 108072200025_1.htm

Select Your Language

Notifications

webdunia
webdunia
webdunia
webdunia

ಗಾಯಕನಾದ ಹೃತಿಕ್

ಹೃತಿಕ್ ರೋಶನ್
ಹೃತಿಕ್ ರೋಶನ್ ಅಭಿಮಾನಿ ಬಳಗಕ್ಕೆ ಈಗ ಅವನನ್ನು ಆರಾಧಿಸಲು ಇನ್ನೊಂದು ಕಾರಣ ದೊರಕುತ್ತಿದೆ. ತನ್ನ ನೃತ್ಯದ ಮೂಲಕ ದೇಶದೆಲ್ಲಡೆ ಪುಳಕ ಹುಟ್ಟಿಸಿದ ಹೃತಿಕ್ ತನ್ನ ಮುಂಬರುವ ಚಿತ್ರ 'ಕೈಟ್ಸ್‌'ನಲ್ಲಿ ಗಾಯಕನಾಗಿ ತನ್ನ ಸ್ವರ ಮಾಧುರ್ಯದ ಮಾಂತ್ರಿಕತೆ ಪರೀಕ್ಷಿಸಲಿದ್ದಾನೆ.

ಈ ಮೊದಲು ತಮ್ಮ ಚಿತ್ರಕ್ಕೆ ಹಿನ್ನೆಲೆ ಸಂಗೀತಗಾರರಾದ ಬಿಗ್ ಬಿ, ಅಮೀರ್, ಶಾರುಖ್, ಸಂಜಯ್ ಮತ್ತಿತರ ಬಿ-ಟೌನ್ ಬಾಪ್‌ಗಳಕೂಟಕ್ಕೆ ಸೇರಿಕೊಳ್ಳುತ್ತಿರುವ ಹೃತಿಕ್ ಚಿತ್ರದಲ್ಲಿ ಬಹಳಷ್ಟು ಹಾಡುಗಳನ್ನು ಹಾಡಿದ್ದಾನೆ. ಈ ಗೀತೆಗಳು ಇಂಗ್ಲಿಷ್‌ನಲ್ಲಿವೆ ಎಂದು ಪತ್ರಿಕೆಯೊಂದು ಮಾಹಿತಿಯನ್ನು ಹೊರಗೆಡಹಿದೆ.

ರಾಕೇಶ್ ರೋಶನ್‌ರ ಚಿತ್ರ ಸಂಸ್ಥೆಯಡಿಯಲ್ಲಿ ನಿರ್ಮಾಣವಾಗುತ್ತಿರುವ ಚಿತ್ರ 'ಕೈಟ್ಸ್' ಅನುರಾಗ್ ಬಸು ಅವರಿಂದ ನಿರ್ದೇಶಿತವಾಗಲಿದೆ. ಲ್ಯಾಟಿನ್ ನಟಿ ಬಾರ್ಬರಾ ಮೋರಿ ಹೃತಿಕ್‍ಗೆ ನಾಯಕಿ. ಕಂಗನಾ ರಾಣಾವತ್ ಸಹ ತಾರಗಣದಲ್ಲಿದ್ದಾರೆ.

ಈ ಮೊದಲು ಬಾಲಿವುಡ್‌ಗೆ ಹೃತಿಕ್‌ನನ್ನು ನಟನಾಗಿ ಪರಿಚಯಿಸಿದ್ದು ತಂದೆ ರೋಶನ್, ಈಗ ಮತ್ತೆ ತಮ್ಮದೇ ಚಿತ್ರ ಸಂಸ್ಥೆಯಡಿಯಲ್ಲಿ ಮಗನನ್ನು ಗಾಯಕನನ್ನಾಗಿಸಿ ಎಂಟ್ರಿ ಕೊಡಿಸುತ್ತಿದ್ದಾರೆ. ರಾಕೇಶ್ ರೋಶನ್ ಮತ್ತೊಮ್ಮೆ ತಮ್ಮ ಮಗನಿಗೆ ಶುಭಪ್ರದರಾಗುತ್ತಾರೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.

Share this Story:

Follow Webdunia kannada