ಗಾಂಧಿ ಮೈ ಫಾದರ್-ಸಂಬಂಧಗಳ ಶೋಧ
Publish Date: Tue, 26 Jun 2007 (12:36 IST)
Updated Date: Tue, 26 Jun 2007 (12:33 IST)
ರಾಷ್ಟ್ರಪಿತ ಮಹಾತ್ಮಾ ಗಾಂಧಿ ಕುರಿತು ಹತ್ತು ಹಲವು ಚಿತ್ರಗಳು ಈಗಾಗಲೇ ಬೆಳ್ಳಿ ಪರದೆಯ ಮೇಲೆ ರಾರಾಜಿಸಿವೆ. ಆದರೆ ವಿಭಿನ್ನ ಶೈಲಿಯ ಚಿತ್ರ ಗಾಂಧಿ ಮೈ ಫಾದರ್ ತೆರೆಕಾಣಲಿದೆ.ಆದರೆ ಆ ಯಾವುದೂ ಚಿತ್ರಗಳು ಮಹಾತ್ಮನ ಕೌಟುಂಬಿಕ ಹಿನ್ನಲೆ ಮತ್ತು ತಂದೆಯಾಗಿ ಅವರ ಜೀವನ ಮತ್ತು ಪಾತ್ರದ ಕುರಿತು ಸ್ಪಷ್ಟವಾದ ಚಿತ್ರಣವನ್ನು ನೀಡಿಲ್ಲ. ಮಹಾತ್ಮರಾಗಿರುವ ಗಾಂಧೀಜಿಯವರ ವೈಯಕ್ತಿಕ ಜೀವನದ ಕುರಿತು ಮತ್ತು ತಂದೆಯ ಕರ್ತವ್ಯವನ್ನು ನಿರ್ವಹಿಸುವಲ್ಲಿ ವಿಫಲರಾದರೆ ಎಂಬ ಚಿಂತನೆಗೆ ಪ್ರೇಕ್ಷಕರನ್ನು ಸೆಳೆಯುವ ವಿಭಿನ್ನ ಚಿತ್ರ ಸದ್ಯದಲ್ಲೆ ತೆರೆಗೆ ಬರಲಿದೆ. ನಟ ಅನಿಲ್ ಕಪೂರ್ ಗಾಂಧಿ ಮೈ ಫಾದರ್ ಚಿತ್ರದ ನಿರ್ಮಾಣಕ್ಕೆ ಕೈಹಾಕಿದ್ದಾರೆ. ಚಿತ್ರ ರಾಷ್ಟ್ರಪಿತ ಮತ್ತು ಅವರ ಹಿರಿಯ ಮಗ ಹರಿಲಾಲ್ ಗಾಂಧಿ ನಡುವಿನ ಪಿತೃ-ಪುತ್ರನ ಸಂಬಂಧಗಳನ್ನು ಎಳೆಎಳೆಯಾಗಿ ಬಿಡಿಸುವ ಪ್ರಯತ್ನ ಮಾಡುತ್ತದೆ.ರಂಗ ನಿರ್ದೇಶಕ ಫಿರೋಜ್ ಖಾನ್ ಚಿತ್ರವನ್ನು ನಿರ್ದೇಶಿಸುತ್ತಿದ್ದು, ಗಾಂಧಿಜಿಯ ವೈಯಕ್ತಿಕ ಕೋಪ ಮತ್ತು ದಾರಿ ತಪ್ಪಿದ ಹರಿಲಾಲ್ ನಡುವಿನ ವಾಗ್ಯುದ್ಧಗಳನ್ನು ಖ್ಯಾತ ನಾಟಕ ಮಹಾತ್ಮ ವಿರುದ್ದ ಗಾಂಧಿ ನಾಟಕದ ಪ್ರತಿರೂಪವೇ ಬೆಳ್ಳಿತೆರೆಗೆ ಬರುತ್ತಿದೆ.ಚಿತ್ರ ಮಹಾತ್ಮಾ ಗಾಂಧಿಯನ್ನು ಎಲ್ಲಿಯೂ ರಾಷ್ಟ್ರಪಿತನ ಸಾರ್ವಜನಿಕ ಜೀವನವನ್ನು ತೋರಿಸದೆ ಕೇವಲ ಹರಿಲಾಲ್ ಮತ್ತು ಮಹಾತ್ಮನ ಸಂಬಂಧಗಳ ಸುತ್ತ ಸುತ್ತುತ್ತದೆ. ಅಕ್ಷಯ್ ಖನ್ನಾ ಹರಿಲಾಲ್ ಪಾತ್ರದಲ್ಲಿ ಅಭಿನಯಿಸಿದ್ದು, ಗಾಂಧಿ ಪಾತ್ರಕ್ಕೆ ದರ್ಶನ್ ಜಾರಿವಾಲಾ ಜೀವ ತುಂಬುವ ಪ್ರಯತ್ನ ಮಾಡಿದ್ದಾರೆ. ಚಿತ್ರದ ಚಿತ್ರಿಕರಣವನ್ನು ದಕ್ಷಿಣ ಆಫ್ರಿಕಾ ,ಅಹ್ಮದಾಬಾದ್,ಬೋಯಿರ್ ಮತ್ತು ಮುಂಬೈಗಳಲ್ಲಿ ಮಾಡಲಾಗಿದ್ದು, ಇತರ ಪಾತ್ರಗಳಲ್ಲಿ ಭೂಮಿಕಾ ಚಾವ್ಲಾ, ಶೆಫಾಲಿ ಶಹಾ ಕಾಣಿಸಿಕೊಂಡಿದ್ದಾರೆ.