Publish Date: Tue, 24 Jul 2007 (11:16 IST)
Updated Date: Tue, 24 Jul 2007 (11:14 IST)
ಗಾಢಪ್ರೇಮ, ಸಹಜ ಕೌಟುಂಬಿಕ ಕಥಾನಕ, ತಾಜಾ ಸಾಮಾಜಿಕ ಚಿತ್ರಣಗಳು ಇದು ನಿರ್ದೇಶಕ ಅನಿಲ್ ಶರ್ಮಾ ಅವರ ಶೈಲಿ.
ಆದರೆ ಅವರೀಗ ತಮ್ಮ ಶೈಲಿಯ ಮಗ್ಗುಲು ಬದಲಿಸುತ್ತಿದ್ದು, ಹಾಸ್ಯ ಕಥಾನಕ ಹೊತ್ತ ಚಿತ್ರ ನಿರ್ದೇಶನಕ್ಕೆ ಸಿದ್ಧರಾಗಿದ್ದಾರೆ. ಗದ್ದಾರ್-ಏಕ್ ಪ್ರೇಮ್ ಕಥಾ, ಅಪ್ನೇ ಎಂಬ ಕೌಟುಂಬಿಕ, ಹುಕೂಮತ್‌ನಲ್ಲಿ ಸಾಮಾಜಿಕ ಚಿತ್ರಣ ನೀಡಿದ ಅವರು ಹಾಸ್ಯ ಚಿತ್ರಕ್ಕೆ ಕೈಯಿಟ್ಟಿದ್ದಾರೆ.
ಕಳೆದ ಎರಡು ದಶಕಗಳಿಂದ ಹಾಸ್ಯಚಿತ್ರವೊಂದನ್ನು ನಿರ್ದೇಶಿಸುವ ಕನಸು ಹೊಂದಿದ್ದೆ. ಕೊನೆಗೂ ಇದೀಗ ಆದು ನನಸಾಗುತ್ತಿದೆ. ಹಾಸ್ಯ ಚಿತ್ರಕ್ಕಾಗಿ ಕಥೆ ಸಿದ್ಧವಾಗಿದೆ. ಚಿತ್ರಕಥೆ ರಚನೆ ಪ್ರಗತಿಯಲ್ಲಿದೆ.
ಪ್ರಸ್ತುತ ಹಾಸ್ಯಚಿತ್ರ ಬಾಲಿವುಡ್‌ನಲ್ಲಿ ಈ ವರೆಗಿನ ಸಿನೆಮಾಗಳಿಗಿಂತ ತೀರಾ ಭಿನ್ನವಾಗಿರುತ್ತದೆ. ಪ್ರೇಕ್ಷಕರಲ್ಲಿ ಯಾರನ್ನೂ ಘಾಸಿಗೊಳಿಸಲಾರದು ಎಂಬ ಭರವಸೆಯನ್ನೂ ನೀಡಿದ್ದಾರೆ.