Publish Date: Tue, 18 Sep 2007 (15:34 IST)
Updated Date: Tue, 18 Sep 2007 (15:34 IST)
ಬಾಲಿವುಡ್ ಜಗತ್ತು ನೆಚ್ಚಿಕೊಂಡಿರುವ ಅತ್ಯಂತ ಪ್ರೀತಿಪಾತ್ರ ದೇವರು ಗಣೇಶ. ಗಣೇಶ ಚತುರ್ಥಿಯ ಆಚರಣೆ ಕೂಡ ಪೂರ್ಣೋಪಾದಿಯಲ್ಲಿ ಇರುತ್ತದೆ. ಗಣೇಶನಿಗೆ ಅಲಂಕಾರ ಆಚರಣೆಯ ಮುಖ್ಯ ಭಾಗವಾಗಿರುತ್ತದೆ.
ಗಣೇಶನ ಕಿವಿಗೆ ಬಿದ್ದರೆ ನಮ್ಮ ಇಷ್ಟಗಳು ನೆರವೇರುತ್ತವೆ ಎನ್ನುವುದು ಬಾಲಿವುಡ್‍ನಲ್ಲಿ ನಂಬಿಕೆ. ನಾನಾ ಪಾಟೇಕರ್ ಗಣೇಶ ಚತುರ್ಥಿಯನ್ನು ವಿಜೃಂಭಣೆಯಿಂದ ಆಚರಿಸುವ ನಟರಲ್ಲೊಬ್ಬ. ಅವನು ಗಣೇಶನ ಎಲ್ಲ ಅಲಂಕಾರ ಮತ್ತು ಪೂಜೆಗಳನ್ನು ನೆರವೇರಿಸಲು ವೈಯಕ್ತಿಕವಾಗಿ ಭಾಗಿಯಾಗುತ್ತಾನೆ.
ನಾನಾ ಪಾಟೇಕರ್ ಗಣೇಶನ ದರ್ಶನ ಪಡೆಯಲು ಜನಸಾಮಾನ್ಯರಿಗೂ ಅವಕಾಶ ನೀಡುತ್ತಾನೆ. ಸಲ್ಮಾನ್ ಖಾನ್ ಕುಟುಂಬ ಕೂಡ ಗಣೇಶೋತ್ಸವ ಆಚರಿಸುತ್ತದೆ. ಸಲ್ಮಾನ್ ಗಣೇಶನ ವಿಸರ್ಜನೆಗೆ ಮುನ್ನ ತನ್ನ ಸೋದರಳಿಯನನ್ನು ಕಂಕುಳಲ್ಲಿ ಇಟ್ಟುಕೊಂಡ ಸಲ್ಮಾನ್ ತನ್ನ ಮಲತಾಯಿ ಹೆಲೆನ್ ಜತೆ ಮೆರವಣಿಗೆಯಲ್ಲಿ ನೃತ್ಯ ಮಾಡಿ ಹರ್ಷಿಸಿದ.
ಆರ್‌ಕೆ ಸ್ಟುಡಿಯೊಗೆ ಕಪೂರ್ ಕುಟುಂಬ ಪ್ರತಿವರ್ಷ ಗಣೇಶನನ್ನು ತರುತ್ತದೆ. ಜಿತೇಂದ್ರ ಮತ್ತು ರಾಖಿ ಸಾವಂತ್ ಕೂಡ ಪ್ರತಿವರ್ಷ ಉತ್ಸವ ಆಚರಿಸುತ್ತಾರೆ. ಧಮಾಲ್ ಚಿತ್ರದ ವಿಶೇಷ ಪ್ರದರ್ಶನದಲ್ಲಿ ರಿತೇಶ್ ದೇಶ್‌ಮುಖ್ ಕ್ಯಾನ್ಸರ್ ರೋಗಿಗಳನ್ನು ನೋಡಲು ಹೋದಾಗ ತಮ್ಮ ಜತೆ ಗಣೇಶನ ವಿಗ್ರಹವನ್ನೂ ಇಟ್ಟುಕೊಂಡಿದ್ದರು.
ಬಾಲಿವುಡ್ ಚಿತ್ರಜಗತ್ತಿನಲ್ಲಿ ವಿಘ್ನನಿವಾರಕ ಗಣಪತಿ ಅತೀ ಗೌರವಾನ್ವಿತ ದೇವರು. ಗಣೇಶೋತ್ಸವದ ಆಡಂಬರದ ಆಚರಣೆ ನೋಡಿದಾಗ ಗಣೇಶನ ಮೇಲೆ ಅವರಿಗಿರುವ ಭಕ್ತಿಗೆ ಸಾಕ್ಷಿಯಾಗಿದೆ.