Article Bollywood Gossips %e0%b2%97%e0%b2%9c%e0%b2%a8%e0%b2%bf %e0%b2%90%e0%b2%a6%e0%b3%87 %e0%b2%a6%e0%b2%bf%e0%b2%a8%e0%b2%a6%e0%b2%b2%e0%b3%8d%e0%b2%b2%e0%b2%bf 100 %e0%b2%95%e0%b3%8b%e0%b2%9f%e0%b2%bf %e0%b2%a6%e0%b2%be%e0%b2%96%e0%b2%b2%e0%b3%86 108123100014_1.htm

Daily Horoscope

Select Your Language

Notifications

webdunia
webdunia
webdunia
webdunia

ಗಜನಿ: ಐದೇ ದಿನದಲ್ಲಿ 100 ಕೋಟಿ ದಾಖಲೆ

ಗಜನಿ
IFM
ಲಗಾನ್‌ನಲ್ಲಿ ಕ್ರಿಕೆಟ್ ಆಡಿದ ಭುವನ್(ಅಮೀರ್ ಖಾನ್) ಈ ವರ್ಷ ಗಜನಿಯಾಗಿ ಬಾಕ್ಸ್ ಅಫೀಸಿನಲ್ಲಿ ಶತಕ ಬಾರಿಸಿದ್ದಾರೆ.

ಅಮೀರ್ ಖಾನ್‌ರ ಗಜನಿ ಬಿಡುಗಡೆಯಾದ ಐದು ದಿನಗಳಲ್ಲಿ ಬಾಲಿವುಡ್‌ನ 150 ವರ್ಷಗಳ ಇತಿಹಾಸದಲ್ಲಿಯೇ ಅತಿ ಹೆಚ್ಚು ವ್ಯವಹಾರ ನಡೆಸಿದ ಚಿತ್ರವಾಗಿ ದಾಖಲೆ ಸೃಷ್ಟಿಸಿದೆ. ಒಂದು ವಾರದಲ್ಲಿ ಗಜನಿ 120 ಕೋಟಿ ವ್ಯವಹಾರ ನಡೆಸಿದ ದಾಖಲೆ ಸ್ಥಾಪಿಸುವ ನಿರೀಕ್ಷೆ ಇದೆ.

ಚಿತ್ರ ಪಂಡಿತರ ಪ್ರಕಾರ ಮುಂಬರುವ ಮೂರು, ನಾಲ್ಕು ತಿಂಗಳಲ್ಲಿ ಈ ಚಿತ್ರ 150 ರಿಂದ 160 ಕೋಟಿ ವ್ಯವಹಾರ ನಡೆಸಬಹುದು.

ವಿದೇಶಗಳಲ್ಲಿ 20 ಕೋಟಿ: ಗಜನಿ ಭಾರತದಲ್ಲಷ್ಟೇ ಅಲ್ಲದೇ ವಿದೇಶಗಳಲ್ಲೂ ಯಶಸ್ವಿಯೆನಿಸಿದೆ. ವಿಶ್ವದ 22 ರಾಷ್ಟ್ರಗಳಲ್ಲಿ ಪ್ರದರ್ಶನ ಕಾಣುತ್ತಿರುವ ಗಜನಿ ಮೊದಲ ದಿನಗಳಲ್ಲಿ ಒಟ್ಟು 40 ಲಕ್ಷ ಡಾಲರ್ (ಸುಮಾರು 20 ಕೋಟಿ) ಗಳಿಸಿದೆ.

ಬ್ರಿಟನ್, ಐರ್ಯಲ್ಯಾಂಡ್, ಜರ್ಮನ್, ನಾರ್ವೆ, ಡೆನ್ಮಾರ್ಕ್, ಹಾಲೆಂಡ್, ನ್ಯೂಜಿಲ್ಯಾಂಡ್, ಫಿಜಿ ಮಾರಿಷಿಯಸ್, ಹಾಂಗ್ ಕಾಂಗ್, ಸಿಂಗಾಪುರಗಳಲ್ಲಿ ಪ್ರದರ್ಶಿತವಾದ ಗಜನಿ ಇಲ್ಲಿಯೂ ದಾಖಲೆ ಬರೆದಿದೆ.

Share this Story:

Follow Webdunia kannada