Publish Date: Fri, 22 Jun 2007 (12:51 IST)
Updated Date: Fri, 22 Jun 2007 (12:50 IST)
'ಗಜನಿ' ಹಿಂದಿ ರೀಮೇಕ್‌ನಲ್ಲಿ ಪ್ರಜ್ವಲಿಸುತ್ತಿರುವ ತಾರೆ ಅಮೀರ್ ಖಾನ್ ಹಲವು ಬೆಡಗಿಯರಿಂದ ಕೊನೆಗೂ ಇಬ್ಬರನ್ನು ತಮ್ಮ ಚಿತ್ರದ ನಾಯಕಿಯರಾಗಿ ಆಯ್ಕೆಮಾಡಿದ್ದಾರೆ.
ಹಿಂದಿಯ ಪ್ರಸ್ತುತ ಗಜನಿ ಚಿತ್ರದ ನಾಯಕ ಅಮೀರ್ ಖಾನ್‌ನೊಂದಿಗೆ ಇಬ್ಬರು ನಾಯಕಿಯರ ಅಗತ್ಯವಿದೆ. ಮೊದಲರ್ಧದಲ್ಲಿ ಒಬ್ಬಳು, ಕೋನೆಯ ಅರ್ಧದಲ್ಲಿ ಇನ್ನೊಬ್ಬಳು. ಇದು ಸಿನಿಮಾದ ಹೊಸ ವಿಧಾನ.
ಗಜನಿಯ ಆರಂಭ ಭಾಗಕ್ಕಾಗಿ ತಮಿಳು ಸಿನಿರಂಗದ ಹೆಸರಾಂತ ತಾರೆ ಆಸಿನ್ ಆಯ್ಕೆಯಾಗಿದ್ದಾರೆ. ಉಳಿದರ್ಧ ಭಾಗದಲ್ಲಿ ನಟಿಸಲು ನಿಶಬ್ದ್ ಚಿತ್ರದ ನಾಯಕಿ ಜಿಯಾ ಖಾನ್ ಓಕೆ ಆಗಿದ್ದಾರೆ. ಇದಕ್ಕಾಗಿ ಪ್ರಿ.ಯಾಂಕಾ ಛೋಪ್ರಾ, ಕಂಗಾನಾ ರಾನೋಟ್ ಮುಂತಾದವರು ಯಾದಿಯಲ್ಲಿದ್ದರು.
ಹಿಂದಿಯ ಭಾಷೆಯ ಪತ್ತೆದಾರಿ ಶೈಲಿಯ ಕಥೆ ಹೊಂದಿದ ಗಜನಿಗಾಗಿ ಎ.ಆರ್.ಮುರುಗದಾಸ್ ನಿರ್ಮಾಣದಲ್ಲಿ ಅಮೀರ್ ನಾಯಕತ್ವದ ಚ್ತರೀಕರಣ ಭರದಿಂದ ಸಾಗಿದೆ. ವಿಭಿನ್ನ ಶೈಲಿಯ ಚಿತ್ರಣವೂ ಇದೆ.