ಗಂಡ-ಹೆಂಡತಿಯಾದ ರಣಬೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ !
, ಗುರುವಾರ, 9 ಜನವರಿ 2014 (16:52 IST)
ಕಳೆದ ವರ್ಷ ಬಾಲಿವುಡ್ ಸೂಪರ್ ಹಿಟ್ ಸಿನಿಮಾಗಳಲ್ಲಿ ಗಲಿಯೋಂಕಿ ರಾಸ್ ಲೀಲಾ ರಾಮ್ ಲೀಲಾ ಚಿತ್ರವೂ ಸಹ ಒಂದಾಗಿದೆ. ಅದರಲ್ಲಿ ದೀಪಿಕಾ ಪಡುಕೋಣೆ ಮತ್ತು ರಣಬೀರ್ ಸಿಂಗ್ ಅವರು ಒಟ್ಟಾಗಿ ನಟಿಸಿ ಕಿಸ್ಸುಗಳನ್ನು ವಿನಿಮಯ ಮಾಡಿಕೊಂಡು ಇಡೀ ಭಾರತೀಯ ಚಿತ್ರ ರಸಿಕರ ಹೃದಯದ ಬಡಿತ ಹೆಚ್ಚಿಸಿದ್ದರು. ಈಗ ಹೇಳ ಹೊರಟಿರುವ ಸುದ್ದಿ ಏನೆಂದರೆ ಆ ಚಿತ್ರದಲ್ಲಿ ಪ್ರೇಮಿಗಳಾಗಿದ್ದ ಈ ಜೋಡಿ ಕೊಂಕಣಿ ಮತ್ತುಇಂಗ್ಲೀಷ್ ಭಾಷೆಗಳಲ್ಲಿ ಒಟ್ಟಿಗೆ ತಯಾರಾಗುತ್ತಿರುವ ಮತ್ತು ಅಡಜನಿಯ ಅವರ ಫೈಂಡಿಂಗ್ ಫನ್ನಿ ಫರ್ನಾಂಡೀಸ್ ಚಿತ್ರದಲ್ಲಿ ಗಂಡ ಹೆಂಡತಿಯಾಗಿ ಪ್ರಮೋಷನ್ ಪಡೆದಿದ್ದಾರೆ. ಇವರ ಜೊತೆ ಅರ್ನ್ನ ಕಪೂರ್ ಸಹ ನಟಿಸುತ್ತಿದ್ದಾರೆ. ಈ ಚಿತ್ರದಲ್ಲು ಸಹ ರಣವೀರ್ ಮತ್ತು ದೀಪಿಕಾ ನಡುವಿನ ಕೆಮಿಸ್ಟ್ರಿ ಅದ್ಭುತವಾಗಿದೆ ಎಂದಿದ್ದಾರೆ ನಿರ್ದೇಶಕರು. ಅರ್ಜುನ್ ಕಪೂರ್ ಜೊತೆಗೂ ಈ ಚಿತ್ರದಲ್ಲಿ ರಣವೀರ್ ನಟಿಸಿದ್ದರೂ,ಹೆಚ್ಚಾಗಿ ಕಾಣಿಸಿಕೊಂಡಿರುವುದು ಡಿಪ್ಸ್ ಜೊತೆಗೇಂತೆ. ಗೋವಾದಲ್ಲಿ ಇದ್ದ ಸ್ವಲ್ಪ ಕಾಲದಲ್ಲಿಯೇ ಬೇಕಾದಷ್ಟು ಶಾಪಿಂಗ್ ಮಾಡಿದರಂತೆ ರಣವೀರ್.ಆದರೇ ಯಾರಿಗೆ ಮತ್ತು ಯಾರ ಜೊತೆಗೆ ಶಾಪಿಂಗ್ ಮಾಡಿದರು ಎನ್ನುವ ರಹಸ್ಯ ಇನ್ನೂ ಲೀಕಾಗಿಲ್ಲ! ಈ ಚಿತ್ರದಲ್ಲಿ ದೀಪಿಕಾಳ ಗಂಡನ ಪಾತ್ರದಲ್ಲಿ ನಟಿಸಿರುವ ರಣವೀರ್ ಗೆ ಆಕೆಯೊಂದಿಗೆ ರೀಲ್ ಅಲ್ಲ ರಿಯಲ್ ಗಂಡ ಅನ್ನಿಸುವಂತಹ ಅನುಭೂತಿ ಉಂಟಾಗಿತ್ತಂತೆ! ಹಾಗದರೆ ಆ ಚಿತ್ರದಲ್ಲಿ ಮತ್ತೆ ಇನ್ನೆಷ್ಟು ಹಾಟ್ ದೃಶ್ಯಗಳು ಇರಬಹುದು ಎಂದು ರಸಿಕ ಶಿಖಾಮಣಿಗಳು ಚಪ್ಪರಿಸುತ್ತಿದ್ದಾರಂತೆ !