Article Bollywood Gossips %e0%b2%96%e0%b3%8d%e0%b2%af%e0%b2%be%e0%b2%a4 %e0%b2%ac%e0%b2%be%e0%b2%b2%e0%b2%bf%e0%b2%b5%e0%b3%81%e0%b2%a1%e0%b3%8d %e0%b2%a8%e0%b2%9f %e0%b2%ab%e0%b2%bf%e0%b2%b0%e0%b3%8b%e0%b2%9c%e0%b3%8d %e0%b2%96%e0%b2%be%e0%b2%a8%e0%b3%8d %e0%b2%a8%e0%b2%bf%e0%b2%a7%e0%b2%a8 109042700040_1.htm

Daily Horoscope

Select Your Language

Notifications

webdunia
webdunia
webdunia
webdunia

ಖ್ಯಾತ ಬಾಲಿವುಡ್ ನಟ ಫಿರೋಜ್ ಖಾನ್ ನಿಧನ

ಫಿರೋಜ್ ಖಾನ್
IFM
ಬೆಂಗಳೂರು: ಬಾಲಿವುಡ್‌ನ ಖ್ಯಾತ ನಟ, ನಿರ್ದೇಶಕ, ನಿರ್ಮಾಪಕ ಫಿರೋಜ್ ಖಾನ್ ಇಲ್ಲಿನ ತಮ್ಮ ಫಾರ್ಮ್‌ಹೌಸ್‌ನಲ್ಲಿ ಸೋಮವಾರ ನಿಧನಹೊಂದಿದ್ದಾರೆ. ಅವರಿಗೆ 69 ವರ್ಷ ವಯಸ್ಸಾಗಿತ್ತು.

ಬೆಂಗಳೂರಿನಲ್ಲಿ ಹುಟ್ಟಿ ಬೆಳೆದಿದ್ದ ಫಿರೋಜ್ ಖಾನ್ 70 ಹಾಗೂ 80ರ ದಶಕದಲ್ಲಿ ಹಲವು ಹಿಂದಿ ಚಿತ್ರಗಳಲ್ಲಿ ನಟಿಸಿ ಉತ್ತಮ ಪ್ರಶಂಸೆಗೆ ಪಾತ್ರವಾಗಿದ್ದರು. ಧರ್ಮಾತ್ಮ, ಕುರ್ಬಾನಿ ಹಾಗೂ ಜಾನ್‌ಬಾಜ್‌ ಚಿತ್ರಗಳ ಮೂಲಕ ಕೀರ್ತಿಯ ಉತ್ತುಂಗಕ್ಕೇರಿಗದ ಫಿರೋಜ್ ಖಾನ್ ಕಳೆದ ಒಂದು ವರ್ಷದಿಂದ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ಮುಂಬೈ ಹಾಸ್ಪಿಟಲ್‌ನಲ್ಲಿ ಕ್ಯಾನ್ಸರ್‌ಗೆ ಇತ್ತೀಚೆಗೆ ಚಿಕಿತ್ಸೆ ಪಡೆದಿದ್ದರು. ಫಿರೋಜ್‌ ಖಾನ್ ಮಕ್ಕಳಾದ ಖ್ಯಾತ ಬಾಲಿವುಡ್ ನಟ ಫರ್ದೀನ್ ಖಾನ್ ಹಾಗೂ ಲೈಲಾ ಖಾನ್‌ರನ್ನು ಅಗಲಿದ್ದಾರೆ.

ಫಿರೋಜ್ ಖಾನ್ ಅಫ್ಘನ್ ಮೂಲದವರಾಗಿದ್ದು, ಅವರ ತಾಯಿ ಇರಾನ್ ಮೂಲದ ಮುಸ್ಲಿಂ. ಆದರೂ ಬೆಂಗಳೂರಿನಲ್ಲೇ ಹುಟ್ಟಿ ಬೆಳೆದು ನಂತರದ ದಿನಗಳಲ್ಲಿ ಚಿತ್ರರಂಗದ ನಂಟಾಗಿ ಮುಂಬೈಗೆ ಫಿರೋಜ್ ತೆರಳಿದ್ದರು. ಸೋಮವಾರ ಮುಂಜಾವಿನ 1.30ರ ವೇಳೆಗೆ ಕೊನೆಯುಸಿರೆಳೆದ ಫಿರೋಜ್ ಖಾನ್ ಇತ್ತೀಚೆಗೆ 2007ರಲ್ಲಿ ವೆಲ್‌ಕಮ್ ಚಿತ್ರದ ಮೂಲಕ ಹೆಸರು ಮಾಡಿದ್ದರು. ಅದು ಹಿಟ್ ಚಿತ್ರವಾಗಿ ಪ್ರಶಂಸೆಗೆ ಪಾತ್ರವಾಗಿತ್ತು.ಫಿರೋಜ್ ಖಾನ್ ಅಂತ್ಯ ಸಂಸ್ಕಾರವನ್ನು ಫಿರೋಜ್ ಅವರ ಕೊನೆಯ ಬಯಕೆಯಂತೆ ಬೆಂಗಳೂರಿನ ಅವರ ಫಾರ್ಮ್‌ಹೌಸ್‌ನಲ್ಲೇ ನೆರವೇರಿಸಲಾಗುತ್ತದೆ.

webdunia
IFM
1965ರಲ್ಲಿ ವೂಂಛೇ ಲೋಗ್ ಚಿತ್ರದ ಮೂಲಕ ಬಾಲಿವುಡ್‌ಗೆ ಕಾಲಿಟ್ಟ ಫಿರೋಜ್, ನಂತರ ತಮ್ಮ ರೊಮ್ಯಾಂಟಿಕ್ ಪಾತ್ರಗಳ ಮೂಲಕ ಹಿಂದಿ ಚಿತ್ರರಂಗದ ರಸಿಕರ ಹೃದವನ್ನೇ ಆಳಿದರು. ಆರ್ಝೂ ಚಿತ್ರ ಅವರಿಗೆ ಇನ್ನಿಲ್ಲದ ಯಶಸ್ಸನ್ನು ತಂದುಕೊಟ್ಟಿತ್ತು. ಸಂಗೀತಮಯ ರೊಮ್ಯಾಂಟಿಕ್ ಚಿತ್ರವಾದ ಆರ್ಝೂನಲ್ಲಿ ಫಿರೋಜ್ ತ್ಯಾಗಮಯಿ ಪ್ರೇಮಿಯ ಪಾತ್ರದಲ್ಲಿ ಮಿಂಚಿದ್ದರು. ಜೀನತ್ ಅಮನ್ ಜತೆಗೆ ನಟಿಸಿದ ಕುರ್ಬಾನಿ ಚಿತ್ರ ಅವರ ಜೀವಮಾನದ ಹಿಟ್ ಚಿತ್ರವಾಗಿ ಖ್ಯಾತಿ ಪಡೆಯಿತು. 1986ರಲ್ಲಿ ಫಿರೋಜ್ ಖಾನ್ ನಿರ್ದೇಶಿಸಿದ ಜಾನ್‌ಬಾಜ್ ಎಂಬ ಚಿತ್ರ ಹಿಟ್ ಆಯಿತು. ನಂತರ 1992ರಲ್ಲಿ ಯಲ್‌ಘಾರ್ ಎಂಬ ಚಿತ್ರವನ್ನು ನಿರ್ದೇಶಿಸಿ ನಟಿಸಿದ ಫಿರೋಜ್‌ಗೆ ಆ ಚಿತ್ರವೇ ಉತ್ತಮ ಬ್ರೇಕ್ ನೀಡಿತು. ನಂತರ ಫಿರೋಜ್ ತಮ್ಮ ನಿರ್ದೇಶನ ಹಾಗೂ ನಿರ್ಮಾಣದಲ್ಲಿ ಬ್ಯುಸಿಯಾದರು.

ನಂತರ ಮಗ ಫರ್ದೀನ್‌ಖಾನ್‌‌ಗಾಗಿ 1998ರಲ್ಲಿ ಪ್ರೇಮ್ ಅಗ್ಗನ್ ಚಿತ್ರವನ್ನು ನಿರ್ಮಿಸಿ ನಿರ್ದೇಶಿಸಿದ ಫಿರೋಜ್‌ಕಾನ್ ಮಗನಿಗೆ ಬಾಲಿವುಡ್‌ನಲ್ಲಿ ಬೇರೂರಲು ರಂಗಮಂಚ ಸಿದ್ಧಪಡಿಸಿದರು. ಪ್ರೇಮ್ ಅಗ್ಗನ್ ಚಿತ್ರ ಬಾಲಿವುಡ್‌ನಲ್ಲಿ ಆ ವರ್ಷದ ಬಹುದೊಡ್ಡ ಹಿಟ್ ಚಿತ್ರವಾಗಿ ರೂಪುಗೊಂಡಿದ್ದಷ್ಟೇ ಅಲ್ಲ, ಆ ಚಿತ್ರದ ನಟನೆಗಾಗಿ ಮಗ ಫರ್ದೀನ್‌ಗೆ ಉತ್ತಮ ನಟ ಎಂಬ ಫಿಲಂಫೇರ್ ಪ್ರಶಸ್ತಿಯನ್ನೂ ಕರುಣಿಸಿತು. ಖ್ಯಾತ ಮಾಜಿ ನಟಿ ಮುಮ್ತಾಜ್ ಮಗಳಾದ ನತಾಶಾಳನ್ನು ಮದುವೆಯಾಗ ಫಿರೋಜ್ ಖಾನ್ ಮಗ ಫರ್ದೀನ್ ಹಲವು ಹಗರಣಗಳಲ್ಲಿ ಅಪರಾಧಿ ಕೂಡಾ. ಮಾದಕ ದ್ರವ್ಯಗಳ ಅಕ್ರಮ ಸಾಗಾಟಕ್ಕಾಗಿ ಇತ್ತೀಚೆಗೆ ಬಂಧನಕ್ಕೂ ಒಳಗಾದ ಕುಖ್ಯಾತಿ ಮಗ ಫರ್ದೀನ್‌ದು. ಬಾಲಿವುಡ್ ನಟರಾದ ಜಾಯೇದ್ ಖಾನ್, ಹೃತಿಕ್ ರೋಷನ್ ಪತ್ನಿ ಸುಸಾನ್ನೆ ಖಾನ್ ಅವರು ಫರ್ದೀನ್‌ರ ಸೋದರ ಸಂಬಂಧಿಗಳು. ಹಾಗಾಗಿ ಬಾಲಿವುಡ್ ನಟನಟಿಯರ ನಂಟೇ ಫಿರೋಜ್ ಕುಟುಂಬಕ್ಕಿದೆ.
webdunia
IFM

Share this Story:

Follow Webdunia kannada