ಖಿಲಾಡಿ ಕುಮಾರ್ ಅಕ್ಷಯ್ ಕುಮಾರ್.. ಸೋನಾಕ್ಷಿ ಜೊತೆ ಡ್ಯುಯೆಟ್
, ಗುರುವಾರ, 13 ಫೆಬ್ರವರಿ 2014 (10:51 IST)
ಮತ್ತೊಮ್ಮೆ ಅಕ್ಷಯ ಕುಮಾರ್ ಮತ್ತು ಸೋನಾಕ್ಷಿ ಸಿನ್ಹ ಜೋಡಿ ಸೂಪರ್ ಡೂಪರ್ ಆಗಿ ಯಶಸ್ವಿ ಆಗಲು ಸಿದ್ಧ ಆಗಿದೆ ಅವರಿಬ್ಬರೂ ಒಟ್ಟಿಗೆ ನಟಿಸಿರುವ ಹೊಸ ಚಿತ್ರದಲ್ಲಿ ಟ್ರೈಲರ್ ಅದನ್ನು ಸೂಚಿಸುತ್ತಿದೆ. ತಮಿಳು ಮತ್ತು ತೆಲುಗು ಚಿತ್ರರಂಗದ ಸ್ಟಾರ್ ನಿರ್ದೇಶಕರಲ್ಲಿ ಒಬ್ಬರಾದ ಎ ಆರ್ ಮುರುಗದಾಸ್ ಅವರು ಗಜನಿ ಚಿತ್ರವನ್ನು ನಿರ್ದೆಶಿಸಿದ್ದಾರು. ಅದು ರೀಮೇಕುಗಳಾಗಿ ಅತಿ ಹೆಚ್ಚಿನ ಗಳಿಕೆ ಕಂಡಿತ್ತು,ಈಗ ಅವರ ಮತ್ತೊಂದು ಚಿತ್ರ ತುಪ್ಪಾಕ್ಕಿ ಚಿತ್ರವನ್ನು ರೀಮೇಕ್ ಮಾಡಲಾಗಿದ್ದು ಅದರಲ್ಲಿ ಅಕ್ಷಯ ಕುಮಾರ್ ಮತ್ತು ಸೋನಾಕ್ಷಿ ಸಿನ್ಹ ನಟಿಸಿದ್ದಾರೆ. ತಮಿಳು ವರ್ಶನ್ ನಲ್ಲಿ ವಿಜಯ್ ಹಾಗು ಕಾಜಲ್ ಅಗರ್ ವಾಲ್ ನಟಿಸಿದ್ದರು. ಇದು 2012 ರಲ್ಲಿ ಬಿಡುಗಡೆ ಆಗಿತ್ತು.ಅಕ್ಕಿ ಮತ್ತು ಸೋನಾಕ್ಷಿ ಜೊತೆಗೆ ಗೋವಿಂದ ಸಹ ನಟಿಸಿದ್ದಾರೆ. ಇದನ್ನು ವಿಪುಲ್ ಕುಮಾರ್ ಅವರು ನಿರ್ಮಿಸುತ್ತಿದ್ದಾರೆ.