Publish Date: Sat, 16 Jun 2007 (16:48 IST)
Updated Date: Sat, 16 Jun 2007 (16:43 IST)
ಮಿಶ್ರ ಫಲಿತಾಂಶ ಕಂಡ ಶಾರೂಖ್ ಖಾನ್ ಡಾನ್ ಚಿತ್ರದ ಬಗ್ಗೆ ಸಾಕಷ್ಟು ಪ್ರೀತಿ ಬೆಳೆಸಿಕೊಂಡಿದ್ದಾರೆ ಅಂತ ಕಾಣಿಸುತ್ತದೆ.
ಶಾರುಖ್ ಖಾನ್ ಮನದಲ್ಲಿ ಈಗ ಡಾನ್ ಚಿತ್ರದ ಎರಡನೆ ಕಂತು (ಡಾನ್ 2) ಹೊರತರಬೇಕು ಎಂದು ನಿರ್ಧರಿಸಿದ್ದು, ಅವರದೇ ರೆಡ್ ಚಿಲ್ಲಿ ಪ್ರೋಡಕ್ಷನ್ ಪರ್ಹಾನ್ ಅಖ್ತರ್ ಮತ್ತು ರಿತೇಶ ಸಿದ್ವಾನಿ ಸಹಯೋಗದಲ್ಲಿ ಡಾನ್ -2 ನಿರ್ಮಾಣವಾಗಲಿದೆ.
ಪರ್ಹಾನ್ ಅಖ್ತರ್ ಚಿತ್ರ ನಿರ್ದೇಶಿಸಲಿದ್ದು, ಹೊಸಬರಿಗೆ ಅವಕಾಶ ನೀಡಿ ಮುಂದಿನ ವರ್ಷ ತೆರೆಗೆ ತರುವ ನಿರಿಕ್ಷೆ ಇದೆ. ಎರಡನೆ ಚಿತ್ರದ ಕಥೆ ಮೊದಲನೆ ಡಾನ್ ಚಿತ್ರದ ಮುಂದುವರೆದ ಭಾಗವಾಗಿದೆ.
ಆಶ್ಚರ್ಯ ಎಂದರೆ ಶಾಹರುಖ ಖಾನ್ ಬಾಜಿಗರ್ ಮತ್ತು ಡರ್ ಚಿತ್ರಗಳಲ್ಲಿನ ಖಳ ನಾಯಕನ ಪಾತ್ರ ಮಾಡಿದ ನಂತರ ಯಶಸ್ಸಿನ ಉತ್ತುಂಗಕ್ಕೆ ಎರಿದ್ದರು.ಈಗ ಮತ್ತದೆ ಡಾನ್ ಮೂಲಕ ಪುನರಾವರ್ತನೆ ಆಗುತ್ತಿದೆ.