ಕ್ರಿಶ್ 3 ಆಯ್ತು ..ಕ್ರಿಶ್ 4 ಮುಂದಿ ನ ಯೋಜನೆ
Publish Date: Tue, 19 Nov 2013 (11:02 IST)
Updated Date: Tue, 19 Nov 2013 (11:01 IST)
ಹೃತಿಕ್ ರೋಶನ್ ಅಭಿನಯದ ಮತ್ತು ರಾಕೇಶ್ ರೋಶನ್ ನಿರ್ದೇಶನದ ಸೂಪರ್ ಡೂಪರ್ ಹಿಟ್ ಚಿತ್ರ ಕ್ರಿಶ್3 ಬಾಕ್ಸಾಫೀಸನ್ನು ಚಿಂದಿ ಉಡಾಯಿಸಿತು. ಅದರ ಸಂಭ್ರಮ ಹಂಚಿಕೊಳ್ಳಲೆಂದು ಮಾಧ್ಯಮ ಮಿತ್ರರ ಎದುರು ಬಂದಿದ್ದ ಹೃತಿಕ್ ರೋಶನ್ ತಮ್ಮ ಮುಂದಿನ ಪ್ರಾಜೆಕ್ಟ್ ಬಗ್ಗೆ ಬಿಚ್ಚಿಟ್ಟರು. ಕ್ರಿಶ್ 3 ಯಶಸ್ಸಿನಿಂದ ತುಂಬಾ ಖುಷಿಯಾಗಿದೆ ಇದರಿಂದ ಕ್ರಿಶ್4 ಚಿತ್ರವನ್ನು ತಯಾರಿಸಲು ಉತ್ಸಾಹ ಉಂಟಾಗಿದೆ ಎಂದು ಹೇಳಿದರು. ನಿಮಗೆ ಗೊತ್ತಿರಲಿ ಕ್ರಿಶ್ ಚಿತ್ರ ಕೋಯಿ ಮಿಲ್ ಗಯ ಚಿತ್ರದ ಮೂರನೆ ಆವೃತ್ತಿ. 2003 ರಲ್ಲಿ ಈ ಚಿತ್ರ ಬಿಡುಗಡೆ ಆಯಿತು. ಅದರ ಯಶಸ್ಸಿನ ಬಳಿಕ 2006ರಲ್ಲಿ ಕ್ರಿಶ್ ಬಿಡುಗಡೆ ಆಯಿತು. ಕ್ರಿಶ್3ರಲ್ಲಿ ಹೃತಿಕ್ ಜೊತೆ ವಿವೇಕ್ ಒಬೆರಾಯ್, ಕಂಗನಾ ರನೌಟ್, ಪ್ರಿಯಾಂಕ ಚೋಪ್ರಾ ನಟಿಸಿದ್ದಾರೆ ಇದು ಸೈನ್ಸ್ ಫಿ ಥ್ರಿಲ್ಲರ್ . ಸೂಪರ್ ಹೀರೋ ಅಂಶಗಳನ್ನು ಹೊಂದಿರುವ ಕಥೆ.ಇಂತಹ ಕಾನ್ಸೆಪ್ಟ್ ಹೆಚ್ಚಾಗಿ ಹಾಲಿವುಡ್ ಚಿತ್ರಗಳಲ್ಲಿ ಕಾಣಸಿಗುತ್ತದೆ.ಚಿತ್ರದಲ್ಲೆ ತಾವು ಅನೇಕ ಹೊಸ ಸಂಗತಿಗಳನ್ನು ತೋರಿಸಿದ್ದೇವೆ. ಕ್ರಿಶ್ 3 ಅತ್ಯಂತ ವಿಭಿನ್ನ ಪ್ರಕಾರದ ಚಿತ್ರ ವೆಂದು ಈ ಸಂದರ್ಭದಲ್ಲಿ ತಿಳಿಸಿದರು. ಕ್ರಿಶ್3 ಪಯಣ ಇನ್ನೂ ನಡೆಯುತ್ತಿದೆ. ಆಗಲೇ ಕ್ರಿಶ್4 ಸೃಷ್ಟಿ ಕಡೆಗೆ ರೋಶನ್ ಟೀಂ ಸಿದ್ಧ ವಾಗಿದೆ.