Article Bollywood Gossips %e0%b2%95%e0%b3%8d%e0%b2%af%e0%b2%be%e0%b2%b6%e0%b3%8d %e0%b2%86 3%e0%b2%95%e0%b3%8d%e0%b2%95%e0%b3%86 %e0%b2%ac%e0%b2%bf%e0%b2%a1%e0%b3%81%e0%b2%97%e0%b2%a1%e0%b3%86 107072600010_1.htm

Daily Horoscope

Select Your Language

Notifications

webdunia
webdunia
webdunia
webdunia

'ಕ್ಯಾಶ್' ಆ.3ಕ್ಕೆ ಬಿಡುಗಡೆ

'ಕ್ಯಾಶ್'
ಬಾಲಿವುಡ್‌ನಲ್ಲೀಗ ಬಹು ನಿರೀಕ್ಷೆಯ ಚಿತ್ರವಾಗಿರುವ 'ಕ್ಯಾಶ್'ನ ಬಿಡುಗಡೆಯ ದಿನ ಪ್ರಕಟವಾಗಿದೆ. ಆಗಸ್ಟ್‌3ರಂದು ಚಿತ್ರ ತೆರೆಕಾಣಲಿದೆ ಎಂಬುದಾಗಿ ಚಿತ್ರತಂಡ ತಿಳಿಸಿದೆ.

ನಿನ್ನೆಯ ವರೆಗೂ ಸೆನ್ಸಾರ್ ಮಂಡಳಿಯ ಪ್ರಮಾಣ ಪತ್ರ ಲಭಿಸಿರಲಿಲ್ಲ. ಆದರೆ ನಿನ್ನೆ ಸಂಜೆ ಮಂಡಳಿ ಚಿತ್ರ ವೀಕ್ಷಿಸಿ ಯು-ಎ ಪ್ರಮಾಣ ಪತ್ರ ನೀಡಿದ್ದಾರೆ. ವಿಶೇಷವೆಂದರೆ ಎಲ್ಲೂ ಕತ್ತರಿ ಹಾಕಿಲ್ಲ.

ನಿರ್ದೇಶಕ ಅನುಭವ್ ಸಿನ್ಹಾ ಸಾರಥ್ಯದಲ್ಲಿ ಚಿತ್ರ ತೆರೆಕಾಣುವ ಕ್ಷಣಕ್ಕಾಗಿ ದಿನಗಣನೆ ಆರಂಭಿಸಿದೆ. ಈ ಮೊದಲು ಇದೇ ಶುಕ್ರವಾರ ಥಿಯೇಟರ್ ಸೇರಲಿದೆ ಎಂಬ ಸುದ್ದಿ ಹರಡಿತ್ತಾದರೂ, ತಾಂತ್ರಿಕಕಾರಣಗಳಿಂದ ಆಗಸ್ಟ್‌ಗೆ ಮುಂದೂಡಲಾಗಿದೆ.

ಮುಂದಿನ ಶುಕ್ರವಾರ ಬಹು ನಿರೀಕ್ಷೆ 'ಗಾಂಧಿ ಮೈ ಫಾದರ್', 'ನಯಾ ದ್ವಾರ್' ಮುಂತಾದವುಗಳೊಂದಿಗೆ ವೀಕ್ಷಕರನ್ನು ತಲುಪಲಿಸುವ ಕ್ಯಾಶ್ ಇವುಗಳೊಂದಿಗೆ ಪೈಪೋಟಿ ನಡೆಸಬೇಕಿದೆ.

ತಾರಾಗಣದಲ್ಲಿ ಸುನಿಲ್ ಶೆಟ್ಟಿ, ಸೈಫ್ ಆಲಿಖಾನ್, ದಿಯಾಮಿರ್ಜಾ, ಇಷಾಡಿಯೊಲ್ ಮುಂತಾದವರು ಮಿಂಚುತ್ತಿದ್ದಾರೆ. ಭವ್ಯ ಸೆಟ್‌ಗಳಲ್ಲಿ ಚಿತ್ರೀಕರಣ ನಡೆದಿದೆ.

Share this Story:

Follow Webdunia kannada