Publish Date: Tue, 04 Sep 2007 (17:36 IST)
Updated Date: Tue, 04 Sep 2007 (17:35 IST)
ಅಮಿತಾಬ್ ಬಚ್ಚನ್ ಮತ್ತು ನಿರ್ದೇಶಕ ರಾಮ್ ಗೋಪಾಲ್ ವರ್ಮಾ"ಕೋಬ್ರಾ" ಚಿತ್ರದಲ್ಲಿ ಸಹಯೋಗ ನೀಡಿದ್ದಾರೆಂಬ ಗುಸು ಗುಸು ಸುದ್ದಿ ಬಾಲಿವುಡ್‌ನಲ್ಲಿ ಹರಡಿದೆ. ಚಿತ್ರರಸಿಕರ ತವಕದ ನಡುವೆ, ಕೋಬ್ರಾ ಚಿತ್ರದ ಹೆಸರನ್ನೇ ಕೇಳಿಲ್ಲ ಎಂದು ರಾಮ್ ಗೋಪಾಲ್ ಬಾಂಬ್ ಸಿಡಿಸಿದ್ದಾರೆ.
"ಸರ್ಕಾರ್ 2 ಚಿತ್ರದಲ್ಲಿ ಬಚ್ಚನ್‌ದ್ವಯರು ಚಿತ್ರೀಕರಣ ಮುಗಿಸಿದ್ದಾರೆ. ಹಾವು ಕಂಡರೇ ನನಗೆ ಭಯ. ಇನ್ನು ಅಮಿತಾಬ್ ಮತ್ತು ಅಭಿಷೇಕ್ ಅವರನ್ನು ಹಾಕಿಕೊಂಡು ಕೋಬ್ರಾ ಚಿತ್ರ ಮಾಡುವ ಮಾತೆಲ್ಲಿ? ಕೋಬ್ರಾ ಟೈಟಲ್ ರಿಜಿಸ್ಟರ್ ಕೂಡ ಮಾಡಿಸಿಲ್ಲ." ಎಂದವರು ಹೇಳಿದ್ದಾರೆ.
ಹಾವನ್ನು ಕಂಡರೆ ಭಯಪಡುವ ಕೆಲವು ಚಿತ್ರರಸಿಕರು ಈಗ ನಿರಾಳವಾಗಿ ಉಸಿರಾಡುತ್ತಿರಬಹುದು. ಅಮಿತಾಬ್ ಕೂಡ ಕೋಬ್ರಾ ಚಿತ್ರ ನಿರ್ಮಾಣದ ಯೋಜನೆಯನ್ನು ನಿರಾಕರಿಸಿದ್ದಾರೆ.
ಬಹುಶಃ ನನಗೆ ಮತ್ತು ನಿರ್ದೇಶಕರಿಗೆ ಗೊತ್ತಿಲ್ಲದ ಪ್ರಾಜೆಕ್ಟ್‌ಗಳು ಪತ್ರಿಕೆಗಳಿಗೆ ತಿಳಿದಿರುತ್ತವೆ ಎಂದು ವ್ಯಂಗ್ಯವಾಡಿದ್ದಾರೆ.