ಕೋಪಗೊಂಡ ಕತ್ರಿನಾ...ಕಾರಣ ಏನು ಗೊತ್ತೆ?
Publish Date: Sun, 15 Dec 2013 (12:16 IST)
Updated Date: Sun, 15 Dec 2013 (12:15 IST)
ಬಾಯಿಗೆ ಬಂದಂತೆ ಮಾತಾಡ ಬೇಡಿ.. ಇಷ್ಟ ಬಂದಂತೆ ಸುದ್ದಿಗಳನ್ನು ಹಾಕಬೇಡಿ ಎಂದು ಹೇಳಿದ್ದಾಳೆ ಬಾಲಿವುಡ್ ಚಂದದ ಚೆಲುವೆ ಕತ್ರಿನಾ ಕೈಫ್. ಈಗ ಹೆಚ್ಚು ಸುದ್ದಿಯಲ್ಲಿರುವ ಕತ್ರಿನಾ ಬಗ್ಗೆ ಜನರು ತಮಗೆ ಇಷ್ಟ ಬಂದಂತೆ ಮಾತಾಡಿದರೆ ಸಿಟ್ಟು ಬರುವುದಿಲ್ಲವೇ.. ಹಾಗೆ ಆಗಿದೆ. ಒಂದು ಜಾಹೀರಾತು ಚಿತ್ರೀಕರಣದಲ್ಲಿ ಆಕೆಯು ಗಲಾಟೆ ಮಾಡಿಕೊಂಡು ಹೊರ ಬಂದಿದ್ದಾರೆ ಅನ್ನುವ ಸುದ್ದಿ ಬಿ ಟೌನ್ ತುಂಬಾ ಹರಡಿದಾಗ ಆಕೆಗೆ ಸಿಟ್ಟು ಬರಲ್ವೆ? ಹಾಗೆ ಆದದ್ದು, ಕ್ಯಾಟ್ ಅದರ ಬಗ್ಗೆ ಪ್ರತಿಕ್ರಿಯಿಸುತ್ತಾ ಬಾಯಿಗೆ ಬಂದಂತೆ ಹೇಳ್ ಬೇಡಿ. ನನ್ನ ಮೇಲೆ ಸುಮ್ಮನೆ ಸುಳ್ಳುಗಳ, ಅಪವಾದಗಳ ಕೆಸರನ್ನು ಎರಚ ಬೇಡಿ ಎಂದಿದ್ದಾಳೆ. ಅದಕ್ಕೆನನ್ನ ವೃತ್ತಿಯನ್ನು ದೇವರೆಂದು ತಿಳಿದವಳು ನಾನು.
ಆ ಆಡ್ ನಲ್ಲಿ ನಾನು 12 ಗಂಟೆ ಕಾಲ ಕೆಲಸ ಮಾಡಿದ್ದೇನೆ. ಅವರು ಹೇಳಿದಕ್ಕಿಂತ 5 ಗಂಟೆ ಹೆಚ್ಚಿಗೆ ದುಡಿದಿದ್ದೀನಿ ಎಂದು ಹೇಳಿದ್ದಾಳೆ . ಹನ್ನೆರಡು ಗಂಟೆಗಳ ಕಾಲ ಕೆಲಸ ಮಾಡುವುದು ಸರಳ ಸಂಗತಿ ಅಲ್ಲವೇ ಅಲ್ಲ . ಅಲ್ಲದೆ ಹೆಚ್ಚಿಗೆ ಕೆಲಸ ಮಾಡಿದ್ದಕ್ಕೆ ನಾನು ಹೆಚ್ಚು ಮೊತ್ತವನ್ನು ಸಹ ಕೇಳಲಿಲ್ಲ . ನನ್ನ ಬಗ್ಗೆ ಹೀಗೆಲ್ಲ ಕೆಟ್ಟದಾಗಿ ಪ್ರಚಾರ ಮಾಡುವುದು ಸರಿಯಲ್ಲ ಎಂದು ನೊಂದು ಹೇಳಿದ್ದಾಳೆ ಈ ಮುದ್ದು ಹುಡುಗಿ. ಕತ್ರಿನಾ ಬಗ್ಗೆ ಇಂತಹ ಕೆಟ್ಟ ಪ್ರಚಾರ ಮಾಡುತ್ತಿರುವವರು ಈಗ ನಾಯಕರಾಗಿ ಮಿಂಚುತ್ತಿರುವ ಯಾರೋ ಒಂದಷ್ಟು ಜನ ಇರ ಬೇಕು ಅನ್ನುವುದು ಕತ್ರಿನಾ ಫ್ರೆಂಡ್ಸ್ ಗೆಸ್ಸಿಂಗ್ . ಅದೇ ನಿಜವಾದರೆ ತಾನು ಅಂತಹವರನ್ನು ಸುಮ್ಮನೆ ಬಿಡಲ್ಲ ಅಂದಿದ್ದಾಳೆ ಕತ್ರಿನಾ.. ಸೊ ಸದ್ಯದಲ್ಲೇ ಬಾಲಿವುಡ್ ನಲ್ಲಿ ಗಲಾಟ ಹಂಗಾಮ ಆರಂಭವಾಗುತ್ತದೆ ಎಂದಾಯಿತು.