Article Bollywood Gossips %e0%b2%95%e0%b3%8a%e0%b2%a8%e0%b3%86%e0%b2%97%e0%b3%82 %e0%b2%95%e0%b2%b0%e0%b3%80%e0%b2%a8%e0%b2%be %e0%b2%b8%e0%b3%88%e0%b2%ab%e0%b3%8d %e0%b2%a4%e0%b3%81%e0%b2%9f%e0%b2%bf%e0%b2%97%e0%b2%b3 %e0%b2%ae%e0%b2%bf%e0%b2%b2%e0%b2%bf%e0%b2%a4 109020900079_1.htm

Daily Horoscope

Select Your Language

Notifications

webdunia
webdunia
webdunia
webdunia

ಕೊನೆಗೂ ಕರೀನಾ-ಸೈಫ್ ತುಟಿಗಳ ಮಿಲಿತ..!

ಕರೀನಾ ಕಪೂರ್
ಅಂದ್ರೆ ಈ ಮುಂಚೆ ಅವರು ಕಿಸ್ ಕೊಟ್ಟೇ ಇಲ್ವಾ ಅಂತ ಯಾರಾದರೂ ಕೇಳಿದರೆ ಅದು ಶುದ್ಧ ತಪ್ಪು ಶಬ್ಧವಾದೀತು..! ಪ್ರೀತಿಸಿದ ಇಬ್ಬರು ಅದರಲ್ಲೂ ಬಾಲಿವುಡ್ ನಟ-ನಟಿ ಎಂದ ಮೇಲೆ ಇಂತದ್ದೆಲ್ಲ ಸಾಮಾನ್ಯ. ಆದರೆ ಈ ಬಾರಿ ಅವರು ಮೊದಲ ಬಾರಿಗೆ ತೆರೆಯ ಮೇಲೆ ತುಟಿಗೆ ತುಟಿ ಬೆರೆಸಿರುವುದು ವಿಶೇಷ.

ಈ ಹಿಂದೆ ನಮ್ಮ ಕರೀನಾ ಕಪೂರ್ ಎಷ್ಟು ಹುಡುಗರ ತುಟಿಗಳಿಗೆ ತನ್ನ ತುಟಿಯನ್ನು ಬೀಡುಬೀಸಾಗಿ ಕಚ್ಚಲು ಬಿಟ್ಟಿಲ್ಲ ಹೇಳಿ..! ಸ್ವತಃ ತನ್ನ ಮಾಜಿ ಪ್ರಿಯಕರ ಶಾಹಿದ್ ಕಪೂರ್ ಜತೆ ಪಾರ್ಟಿಯೊಂದರಲ್ಲಿ ಮದವೇರಿದವಳಂತೆ ಮುತ್ತು ಕೊಟ್ಟದ್ದು ಮಾಧ್ಯಮಗಳಲ್ಲಿ ಸುದ್ದಿಯಾಗಿತ್ತು. ತೆರೆಯ ಮೇಲಿನ ವಿಚಾರಕ್ಕೆ ಬರುವಾಗ 'ಫಿದಾ' ಚಿತ್ರದಲ್ಲಿ ಫರ್ದೀನ್ ಖಾನ್ ಜತೆ ಮುತ್ತು ವ್ಯವಹಾರ ನಡೆಸಿದ್ದು ಈಗ ಹಳತಾಗಿದೆ.

ತೆರೆಯ ಹಿಂದೆ ಯಾವುದೇ ಪೂರ್ವ ತಯಾರಿಯಿಲ್ಲದೆ ರೊಮ್ಯಾನ್ಸ್ ನಡೆಸುವ ಕರೀನಾ-ಸೈಫ್ ತೆರೆಯ ಮೇಲೆ ನಡೆಸಲು ಸಾಕಷ್ಟು ರಿಹರ್ಸಲ್‌ಗಳು ಬೇಕಾಯಿತಂತೆ. ರೆಂಜಿಲ್ ಡಿಸಿಲ್ವಾ ನಿರ್ದೇಶನದ ಧರ್ಮಾ ಪ್ರೊಡಕ್ಷನ್ಸ್ ಅಡಿಯಲ್ಲಿ ತಯಾರಾಗುತ್ತಿರುವ ಇನ್ನೂ ಹೆಸರಿಡದ ಚಿತ್ರದಲ್ಲಿ ಕರೀನಾ, ಸೈಫ್ ಪ್ರಮುಖ ತಾರಾಗಣದಲ್ಲಿದ್ದಾರೆ. ಇವರ ಕಿಸ್ಸಿಂಗ್ ದೃಶ್ಯಗಳನ್ನು ಇತ್ತೀಚೆಗೆ ಚೆಂಬೂರ್ ಸ್ಟುಡಿಯೋದಲ್ಲಿ ಚಿತ್ರೀಕರಿಸಿಕೊಳ್ಳಲಾಯಿತಂತೆ.

ಮ‌ೂಲಗಳ ಪ್ರಕಾರ ಇವರಿಬ್ಬರಿಗೂ ತೆರೆಯ ಮೇಲೆ ಕಿಸ್ ಮಾಡಲು ಇಷ್ಟವಿರಲಿಲ್ಲ. ನಿರ್ದೇಶಕ ಡಿಸಿಲ್ವಾ ಜತೆ ಕೈಫ್ ಈ ಸಂಬಂಧ ಕೋಪವೂ ಮಾಡಿಕೊಂಡಿದ್ದನಂತೆ. ನಂತರ ನಿರ್ದೇಶಕರು ಹಾಗೂ ಹೀಗೂ ಸೈಫ್‌ನನ್ನು ಒಪ್ಪಿಸಿದ್ದರು. ತನ್ನ ಪ್ರಿಯತಮೆ(?) ಕರೀನಾಳನ್ನು ಒಪ್ಪಿಸುತ್ತೇನೆ ಎಂದು ಆಗಲೇ ಡಿಸಿಲ್ವಾರಿಗೆ ಭರವಸೆ ನೀಡಿದ್ದರಂತೆ.

ಕುತೂಹಲಕಾರಿ ವಿಚಾರ ಎಂದರೆ ಆ ದೃಶ್ಯವನ್ನು ಐದು ಬಾರಿ ಮರು ಚಿತ್ರೀಕರಣ ನಡೆಸಿರುವುದು..!
IFM

Share this Story:

Follow Webdunia kannada