Publish Date: Wed, 28 Nov 2007 (12:12 IST)
Updated Date: Wed, 28 Nov 2007 (12:11 IST)
ಎರಡು ಯಶಸ್ವಿ ಆಲ್ಬಂಗಳ ಮೂಲಕ ಸಂಗೀತ ಉದ್ಯಮದಲ್ಲಿ ತಮ್ಮ ಮುದ್ರೆಯೊತ್ತಿರುವ, ಜನಪ್ರಿಯ 'ಕೈಲಾಸ' ರಚನಾತ್ರಯರು ಬಾಲಿವುಡ್‌ನಲ್ಲಿ ತಮ್ಮ ಕಾರ್ಯಕ್ಷೇತ್ರವನ್ನು ವಿಸ್ತರಿಸಲು ಮುಂದಾಗಿದ್ದಾರೆ. ಈ ನಿಟ್ಟಿನಲ್ಲಿ ಸುಪ್ರಸಿದ್ಧ ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್‌ನೊಂದಿಗೆ ಮಾತುಕತೆ ಮುಂದುವರಿಸಿದ್ದು, ಕೈಲಾಸ್ ಜೋಡಿಯ ಹಾಡುಗಳಿಗೆ ರೆಹಮಾನ್ ದ್ವನಿ ನೀಡುವ ಸಾಧ್ಯತೆಗಳಿವೆ
ಇದರ ಮುಖ್ಯಸ್ಥ ಕೈಲಾಸ್ ಕೇರ್, ಮುಂಬಯಿ ಕಾಮತ್ ಸಹೋದರರಾದ ಪರೇಶ್ ಮತ್ತು ನರೇಶ್ ಅವರೊಂದಿಗೆ " ಮೇಡ್ ಇನ್ ಚೀನಾ " ಮತ್ತು " ಅಲ್ಲಾಹ್ ಕೆ ಬಂದೆ "ಎರಡು ಬಾಲಿವುಡ್ ಸಿನಿಮಾಗಳಿಗೆ ಸಂಗೀತ ರಚನೆ ಮಾಡಲಿದ್ದಾರೆ ಎಂದು ಕೈಲಾಶ್ ಸುದ್ದಿಗಾರರೊಂದಿಗೆ ತಿಳಿಸಿದ್ದಾರೆ.
ಒಟ್ಟಾಗಿ ಕೈಲಾಶ್ -ಪರೇಶ್- ನರೇಶ್ ಎಂದು ನಾವು ಪ್ರಸಿದ್ಧರಾಗಿದ್ದೇವೆ ಎಂದು ಅವರು ಹೇಳಿದ್ದಾರೆ. 2006ರಲ್ಲಿ ಜೊತೆಯಾದ ಈ ತ್ರಿಮೂರ್ತಿಗಳು ಸೂಫಿ ಅಂಶಗಳನ್ನೊಳಗೊಂಡ ತಮ್ಮ ಮೊದಲ ಆಲ್ಬಂ 'ಕೈಲಾಸ್' ಮೂಲಕ ಪ್ರೇಕ್ಷಕರನ್ನು ರಂಜಿಸಿದರು ನಂತರ ಕೆಲವು ಸಮಯದ ಬಳಿಕ 'ಕೈಲಾಸ ಜೂಮೋರೆ' ಹೊರತಂದರು
ಕೈಲಾಸ ಆಲ್ಬಂನ ತೇರಿ ದಿವಾನಿ ಮತ್ತು ತೋಬಾ ತೋಬಾ ಹಾಗೂ, ಕೈಲಾಸ್ ಜೂಮೋರೆಯ ಬಾಂ ಲಹರಿ ಮತ್ತು ಸೈಯಾನ್ ಹಾಡುಗಳು ಹಿಟ್‌ಗೊಂಡಿದ್ದವು.
ರಮೇಶ್ ಸಿಪ್ಪಿ ನಿರ್ಮಾಣದ " ಮೇಡ್ ಇನ್ ಚೀನಾ " ಚಿತ್ರವನ್ನು ನಿಖಿಲ್ ಅಡ್ವಾಣಿ ನಿರ್ದೇಶಿಸುತ್ತಿದ್ದು, ದೀಪಿಕಾ ಪಡುಕೋಣೆ ಮತ್ತು ಅಕ್ಷಯ್ ಕುಮಾರ್ ಇದರಲ್ಲಿ ಅಭಿನಯಿಸುತ್ತಿದ್ದಾರೆ.