ಕುನಾಲ್‌ಕೋಹ್ಲಿ ಚಿತ್ರದಲ್ಲಿ ಅಮಿಷಾ
Publish Date: Wed, 13 Jun 2007 (13:15 IST)
Updated Date: Wed, 13 Jun 2007 (13:14 IST)
ಬಾಲಿವುಡ್‌ನ ಕನಸು ಕಂಗಳ ಚೆಲುವೆ ಅಮಿಷಾ ಪಟೇಲ್ ಇದೀಗ ಬ್ಯುಸಿಯಾಗಿದ್ದಾರೆ. ಅವರ ಕುರಿತು ಹೊಸದಾಗಿ ಲಭಿಸಿದ ಸುದ್ದಿ ಎಂದರೆ ಕುನಾಲ್ ಕೋಹ್ಲಿಯವರ ಹೊಸ ಚಿತ್ರಕ್ಕೆ ಸಹಿ ಹಾಕಿದ್ದಾರೆ.ಕಹೋನಾ ಪ್ಯಾರ್ ಹೈ ಚಿತ್ರದ ಮೂಲಕ ಯುವಪೀಳಿಗೆಯ ಮನಗೆದ್ದ ಅಮಿಷಾ ಆ ಬಳಿಕ ಆರಕ್ಕೇರದೆ ಮೂರಕ್ಕಿಳಿಯದೇ, ಹೆಚ್ಚು ವಿವಾದ ಗಾಸಿಪ್‌ಗಳಿಗೆ ಬಲಿಯಾಗದೇ, ತಮ್ಮದೇ ಗ್ಲಾಮರ್ ಪ್ರಪಂಚದಲ್ಲಿ , ವೃತ್ತಿನಿರತರಾಗಿದ್ದಾರೆ. ಇದೀಗ ಕುನಾಲ್ ಕೋಹ್ಲಿ ಶೀಘ್ರವೇ ಆರಂಭಿಸುವ ಹೆಸರಿಡದ ಹೊಸ ಚಿತ್ರದಲ್ಲಿ ಅಮೀಷಾ ನಾಯಕಿ. ಸೈಫ್ ಆಲಿ ಖಾನ್ ನಾಯಕ. ಇತರ ಪ್ರಮುಖ ತಾರೆಯರೆಂದರೆ ರಾಣಿ ಮುಖರ್ಜಿ, ರಿಷಿ ಕಪೂರ್.ಕೋಹ್ಲಿ ಚಿತ್ರಗಳು ಪ್ರತಿ ಬಾರಿಯೂ ಸೂಪರ್ ಹಿಟ್ ಖ್ಯಾತಿ ಹೊಂದಿವೆ. ಅವರ ಈ ಹಿಂದಿನ ಚಿತ್ರ ಅಮೀರ್ ಖಾನ್, ಕಾಜೋಲ್ ಅಭಿನಯದ 'ಫನಾ' ಸೂಪರ್ ಹಿಟ್ ಆಗಿ ಭಾರೀ ಗಳಿಕೆ ನೀಡಿತ್ತು.