Article Bollywood Gossips %e0%b2%95%e0%b2%bf%e0%b2%b8%e0%b3%8d %e0%b2%95%e0%b3%8a%e0%b2%9f%e0%b3%8d%e0%b2%b0%e0%b3%86 %e0%b2%8f%e0%b2%a8%e0%b2%be%e0%b2%af%e0%b3%8d%e0%b2%a4%e0%b3%80%e0%b2%97 %e0%b2%97%e0%b3%81%e0%b2%b2%e0%b3%8d %e0%b2%aa%e0%b2%a8%e0%b2%be%e0%b2%97%e0%b3%8d %e0%b2%aa%e0%b3%8d%e0%b2%b0%e0%b2%b6%e0%b3%8d%e0%b2%a8%e0%b3%86 109021000071_1.htm

Daily Horoscope

Select Your Language

Notifications

webdunia
webdunia
webdunia
webdunia

ಕಿಸ್ ಕೊಟ್ರೆ ಏನಾಯ್ತೀಗ..?: ಗುಲ್ ಪನಾಗ್ ಪ್ರಶ್ನೆ

ಗುಲ್ ಪನಾಗ್
ಬಾಲಿವುಡ್ ನಟ ವಿನಯ್ ಪಥಕ್‌ಗೆ ಕಿಸ್ ಕೊಟ್ಟಿದ್ದಾಳೆ. ಅದರಲ್ಲೂ ತುಟಿ ಚಪ್ಪರಿಸುವ ಕಿಸ್ ಎನ್ನುವುದು ವಿಷಯ. ಅದನ್ನು ಪಡೆದುಕೊಂಡ ಗುಲ್ ಪನಾಗ್ ಬಳಿಯೇ ಪ್ರಶ್ನಿಸಿದರೆ, "ಹೌದು.. ನಾನು ನಟ ವಿನಯ್ ಪಥಕ್‌ಗೆ ಕಿಸ್ ಕೊಟ್ಟಿದ್ದೇನೆ. ಏನೀಗ..?" ಎಂದು ಪ್ರಶ್ನಿಸುವುದೇ.

ಅದೊಬ್ಬ ಎಮ್ರಾನ್ ಹಷ್ಮಿ ಬಾಲಿವುಡ್ ಅಂಗಳದಲ್ಲಿ ತುಟಿಗಳ ವ್ಯಾಪಾರ ಆರಂಭಿಸಿದ್ದೇ ತಡ. ಆರಂಭದಲ್ಲಿ ಆತನ ಜತೆ ನಟಿಸಲು ಹಿಂದೇಟು ಹಾಕುತ್ತಿದ್ದವರೆಲ್ಲ ಮಲ್ಲಿಕಾ ಶೆರಾವತ್ ಯಶಸ್ಸು ನೋಡಿ ಕಚ್ಚಲು-ಬಿಚ್ಚಲು ಆರಂಭಿಸಿದರು. ಈಗೀಗ ಕಿಸ್ ಅದರಲ್ಲೂ ಚಪ್ಪರಿಸುವ ಕಿಸ್ ಎನ್ನುವುದು ಬಾಲಿವುಡ್ ಚಿತ್ರಗಳಲ್ಲಿ ಸಾಮಾನ್ಯವಾಗಿ ಬಿಟ್ಟಿದೆ. ಹಾಗಾಗಿ ಈ ಹುಡುಗಿಯ‌ೂ ಅದರಲ್ಲೇನು ವಿಶೇಷ ಅಂತೆಲ್ಲ ರಿವರ್ಸ್ ಪ್ರಶ್ನೆ ಕೇಳಿದ್ದಾಳೆ.

ಅದು ಚಿತ್ರಕ್ಕೆ ಅಗತ್ಯವಾಗಿತ್ತು ಎನ್ನುವುದು ಗುಲ್ ಪನಾಗ್ ಸ್ಪಷ್ಟನೆ. ಎಲ್ಲ ಮುಗಿದ ಮೇಲೆ ಎಲ್ಲರ ಬಾಯಲ್ಲೂ ಅದೇ ಮಾತು ಬರುತ್ತದೆ. ಯಾವುದೋ ಕಮರ್ಷಿಯಲ್ ಆಂಗಲ್‌ನಲ್ಲಿ ಸೆಕ್ಸ್ ಅಪೀಲ್‌ಗಳನ್ನು ಚಿತ್ರಗಳಲ್ಲಿ ತುಂಬಲಾಗುತ್ತಿದ್ದರೂ ಕಥೆಗೆ ಅಗತ್ಯ ಎಂದು ಬೋಂಗು ಬಿಡುತ್ತಾರೆ. ಅಂದ ಹಾಗೆ ಈ ಚಿತ್ರದ ನಿರ್ದೇಶಕರು ಪಾರ್ವತಿ ಬಾಲಗೋಪಾಲನ್. ಚಿತ್ರದ ಹೆಸರು 'ಸ್ಟ್ರೈಟ್'..!

ನಿಮಗೆ ಕೇವಲ ಗುಲ್ ಪನಾಗ್ ಎಂದರೆ ಯಾರಿಗೂ ನೆನಪಿಗೆ ಬರಲಿಕ್ಕಿಲ್ಲ ಬಿಡಿ. ಅದಕ್ಕಾಗಿ ಆಕೆಯ ಬೆನ್ನ ಹಿಂದಿನ ಬರಹಗಳನ್ನೂ ಸ್ವಲ್ಪ ಓದಿ.

ಈಕೆಯ ಜಾತಕ ಬಿಡಿಸಿ ನೋಡುವುದಾದರೆ ಈ ಹಿಂದಿನ ಸಾಧನೆಗಳು ಅಸಾಮಾನ್ಯ. 'ಮ್ಯಾಕ್ಸಿಮ್' ಮ್ಯಾಗಜೀನ್‌ನಲ್ಲಿ ತನ್ನದೆ ಬಿಚ್ಚಿಟ್ಟ ಈ ಸುಂದರಿ ಗುಲ್ ಪನಾಗ್ 'ಮಿಸ್ ಇಂಡಿಯಾ' ಗೆದ್ದ ನಂತರ ಭಾರತದ ಪರ ಮಿಸ್ ಯ‌ೂನಿವರ್ಸ್ ಸ್ಪರ್ಧಿಯ‌ೂ ಹೌದು. 1999ರ ಮಿಸ್ ಯ‌ೂನಿವರ್ಸ್‌ನಲ್ಲಿ ಆಗ್ರ 10ರಲ್ಲಿ ಸ್ಥಾನ ಪಡೆದುಕೊಂಡದ್ದು ಹೆಚ್ಚುಗಾರಿಕೆ. ಅದರಲ್ಲೂ ನಗುವಿಗೆ ವಿಶೇಷ ಪ್ರಶಸ್ತಿಯನ್ನು ಪಡೆದುಕೊಂಡವಳು.

ಚಂಡೀಗಢ ಮ‌ೂಲದ ಈಕೆಗೀಗ 30 ತುಂಬಿದೆ. ತಂದೆ ಆರ್ಮಿಯಲ್ಲಿ ಕಮಾಂಡರ್. ಬಾಲಿವುಡ್ ಪ್ರವೇಶ 2003ರಲ್ಲಿ 'ಧೋಪ್' ಚಿತ್ರದ ಮ‌ೂಲಕ. ನಂತರ ಜರ್ಮ್, ದೊರ್, ಮನೋರಮಾ ಸಿಕ್ಸ್ ಫೀಟ್ ಅಂಡರ್, ಹಲೋ, ಸಮ್ಮರ್ 2007 ಚಿತ್ರಗಳಲ್ಲಿ ನಟಿಸಿದ್ದಳು. ಇದೀಗ ಆಲಿಬಗ್, ರಣ್, ಹಲೋ ಡಾರ್ಲಿಂಗ್, ಫಿರ್ ಜಿಂದಗಿ, ಅನುಭವ್ ಮತ್ತು ಸ್ಟ್ರೈಟ್ ಎಂಬ ಚಿತ್ರಗಳು ಕೈಯಲ್ಲಿವೆ.
IFM

Share this Story:

Follow Webdunia kannada