ಕಾಶ್ಮೀರದಲ್ಲಿ ನಡೆಯುತ್ತಿರುವ ಶೂಟಿಂಗ್ ನಲ್ಲಿ ಟೈಗರ್ ಶ್ರಾಫ್ ಗೆ ಗಾಯ!
, ಸೋಮವಾರ, 10 ಫೆಬ್ರವರಿ 2014 (09:26 IST)
ಕಾಶ್ಮೀರದಲ್ಲಿ ನಡೆಯುತ್ತಿರುವ ಶೂಟಿಂಗ್ ನಲ್ಲಿ ಟೈಗರ್ ಶ್ರಾಫ್ ಅವರಿಗೆ ಚಿತ್ರೀಕರಣದ ಸಮಯದಲ್ಲಿ ಗಾಯವಾಗಿದೆ. ಈ ಸಮಯದಲ್ಲಿ ಅವರ ಹೀರೋಯಿನ್ ಕೃತಿ ಸನನ್ ಸಹ ಗಾಯ ಗೊಂಡಿದ್ದಾರೆ. ಸಾಜಿದ್ ನಡಿಯವಾಲ ಅವರು ನಿರ್ಮಿಸುತ್ತಿರುವ ಚಿತ್ರವನ್ನು ಕಾಶ್ಮೀರದಲ್ಲಿ ಶೂಟಿಂಗ್ ಮಾಡಲಾಗುತ್ತಿದೆ. ಈ ಚಿತ್ರಕ್ಕೆ ಸಂಬಂಧಿಸಿದ ದೃಶ್ಯದಲ್ಲಿ ಭಾಗವಹಿಸಿದ್ದ ಜೋಡಿ ಬಿದ್ದು ಗಾಯ ಮಾಡಿಕೊಂಡಿದ್ದಾರೆ. ಕಾಶ್ಮೀರದಲ್ಲಿ ಸಿಕ್ಕಾಪಟ್ಟೆ ಮಂಜಿದ್ದು, ಅದರಿಂದ ಎಲ್ಲವು ಅಸ್ಪಷ್ಟ. ಪ್ರಣಯಭರಿತ ದೃಶ್ಯದ ಚಿತ್ರೀಕರಣದ ಸಮಯದಲ್ಲಿ ಉಯ್ಯಾಲೆಯ ಮೇಲಿದ್ದ ಈ ಜೋಡಿ ಉರುಳಿ ಕೆಳಗೆ ಬಿದ್ದರು. ಕೆಳಗೆ ಮಂಜಿನ ರಾಶಿ ಇತ್ತು. ಟೈಗರ್ ಮತ್ತು ಕೃತಿ ಇಬ್ಬರಿಗೂ ಸಣ್ಣಪುಟ್ಟ ಗಾಯಗಳಾಯಿತು. ಆದರೆ ಅವರಿಬ್ಬರೂ ತಕ್ಷಣ ಚೇತರಿಸಿಕೊಂಡು ಶೂಟಿಂಗ್ ನಲ್ಲಿ ಭಾಗಿಯಾದರಂತೆ. ಈ ಚಿತ್ರವನ್ನು ಸಬ್ಜೀರ್ ನಿರ್ದೇಶಿಸುತ್ತಿದ್ದಾರೆ. ಇಂತಹ ಅನಾಹುತ ಆದ ಸಮಯದಲ್ಲಿ ಟೈಗರ್ ಮತ್ತು ಕೃತಿಯ ಸಮಯ ಪ್ರಜ್ಞೆ ಮತ್ತು ಸಾಹಸದ ಬಗ್ಗೆ ನಿರ್ದೇಶಕರು ಪ್ರಶಂಸೆ ಮಾಡಿದ್ದಾರೆ. ಅಂದು ಕಾಶ್ಮೀರದಲ್ಲಿ ಮೈನಸ್ ಡಿಗ್ರಿ ಉಷ್ಣತೆ ಇತ್ತಂತೆ. ಹೀರೋಹೀರೋಯಿನ್ ಇಬ್ಬರು ಕೆಳಗೆ ಬಿದ್ದ ಕಾರಣ ಶೂಟಿಂಗ್ ಎಷ್ಟು ದಿನ ನಿಲ್ಲುತ್ತದೆಯೊ ಎನ್ನುವ ಭಯ ಆಗಿತ್ತು. ಆದರೆ ಅಂತಹದ್ದೇನು ನಡೆಯಲಿಲ್ಲ ಎಂದಿದ್ದಾರೆ ನಿರ್ದೇಶಕರು. ಈ ಚಿತ್ರವು ಮೇ 16 ರಂದು ಬಿಡುಗಡೆ ಕಾಣಲಿದೆ. ಟೈಗರ್ ಶ್ರಾಫ್ ಮತ್ತು ಕೃತಿಯ ಮೊದಲ ಚಿತ್ರ ಇದಾಗಿದೆ.