ಕಾಲೇಜು ಯುವಕರ ಕಥೆ ದಿಲ್ ದೋಸ್ತಿ
Publish Date: Wed, 26 Sep 2007 (16:29 IST)
Updated Date: Wed, 26 Sep 2007 (16:27 IST)
18
ವರ್ಷದ ಹರೆಯದ ಯುವಕ ಕಾಲೇಜಿನಲ್ಲಿ ನಿಜವಾಗಲೂ ಏನನ್ನು ಬಯಸುತ್ತಾನೆ? ಇಂದಿನ ಯುವಕರ ಯೋಚನೆ ಏನು, ಅವರು ಜೀವನವನ್ನು ಹೇಗೆ ಕಳೆಯಲು ಬಯಸುತ್ತಾರೆ ಎನ್ನುವುದನ್ನು ದಿಲ್ ದೋಸ್ತಿ ಚಿತ್ರ ಬಿಚ್ಚಿಡುತ್ತದೆ. ದೆಹಲಿ ವಿ.ವಿ.ಯ ವಿದ್ಯಾರ್ಥಿಗಳ ಸುತ್ತ ದಿಲ್ ದೋಸ್ತಿ ಕಥೆ ಗಿರಕಿ ಹೊಡೆಯುತ್ತದೆ.ವಿ.ವಿ.ಯ ಇಬ್ಬರು ಹಾಸ್ಟೆಲ್‌ವಾಸಿಗಳಾದ ಅತೀ ಶ್ರೀಮಂತ, ಕಾಸ್ಮೋಪಾಲಿಟನ್ ಸಂಸ್ಕೃತಿಯ ಯುವಕ ಅಪೂರ್ವ್(ಇಮಾದ್ ಶಾ) ಮತ್ತು ಹಳೆಯ ಫ್ಯಾಷನ್ನಿನ ಬಿಹಾರಿ ಯುವಕ ಸಂಜಯ್ ಮಿಶ್ರಾ(ಶ್ರೇಯಾಸ್ ತಲ್ಪಡೆ) ಮೂಲಕ ಹೊಸ ಲಿಬರಲ್ ಸಮಾಜದ ಮತ್ತು ಹಳೆಯ ಸಂಪ್ರದಾಯವಾದಿ ಸಮಾಜವನ್ನು ಮಗ್ಗುಲಲ್ಲಿಟ್ಟು ಚಿತ್ರಕಥೆ ಸಾಗುತ್ತದೆ.ಸಂಜಯ್ ಮಹತ್ವಾಕಾಂಕ್ಷಿ ಮತ್ತು ವಿದ್ಯಾರ್ಥಿ-ರಾಜಕಾರಣಿ. ತನ್ನ ರಾಜಕೀಯ ಗುರಿ ಬೆನ್ನತ್ತುವ ರೊಮ್ಯಾಂಟಿಕ್ ಮತ್ತು ಆದರ್ಶವಾದಿ. ಆದರೆ ಅಪೂರ್ವ್ ಜೀವನಕ್ಕೆ ಗೊತ್ತುಗುರಿ ಇಲ್ಲ. ಕೈತುಂಬ ಹಣ ಮತ್ತು ಸಮಯದೊಂದಿಗೆ ಹುಡುಗಿಯರ ಜತೆ ಕಾಲಕಳೆಯುವ ಮೂಲಕ ಜೀವನದ ಅರ್ಥ ಹುಡುಕುತ್ತಾನೆ.ಮೂವರು ಹೆಣ್ಣಿನ ಪಾತ್ರಗಳಾದ ವೇಶ್ಯೆ(ಸ್ಮ್ರಿತಿ ಮಿಶ್ರಾ), ಶಾಲಾ ಬಾಲಕಿ ಮತ್ತು ಶ್ರೀಮಂತ ರೂಪದರ್ಶಿ ಚಿತ್ರಕ್ಕೆ ಸಾಮಾಜಿಕ ಮತ್ತು ಭಾವನಾತ್ಮಕ ಮೆರುಗನ್ನು ನೀಡುತ್ತಾರೆ. ವೈಶಾಲಿ ಆಕರ್ಷಕ, ಹರಿತ ನಾಲಿಗೆಯ ವೇಶ್ಯೆ. ಗ್ರಾಹಕರ ಜತೆ ಭಾವನಾತ್ಮಕ ಸಂಬಂಧ ಬೇಡವೆಂದು ವಾದಿಸುವಾಕೆ.ಶಾಲಾ ಬಾಲಕಿ ಕಿಂಟು(ಇಶಿಟ್ಟ ಶರ್ಮ)ಗೆ ವಯಸ್ಸಿಗೆ ಮೀರಿದ ಬುದ್ಧಿ. ಅಪೂರ್ವನ ಚೇಷ್ಟೆಗಳಿಗೆ ಉದಾಸೀನ ಮನೋಭಾವ. ಇನ್ನೊಬ್ಬಳು ಶ್ರೀಮಂತೆ, ಅಂತಾರಾಷ್ಟ್ರೀಯ ರೂಪದರ್ಶಿಯಾಗುವ ಹೆಬ್ಬಯಕೆ . ಆದರೆ ವಿದ್ಯಾರ್ಥಿ-ರಾಜಕಾರಣಿ ಸಂಜಯನ ವರ್ಚಸ್ಸಿಗೆ ಮಾರುಹೋಗುತ್ತಾಳೆ. ಸ್ನೇಹ, ಪುರುಷ ಸಂಬಂಧ, ವಿಕೃತಕಾಮ, ಪ್ರೀತಿ, ವಂಚನೆ ಎಲ್ಲವನ್ನೂ ದಿಲ್ ದೋಸ್ತಿ ಬಿಚ್ಚಿಡುತ್ತದೆ.