ಕಾಲಿವುಡ್ ಅರಸನಾರು..ಗೆಲವು ಯಾರ ಪಾಲಿಗೆ?
Publish Date: Mon, 09 Dec 2013 (12:56 IST)
Updated Date: Mon, 09 Dec 2013 (12:56 IST)
ಕಾಲಿವುಡ್ ನಲ್ಲಿ 2014 ರಲ್ಲಿ ಎರಡು ಅಪರೂಪದ ಕಲಾವಿದರ ಮಹಾ ಸಂಗ್ರಾಂ ನಡೆಯಲಿದೆ. ಅವರಿಬ್ಬರ ಸ್ಟಾರ್ ಡಂ ಯಾವ ರೀತಿಯಲ್ಲಿದೆ ಎಂಬುದು ಈ ಸಂದರ್ಭದಲ್ಲಿ ತಿಳಿಯುತ್ತದೆ ಎಂಬುದೇ ಈಗ ಕಾಲಿವುಡ್ ನಲ್ಲಿ ಹರಡಿರುವ ಕುತೂಹಲ. ತಮಿಳು ಚಿತ್ರರಂಗದಲ್ಲಿ ನಟ ವಿಜಯ್ ಹಾಗೂ ಅಜಿತ್ ಚಿತ್ರಗಳು ಪ್ರತಿಬಾರಿ ಹೊಸ ರೆಕಾರ್ಡ್ , ಬಾಕ್ಸಾಫೀಸಿನಲ್ಲಿ ಕೊಳ್ಳೆ ಹೊಡೆಯುವುದರಲ್ಲಿ ಸದಾ ಫಸ್ಟ್. ಆದರೇ ಈ ಬಾರಿ ಇಬ್ಬರೂ ಒಟ್ಟಿಗೆ ಕಣಕ್ಕೆ ಇಳಿದಿದ್ದಾರೆ, ಯಾರು ಈ ಸ್ಫರ್ಧೆಯಲ್ಲಿ ಮೇಲುಗೈ ಸಾಧಿಸುತ್ತಾರೋ ಅದೇ ಸದ್ಯದ ಅತ್ಯಂತ ಕುತೂಹಲಕರವಾದ ಸಂಗತಿಯಾಗಿದೆ. ಇವರಿಬ್ಬರ ಫ್ಯಾನ್ ಕ್ಲಬ್ ಸಿಕ್ಕಾಪಟ್ಟೆ ಇದೆ. 10 ಜನವರಿ 2014ರಲ್ಲಿ ವಿಜಯ್ ಮತ್ತು ತಮನ್ನಾ ನಟಿಸಿರುವ 'ವೀರಂ' ಬಿಡುಗಡೆಯಾದರೆ, ಅಜಿತ್ ಮತ್ತು ಕಾಜಲ್ ಅಗರ್ ವಾಲ್ ನಟಿಸಿರುವ 'ಜಿಲ್ಲಾ' ಸಂಕ್ರಾಂತಿ ಸಮಯದಲ್ಲಿ ಬಿಡುಗಡೆ ಆಗುತ್ತಿದೆ. ವಿಜಯ್ ಸಿನಮಾದಲ್ಲಿ ಭಾರತದ ಸೂಪರ್ ಸ್ಟಾರ್ ಹೀರೋ ಮೋಹನ್ ಲಾಲ್ ಸಹ ನಟಿಸುತ್ತಿದ್ದಾರೆ. ಈ ಮೂಲಕ ಇಬ್ಬರು ಮಹಾನಕ್ಷತ್ರಗಳ ನಡುವೆ ಸೂಪರ್ ನೋವ ಸಂಗ್ರಾಮ ನಡೆಯುತ್ತಿದೆ.ವಿಜಯ್ ಸಿನಿಮಾಗಳ ಯಶಸ್ಸು ಗಮನಿಸಿದರೆ ಅಜಿತ್ ಚಿತ್ರಗಳು ಬ್ಲಾಕ್ ಬಸ್ಟರ್ ಕಲೆಕ್ಷನ್ ಪಡೆದಿರುತ್ತದೆ. ಈಗ ಇಬ್ಬರ ಚಿತ್ರಗಳ ಸಂಗ್ರಾಮ ನಡೆಯುತ್ತಿದೆ.ಯಾರಾಗುತ್ತಾರೆ ಕಾಲಿವುಡ್ ಅರಸ! ಗೆಲುವು ಯಾರಿಗೋ?