ಕಾಲಿಗೆ ಏಟು ಮಾಡಿಕೊಂಡ ನಟಿ ಶ್ರೀದೇವಿ
Publish Date: Fri, 02 Aug 2013 (11:28 IST)
Updated Date: Fri, 02 Aug 2013 (11:27 IST)
ಬಾಲಿವುಡ್ನ ಎವರ್ಗ್ರೀನ್ ಬ್ಯೂಟಿ ನಟಿ ಶ್ರೀದೇವಿ. ಅವರ ನಟನಾ ಕೌಶಲ್ಯವನ್ನು ಇಂಗ್ಲೀಷ್ ವಿಂಗ್ಲೀಷ್ ಚಿತ್ರದಲ್ಲಿ ನೀವು ನೋಡೇ ಇರುತ್ತೀರಿ. ಈಗ ಆ ಬ್ಯೂಟಿ ಜಾರಿ ಬಿದ್ದು ಕಾಲು ಮುರಿದುಕೊಂಡಿದ್ದಾರಂತೆ. ಆಕೆಗೆ ಆಗಸ್ಟ್ 13ಕ್ಕೆ ಐವತ್ತು ವರ್ಷ ತುಂಬಲಿದೆಯಂತೆ. ಈ ಖುಷಿಯನ್ನು ಗ್ರಾಂಡ್ ಸೆಲೆಬ್ರೇಷನ್ ಮಾಡಬೇಕು ಎಂದು ಪತಿ ಬೋನಿ ಕಪೂರ್ ಆಲೋಚಿಸಿದ್ದರಂತೆ. ಆದರೆ ಆ ಪ್ಲಾನ್ ಈಗ ತಲೆಕೆಳಗಾಗಿದ್ದು ಆಕೆ ಗ್ರಾಂಡ್ ಹುಟ್ಟುಹಬ್ಬದ ಸೆಲೆಬ್ರೇಷನ್ ಕ್ಯಾನ್ಸಲ್ ಆಗುವುದು ಖಚಿತವಾಗಿದೆ. ಇದೀಗ ಅಮೇರಿಕಾದಲ್ಲಿರುವ ಶ್ರೀದೇವಿ ಮೊಣಗಾಲಿಗೆ ಗಾಯ ಮಾಡಿಕೊಂಡಿರುವುದರಿಂದ ಭಾರತಕ್ಕೆ ಮರಳುವುದು ಮತ್ತಷ್ಟು ತಡವಾಗಲಿದೆಯಂತೆ. ಎಂಆರ್ಐ ಸ್ಕ್ಯಾನ್ ಮಾಡುವಂತೆ ವೈದ್ಯರು ಸೂಚಿಸಿದ್ದಾರಂತೆ.ಆಗಸ್ಟ್ 13ಕ್ಕೆ ಅವರು ಭಾರತಕ್ಕೆ ಮರಳಿ ತಮ್ಮ ಬರ್ತ್‍ಡೇ ಪಾರ್ಟಿಯಲ್ಲಿ ಡಾನ್ಸ್ ಮಾಡಲಿದ್ದಾರೋ ಅಥವಾ ಗಾಲಿಕುರ್ಚಿಯಲ್ಲಿ ಕುಳಿತು ಕ್ಯಾಂಡಲ್ ಬೆಳಗುವ ಅನಿವಾರ್ಯತೆ ಬರಲಿದೆಯೋ ಕಾದು ನೋಡಬೇಕಷ್ಟೇ.