ಶರ್ಲಿನ್ ಚೋಪ್ರ ನಟಿಸಿರುವ ಚಿತ್ರ ಕಾಮ ಸೂತ್ರ ಆಸ್ಕರ್ ಪ್ರಶಸ್ತಿಗೆ ಆಯ್ಕೆ ಆಗಿದೆ. ಇದರ ಚಿತ್ರೀಕರಣ ಆಗುವಾಗ ಕಥೆಯ ಬಗ್ಗೆ ಎಲ್ಲರ ಕಡೆಯಿಂದ ವ್ಯಂಗ್ಯಗಳ ಸುರಿಮಳೆ ಆಗಿತ್ತು. ಇದೊಂದು ಸಿ ಗ್ರೇಡ್ ಚಿತ್ರ ಎನ್ನುವ ಕುಹುಕವು ಸಹ ಎಲ್ಲರಿಂದ ಹೊರ ಬಿದ್ದಿತ್ತು.
ಆದರೆ ಅದ್ಯಾವುದಕ್ಕೂ ಕೇರ್ ಮಾಡದೆ ತಮ್ಮ ಕೆಲಸ ತಾವು ಮಾಡಿ ಈಗ ಆಸ್ಕರ್ ಕಡೆಗೆ ತಮ್ಮ ಚಿತ್ರ ಹೋಗುವಂತೆ ಮಾಡಿದ್ದಾರೆ ನಿರ್ದೇಶಕ ರಮೇಶ್ ಪೌಲ್ . ಈ ಸಿನಿಮಾ ಉತ್ತಮ ಚಿತ್ರ , ಉತ್ತಮ ಸಂಗೀತ ಮತ್ತು ಉತ್ತಮ ಹಾಡುಗಳ ಗುಂಪಿನಲ್ಲಿ ನಾಮಿನೇಟ್ ಆಗಿದೆ. ಈ ಚಿತ್ರ ಅನೇಕ ವಿದೇಶಿ ಚಿತ್ರಗಳ ಎದುರು ಸೆಣಸಾಡ ಬೇಕಿದೆ.
ಎಲ್ಲವು ಸರಿಯಾದರೆ ಭಾರತದ ಚಿತ್ರಕ್ಕೆ ಆಸ್ಕರ್ ಅವಾರ್ಡ್ ದೊರಕುತ್ತದೆ. ಚಿತ್ರಕ್ಕೆ ಸಂಗೀತ ನೀಡಿರುವವರು ಸಚಿತ್ ಮತ್ತು ಶ್ರೀಜಿತ್. ಪಾಲ್ ಸಾಹಿತ್ಯ ಬರೆದಿದ್ದಾರೆ.
ಶರ್ಲಿನ್ ಚೋಪ್ರ ನಟನೆಯ ಚಿತ್ರವಾದ್ದರಿಂದ ಅನೇಕ ಬಗೆಯ ಕುಖ್ಯಾತಿಗೆ ಒಳಗಾಗಿದ್ದ ಈ ಚಿತ್ರವು ಈಗ ಆಸ್ಕರ್ ಕಡೆ ಹೆಜ್ಜೆ ಹಾಕುತ್ತ ಪ್ರಖ್ಯಾತಿ ಪಡೆದಿದೆ. ಇನ್ನುಮುಂದೆ ಶರ್ಲಿನ್ ಚೋಪ್ರ ಧೈರ್ಯವಾಗಿ ಬಟ್ಟೆ ಬಿಚ್ಚಿ ಓಡಾಡಬಹುದು!