Publish Date: Fri, 07 Dec 2007 (12:38 IST)
Updated Date: Fri, 07 Dec 2007 (12:38 IST)
ತಮ್ಮ ಪ್ರಥಮ ನಿರ್ದೇಶನದ ಕಾಬೂಲ್ ಎಕ್ಸ್‌ಪ್ರೆಸ್ ಚಿತ್ರಕ್ಕಾಗಿ ನಿರ್ದೇಶಕ ಕಬೀರ್ ಖಾನ್ ಅವರಿಗೆ ಉತ್ತಮ ನಿರ್ದೇಶಕ ಪ್ರಶಸ್ತಿ ಲಭಿಸಿದೆ. ಸಿಂಗಾಪುರದಲ್ಲಿ ನಡೆದ ಪ್ರಥಮ ಚಿತ್ರಗಳ ಏಶಿಯನ್ ಚಿತ್ರೋತ್ಸವ(ಎಎಫ್ಎಫ್ಎಫ್) ದಲ್ಲಿ ಅವರಿಗದೆ ಈ ಪ್ರಶಸ್ತಿಯನ್ನು ನೀಡಲಾಗಿದೆ.
ವಿಶ್ವದಾದ್ಯಂತ ಈ ಚಿತ್ರವು ಎಲ್ಲರ ಮೆಚ್ಚುಗೆ ಗಳಿಸಿದ್ದು, ಟೊರಂಟೋ, ಪುಸಾನ್, ಕ್ಯಾಸಬ್ಲೇನ್ಸಾ ಮುಂತಾದ ಚಿತ್ರೋತ್ವದಲ್ಲಿ ಪ್ರದರ್ಶನಗೊಳ್ಳಲು ಈ ಚಿತ್ರಕ್ಕೆ ಆಮಂತ್ರಣವನ್ನು ನೀಡಲಾಗಿದೆ.
ಉತ್ತಮ ಚಿತ್ರ್ಕಕ್ಕಾಗಿ ನೀಡುವ ಫೀರಿನ್ ಕರೆಸ್ಪಾಂಡೆನ್ಸ್ ಎಸೋಸಿಯೇಶನ್ ಆರ್ಚಿಡ್ ಪ್ರಶಸ್ತಿಯನ್ನು ಕೂಡಾ ಈ ಚಿತ್ರಕ್ಕೆ ನೀಡಲಾಗಿದ್ದು, ಈ ಪ್ರಶಸ್ತಿಗಾಗಿ 33 ದೇಶಗಳ ಮಾಧ್ಯಮಗಳ ಮೂಲಕ ಈ ಚಿತ್ರವನ್ನು ಆರಿಸಿದ್ದವು.
ಕಬೀರ್ ಖಾನ್ ನಿರ್ದೇಶನದ ಈ ಚಿತ್ರವು ಡಿಸೆಂಬರ್ 2006ರಲ್ಲಿ ಬಿಡುಗಡೆಯಾಗಿತ್ತು. ಜಾನ್ ಅಬ್ರಹಾಂ, ಅರ್ಶದ್ ವಾಸಿ ಮುಂತಾದ ತಾರಗಣವನ್ನು ಹೊಂದಿತ್ತು.