Publish Date: Wed, 06 Nov 2013 (11:21 IST)Updated Date: Wed, 06 Nov 2013 (11:21 IST)
PR
ಕಷ್ಟಗಳು ಸಾಲು ಸಾಲಾಗಿ ಬರೋದು ಅಂದ್ರೆ ಹೀಗೆ ಎಂದು ಕಾಣುತ್ತೆ. 1993ರ ಮುಂಬೈ ಸ್ಫೋಟ ಪ್ರಕರಣ ಸಂಬಂಧ ಪುಣೆಯ ಯೆರವಾಡ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿರುವ ಬಾಲಿವುಡ್ ಪ್ರಖ್ಯಾತ ಕಲಾವಿದ ಸಂಜಯ್ ದತ್ ಈಗ ಇನ್ನೊಂದು ತೊಂದರೆಗೆ ಸಿಲುಕಿದ್ದಾರೆ.
ಸಿನಿಮಾದವರು ಕೂತರೂ, ನಿಂತರೂ ಸುದ್ದಿ ಆಗುತ್ತೆ ಜೈಲಿಗೆ ಹೋಗಿ ಬಂದ್ರೆ ಸುದ್ದಿ ಆಗದೆ ಇರುತ್ತಾ?.ಹೌದು ಈಗ ಆಗಿರುವುದೇ ಅಂತಹ ಕಥೆ. ಬಾಲಿವುಡ್ ನಿರ್ದೇಶಕ ರಾಜಕುಮಾರ್ ಹಿರಾನಿ ಯಾವುದೇ ಅನುಮತಿ ಪಡೆಯದೆ ಅವರು ಸಂಜು ಬಾಬ ಅವರನ್ನು ಭೇಟಿ ಮಾಡಿರುವ ಫೋಟೋ ಮಾಧ್ಯಮಗಳಲ್ಲಿ ಕಾಣಿಸಿದ ಬಗ್ಗೆ ಆಕ್ಷೇಪಿಸಿ ಮಹಾರಾಷ್ಟ್ರ ವಿಚಕ್ಷಣ ಇಲಾಖೆ ವಿಚಾರಣೆಗೆ ಆದೇಶಿಸಿದೆ. ವಿಷಯ ಇಷ್ಟೇ ...
ಸೆ.24ರಂದು ರಾಜಕುಮಾರ್ ಹಿರಾನಿ ಅವರು ಪುಣೆ ಜೈಲಿಗೆ ತೆರಳಿದ್ದರು. ಅಲ್ಲಿ ದತ್ ಅವರು ಜೈಲಿನ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು. ಆ ಸಂದರ್ಭದಲ್ಲಿ ದತ್, ಹಿರಾನಿ ಹಾಗೂ ಜೈಲಿನ ಅಧಿಕಾರಿಗಳು ಗ್ರೂಪ್ ಫೋಟೋ ತೆಗೆಸಿಕೊಂಡಿದ್ದಾರೆ . ಆ ಫೋಟೋ ಮೀಡಿಯಾದವರಿಗೆ ನೀಡಿ ತಮ್ಮ ಮೈಮೇಲೆ ತಾವೇ ಇರುವೆ ಬಿಟ್ಟುಕೊಂಡ್ರು ಜೈಲು ಅಧಿಕಾರಿಗಳು.ಇದು ಈ ಎಲ್ಲ ಸಮಸ್ಯೆಗಳಿಗೂ ಕಾರಣ ಆಗಿದೆ. ಜೈಲಿನ ರೂಲ್ಸ್ ಪ್ರಕಾರ ಕೈದಿ ಮನೆಯವರು ಬಿಟ್ಟು ಯಾರೇ ಭೇಟಿ ಮಾಡ ಬೇಕಾದರೂ ವಿಶೇಷ ಅನುಮತಿ ಪಡಿಬೇಕು. ಸಿನಿಮಾದವರು ತಾವು ಸ್ಪೆಶಲ್ ಅಂತ ಹೋದ್ರೆ ಬಿಡುತ್ತಾ ಕಾನೂನು! ಕಷ್ಟ ಕಷ್ಟ