Publish Date: Sat, 07 Jul 2007 (12:55 IST)
Updated Date: Sat, 07 Jul 2007 (12:55 IST)
ಬಾಲಿವುಡ್ ಸ್ನಿಗ್ಧ ಸುಂದರಿ ದಿಯಾ ಮಿರ್ಜಾ ಮಸಾಲೆ ಚಿತ್ರಗಳಿಂದ ದೂರ ಸರಿಯಲಿದ್ದಾರೆ ಎಂಬ ದುಃಖದ ಸುದ್ದಿ ಬಂದಿದೆ.
ಆದರೆ ಗಂಭಿರ ಕಥಾವಸ್ತು ಹೊಂದಿರುವ ಚಿತ್ರಪ್ರೇಮಿಗಳಿಗೆ ಖುಷಿ ಸುದ್ದಿ. ಇನ್ನು ಮುಂದೆ ದಿಯಾ ಮಿರ್ಜಾ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಮನ್‌ಮೋಹನ್ ಮಹಾಪಾತ್ರ ಅವರ ನಿರ್ದೇಶನದ ಬಿಟ್ಸ್ ಆಂಡ್ ಪೀಸಿಸ್ ಚಿತ್ರದ ಮೂಲಕ ಕಲಾತ್ಮಕ ಚಿತ್ರ ಜಗತ್ತಿಗೆ ಪಾದಾರ್ಪಣೆ ಮಾಡಲಿದ್ದಾರೆ.
ಕಲಾತ್ಮಕ ಚಿತ್ರಗಳಲ್ಲಿ ಅಭಿನಯಿಸಿ ಈಗಾಗಲೆ ಖ್ಯಾತಿ ಪಡೆದಿರುವ ರಾಹುಲ್ ಬೋಸ್ ಅವರೊಂದಿಗೆ ನಟಿಸಲಿದ್ದಾರೆ. ಮಾದ್ಯಮ ಪ್ರತಿನಿಧಿಗಳಿಗೆ ಈ ಕುರಿತು ಮಾಹಿತಿ ನೀಡಿದ ದಿಯಾ ಮಿರ್ಜಾ ಬಾಲಿವುಡ್‌ನ ಮಸಾಲೆ ಚಿತ್ರಗಳಿಂದ ದೂರ ಸರಿಯುತ್ತಿದ್ದು, ಇನ್ನು ಮುಂದೆ ಕಲಾತ್ಮಕ ಚಿತ್ರಗಳಲ್ಲಿ ನಟಿಸುವುದಾಗಿ ಹೇಳಿದ್ದಾರೆ.
ಮಹಾಪಾತ್ರ ನಿರ್ಧೇಶನದ ಬಿಟ್ಸ್ ಆಂಡ್ ಪೀಸಿಸ್ ಚಿತ್ರದಲ್ಲಿನ ತಮ್ಮ ಪಾತ್ರದ ಕುರಿತು ವಿವರ ನೀಡಲು ನಿರಾಕರಿಸಿದರು. ಶೂಟೌಟ್ ಏಟ್ ಲೋಖಂಡವಾಲಾ ಚಿತ್ರದಲ್ಲಿ ವರದಿಗಾರಳ ಪಾತ್ರದಲ್ಲಿ ದಿಯಾ ಕಾಣಿಸಿಕೊಂಡಿದ್ದಾರೆ.
ಪಾತ್ರ ಚಿಕ್ಕದಾಗಿದ್ದರೂ ಪರವಾಗಿಲ್ಲ ಇನ್ನು ಮುಂದೆ ಉತ್ತಮ ಚಿತ್ರಗಳಲ್ಲಿ ಮಾತ್ರ ಅಭಿನಯಿಸಬೇಕೆಂದಿದ್ದೆನೆ. ಪ್ರೇಕ್ಷಕರು ಕೂಡ ನನ್ನನ್ನು ಸಶಕ್ತ ಅಭಿನಯ ಇರುವ ಚಿತ್ರಗಳಿಂದ ಗುರುತಿಸಿದ್ದಾರೆ ವಿನಃ ಮಸಾಲೆ ಚಿತ್ರಗಳಿಂದ ಅಲ್ಲ ಎಂದಿದ್ದಾರೆ. ಕಾಲಾಯ ತಸ್ಮೈ ನಮಃ