Article Bollywood Gossips %e0%b2%95%e0%b2%b0%e0%b3%8d%e0%b2%9c%e0%b3%82%e0%b2%b0%e0%b2%a6%e0%b2%bf%e0%b2%82%e0%b2%a6 %e0%b2%a8%e0%b2%bf%e0%b2%a4%e0%b2%bf%e0%b2%a8%e0%b3%8d %e0%b2%ae%e0%b3%81%e0%b2%96%e0%b3%87%e0%b2%b6%e0%b3%8d %e0%b2%a6%e0%b2%bf%e0%b2%a8%e0%b2%9a%e0%b2%b0%e0%b2%bf 107101000028_1.htm

Daily Horoscope

Select Your Language

Notifications

webdunia
webdunia
webdunia
webdunia

ಕರ್ಜೂರದಿಂದ ನಿತಿನ್ ಮುಖೇಶ್ ದಿನಚರಿ

ನೀಲ್ ನಿತಿನ್ ಮುಖೇಶ್.
IFMIFM
ಕರ್ಜೂರ, ಒಂದು ಲೋಟ ಹಾಲು, ನಾಲ್ಕು ಬಾದಾಮಿ, ವಿಟಮಿನ್ ಮಾತ್ರೆ, ಹಣ್ಣುಗಳು ಮತ್ತು ಟೋಸ್ಟ್‌ನಲ್ಲಿ ಮೊಟ್ಟೆಯಿಂದ ನನ್ನ ದಿನಚರಿ ಆರಂಭವಾಗುತ್ತದೆ ಎನ್ನುತ್ತಾರೆ ಜಾನಿ ಗದ್ದರ್ ಖ್ಯಾತಿಯ ನೀಲ್ ನಿತಿನ್ ಮುಖೇಶ್.ಮಧ್ಯಾಹ್ನದ ಭೋಜನಕ್ಕೆ ದಾಲ್, ರೋಟಿ, ಸಬ್ಜಿ. ಕೆಲವು ವಿವಿಧ ಖಾದ್ಯ ಮನೆಯಲ್ಲಿ ಮಾಡಿದ್ದರೂ ದಾಲ್, ರೋಟಿ, ಸಬ್ಜಿ ಮಾತ್ರ ಅವರಿಗೆ ಬೇಕೆಬೇಕಂತೆ.

ನಾವು ಮುಖೇಶ್ ಮೊಮ್ಮಕ್ಕಳು ಎಂದು ಜನರು ನಮ್ಮತ್ತ ಬೊಟ್ಟು ಮಾಡಿದಾಗ ಮುಖೇಶ್ ಒಳ್ಳೆಯ ವ್ಯಕ್ತಿಯಾಗಿದ್ದರಿಂದ ಜನರು ಹಾಗೆ ಬೊಟ್ಟುಮಾಡುತ್ತಾರೆಂದು ಪಾಪಾ ಹೇಳುತ್ತಿದ್ದರು.. ಆದರೆ ಮುಖೇಶ್ ಸಂಗೀತದ ದಂತಕತೆ ಎಂದು ಪಾಪಾ ನಮಗೆ ತಿಳಿಸಿರಲೇ ಇಲ್ಲ.

ಯಶಸ್ಸಿನ ವ್ಯಾಖ್ಯೆ ನಮಗೆ ಪ್ರೀತಿ ಮತ್ತು ಗೌರವ ತಂದುಕೊಡುವುದೆಂದು ನಾನು ಭಾವಿಸುತ್ತೇನೆ. ನೀವು ಎಷ್ಟೇ ಸಂಪಾದನೆ ಮಾಡಿರಲಿ, ಸದ್ಭಾವನೆಗೆ ಪರ್ಯಾಯವಿಲ್ಲ. ಅದು ನಿಮ್ಮ್ಲಲಿ ಇದ್ದರೆ ಎಲ್ಲವೂ ಹಿಂಬಾಲಿಸುತ್ತದೆ ಎನ್ನುವುದನ್ನು ನನ್ನ ತಂದೆಯಿಂದ ಕಲಿತಿದ್ದಾಗಿ ಅವರು ಹೇಳುತ್ತಾರೆ.

ಈ ಕ್ಷಣವನ್ನು ಅನುಭವಿಸಬೇಕು. ಅದೇ ನನ್ನ ಮಂತ್ರ. ಗತವೈಭವ ನೆನೆಯುವುದು, ಅಥವಾ ಮುಂದಿನ ಕನಸು ಕಾಣುವುದು ಎಲ್ಲವೂ ಸಮಯ ವ್ಯರ್ಥ. ನಾವು ವರ್ತಮಾನದಲ್ಲಿ ಬದುಕಬೇಕು. ಪ್ರತಿಯೊಂದು ಸೆಕೆಂಡ್ ನಮ್ಮ ಕೈತಪ್ಪಿಹೋಗುತ್ತಿದೆ. ನಾನು ದಿನವನ್ನು ವ್ಯರ್ಥಮಾಡದೇ ಪೂರ್ಣವಾಗಿ ಬಳಸಿಕೊಳ್ಳಲು ಯತ್ನಿಸುತ್ತೇನೆಂದು ಅವರು ಹೇಳುತ್ತಾರೆ

Share this Story:

Follow Webdunia kannada